ಪುಣೆಯಲ್ಲಿ ಮತ್ತೊಂದು ಕೆಎಸ್ಸಾರ್ಟಿಸಿ ಬಸ್ಗೆ ಮಸಿ ಬಳಿದ ಉದ್ಧವ್ ಠಾಕ್ರೆ ಶಿವಸೇನೆಯ ಪುಂಡರು
ಬೆಳಗಾವಿಯ ಸಣ್ಣ ಬಾಳೆಕುಂದ್ರಿ ಹೆಸರಿನ ಊರಲ್ಲಿ ಕೆಲ ಮರಾಠಿ ಭಾಷಿಕ ಪುಂಡರು ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರೊಬ್ಬರ ಮೇಲೆ ಹಲ್ಲೆ ನಡೆಸಿದ ಬಳಿಕ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್ಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಹಾಗೆ ಕರ್ನಾಟಕದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರೂ ಮಾಡಬಲ್ಲರು. ಆದರೆ ಕನ್ನಡಿಗರು ಶಾಂತಿಪ್ರಿಯರು ಮತ್ತು ಅವರಂತೆ ಮೂರ್ಖರಲ್ಲ.
ಪುಣೆ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕಾರ್ಯಕರ್ತರು ಮತ್ತೊಮ್ಮೆ ಗೂಂಡಾಗಿರಿ ಪ್ರದರ್ಶಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದಕ್ಕೆ ಕಪ್ಪು ಮಸಿ ಬಳಿದು ‘ಪೌರುಷ’ ಮೆರೆದಿದ್ದಾರೆ. ಸಿಂದಗಿ-ಪುಣೆ ಬಸ್ಸನ್ನು ಪುಣೆ ನಗರದ ಸ್ವಾರ್ ಗೇಟ್ ಬಳಿ ತಡೆದ ಶಿವಸೇನೆಯ ಪುಂಡರು ವಯಸ್ಸಾಗಿರುವ ಬಸ್ಸಿನ ಡ್ರೈವರ್ಗೆ ಮರಾಠಿ ಭಾಷೆಯಲ್ಲಿ ಬೆದರಿಕೆಯನ್ನೂ ಒಡ್ಡಿದ್ದಾರೆ. ಬಸ್ಸು ಮತ್ತು ಅದರೊಳಗಿದ್ದ ಪ್ರಯಾಣಿಕರ ಹಲ್ಲೆ ಮಾಡಿಯಾರು ಎಂಭ ಭಯಕ್ಕೆ ಡ್ರೈವರ್ ಪುಂಡರ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಾರೆ. ಅವರು ಮರಾಠಿಯಲ್ಲಿ ಮಾತಾಡಿರದಿದ್ದರೆ ಅವರ ಮೇಲೆ ಹಲ್ಲೆ ಮಾಡಲೂ ಗೂಂಡಾಗಳು ಪ್ರಾಯಶಃ ಹೇಸಿರಲಾರರು. ಕರ್ನಾಟಕ ಸರ್ಕಾರ ಶೀಘ್ರವಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತಾಡಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ