AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡ್ಗಿ ಸಲುವಾಗಿ ಯುವಕನ ಮೇಲೆ ಕ್ರೌರ್ಯ: ಫೇಸ್​ಬುಕ್ ಲೈವ್​​ನಲ್ಲೇ ಮನಸ್ಸೋ ಇಚ್ಛೆ ಹಲ್ಲೆ

ಮಂಡ್ಯದಲ್ಲಿ ಅಪ್ರಾಪ್ತ ಬಾಲಕರ ಕ್ರೌರ್ಯದ ಘಟನೆಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಒಬ್ಬ ಯುವಕನನ್ನು ಏಳೆಂಟು ಅಪ್ರಾಪ್ತರು ಹಲ್ಲೆ ಮಾಡಿ, ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದಾರೆ. ಈ ಘಟನೆ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ಪ್ರಕರಣ ಸಂಬಂಧ ಮಂಡ್ಯದ ಪೂರ್ವ ಠಾಣೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಡ್ಗಿ ಸಲುವಾಗಿ ಯುವಕನ ಮೇಲೆ ಕ್ರೌರ್ಯ: ಫೇಸ್​ಬುಕ್ ಲೈವ್​​ನಲ್ಲೇ ಮನಸ್ಸೋ ಇಚ್ಛೆ ಹಲ್ಲೆ
ಹುಡ್ಗಿ ಸಲುವಾಗಿ ಯುವಕನ ಮೇಲೆ ಕ್ರೌರ್ಯ: ಫೇಸ್​ಬುಕ್ ಲೈವ್​​ನಲ್ಲೇ ಮನಸ್ಸೋ ಇಚ್ಛೆ ಹಲ್ಲೆ
ಪ್ರಶಾಂತ್​ ಬಿ.
| Edited By: |

Updated on: Feb 24, 2025 | 10:34 PM

Share

ಮಂಡ್ಯ, ಫೆಬ್ರವರಿ 24: ಸಕ್ಕರಿನಗರಿ ‌ಮಂಡ್ಯದಲ್ಲಿ ಇತ್ತೀಚಿಗೆ ಪುಡಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪ್ರಾಪ್ತ ಬಾಲಕರ ಕ್ರೌರ್ಯ ಮಂಡ್ಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಯುವತಿಯೊಬ್ಬಳ (girl) ವಿಚಾರವಾಗಿ ಮೀಸೆ ಚಿಗುರದ ಬಾಲಕರು ಅಟ್ಟಹಾಸ ಮೆರೆದಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೀಸೆ ಚಿಗುರದ ಅಪ್ರಾಪ್ತ ಬಾಲಕರ ಕ್ರೌರ್ಯ ಜಿಲ್ಲೆಯ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅಂದಹಾಗೆ ಯುವತಿಯೊಬ್ಬಳ ವಿಚಾರವಾಗಿ ಮಂಡ್ಯದಲ್ಲಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ವಾರ್ ನಡೆದಿದೆ.

ಇದನ್ನೂ ಓದಿ: ವಿಷ ಸೇವಿಸಿ ಬಳಿಕ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವು: ಕಾರಣವೇನು?

ಇದೇ ವಿಚಾರವಾಗಿ ಮಂಡ್ಯದಲ್ಲಿ ಐಟಿಐ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಟೀ ನರಸಿಪುರ ಮೂಲದ 19 ವರ್ಷದ ಯುವಕನೊಬ್ಬನನ್ನ ಸುಮಾರು ಏಳೆಂಟು ಅಪ್ರಾಪ್ತ ಬಾಲಕರು ಮಂಡ್ಯದ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಲಾಂಗ್​ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕುವ ಜೊತೆಗೆ ಫೇಸ್ ಬುಕ್​ ಲೈವ್ ಮಾಡಿದ್ದಾರೆ. ಸಂತ್ರಸ್ತ ಯುವಕ ‌ಪರಿಪರಿಯಾಗಿ ಬೇಡಿಕೊಂಡರು ಬಿಡದ ಅಪ್ರಾಪ್ತರು ಕ್ರೌರ್ಯ ಮೆರೆದಿದ್ದಾರೆ.

ಅಂದಹಾಗೆ ಫೇಸ್ ಬುಕ್​ನಲ್ಲಿ ಲೈವ್ ಆದ ಕ್ರೌರ್ಯದ ವಿಡಿಯೋ ಆನಂತರ ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಮೀಸೆ ಚಿಗುರದ ಅಪ್ರಾಪ್ತರ ಅಟ್ಟಹಾಸ ಬೆಚ್ಚಿ ಜನತೆಯನ್ನ ಬೀಳುವಂತೆ ಮಾಡಿದೆ. ಇನ್ನು ಘಟನೆ ಸಂಬಂಧ ಸಂತ್ರಸ್ತ ಯುವಕ ದೂರು‌ ನೀಡಲು ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರೀತ್ಸೆ…ಪ್ರೀತ್ಸೆ ಎಂದು ವಿವಾಹಿತ ಮಹಿಳೆ ಬಲಿ ಪಡೆದ ಕಾಮಿ

ಪ್ರಕರಣ ಸಂಬಂಧ ಮಂಡ್ಯದ ಪೂರ್ವ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಒಟ್ಟಾರೆ ಜೀವನ, ಕಷ್ಟ ಸುಖ ಅಂದರೆ ಏನು ಎಂದು ತಿಳಿಯದ ಅಪ್ರಾಪ್ತರು ಕ್ರೌರ್ಯದ ಹಾದಿ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್