ಮಂಡ್ಯದಲ್ಲಿ ಲಾಂಗು, ಮಚ್ಚು ಹಿಡಿದು ಅಪ್ರಾಪ್ತ ಬಾಲಕರ ಅಟ್ಟಹಾಸ: ವಿಡಿಯೋ ವೈರಲ್
ಮಂಡ್ಯದ ಹೊರವಲಯದ ಸ್ಮಶಾನದಲ್ಲಿ ಯುವಕನ ಮೇಲೆ ಅಪ್ರಾಪ್ತ ಬಾಲಕರು ಲಾಂಗು ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿದ ಘಟನೆ ವೈರಲ್ ಆಗಿದೆ. ಫೇಸ್‌ಬುಕ್ ಲೈವ್‌ನಲ್ಲಿ ಈ ಹಲ್ಲೆಯನ್ನು ಪ್ರಸಾರ ಮಾಡಲಾಗಿದೆ. ಯುವತಿಯೊಬ್ಬಳ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರನ್ನು ಹುಡುಕುತ್ತಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ, ಫೆಬ್ರವರಿ 24: ಲಾಂಗು, ಮಚ್ಚು ಹಿಡಿದು ಅಪ್ರಾಪ್ತ ಬಾಲಕರು ಅಟ್ಟಹಾಸ ಮೆರೆದಿರುವ ವಿಡಿಯೋ ವೈರಲ್ ಆಗಿದೆ. ಯುವತಿಯೊಬ್ಬಳ ವಿಚಾರವಾಗಿ ಅಪ್ರಾಪ್ತ ಬಾಲಕರು ಯುವಕನೋರ್ವನನ್ನು ಮಂಡ್ಯ ಹೊರವಲಯದ ಸ್ಮಶಾನಕ್ಕೆ ಕರೆತಂದು ಲಾಂಗು, ಮಚ್ಚು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ. ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಫೇಸ್‌ಬುಕ್ ಲೈವ್ ಮಾಡಿದ್ದಾರೆ. ಇನ್ಯಾವತ್ತೂ ಮಂಡ್ಯಕ್ಕೆ ಬರಲ್ಲ ಬಿಟ್ಟುಬಿಡಿ ಎಂದು ಯುವಕ ಬೇಡಿಕೊಂಡರೂ ಬಾಲಕರು ಥಳಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದವರಿಗಾಗಿ ಹುಡುಕಾಟ ನಡಿಸಿದ್ದಾರೆ.