ಶುಭ್ಮನ್ ಗಿಲ್ನ ಕೆಣಕಿದ ಪಾಕ್ ಬೌಲರ್ನ ಅಭಿನಂದಿಸಿದ ವಿರಾಟ್ ಕೊಹ್ಲಿ..!
India vs Pakistan: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 241 ರನ್ ಕಲೆಹಾಕಿದರೆ, ಭಾರತ ತಂಡವು ಈ ಗುರಿಯನ್ನು ಕೇವಲ 42.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 6 ವಿಕೆಟ್ಗಳ ಗೆಲುವು ದಾಖಲಿಸಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಜಿದ್ದಾಜಿದ್ದಿನ ಹೋರಾಟ ನಡುವೆ ವಿರಾಟ್ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಅದು ಸಹ ಎದುರಾಳಿ ತಂಡದ ಯುವ ಬೌಲರ್ನನ್ನು ಅಭಿನಂದಿಸುವ ಮೂಲಕ ಎಂಬುದೇ ವಿಶೇಷ. ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 241 ರನ್ಗಳಿಸಿ ಆಲೌಟ್ ಆಗಿತ್ತು.
242 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಆದರೆ ಯುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮಾತ್ರ ಭಾರತೀಯ ಬ್ಯಾಟರ್ಗಳನ್ನು ಕಾಡಿದ್ದರು.
ಅದರಲ್ಲೂ ಶುಭ್ಮನ್ ಗಿಲ್ ಅವರನ್ನು ಮಿಸ್ಟರಿ ಸ್ಪಿನ್ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದರು. ಇತ್ತ ವಿರಾಟ್ ಕೊಹ್ಲಿ ಕೂಡ ಅಬ್ರಾರ್ ಎಸೆತಗಳನ್ನು ಎದುರಿಸಲು ಕೆಲ ಕಾಲ ತಡಕಾಡಿದ್ದರು.
ಅಂತಿಮವಾಗಿ ಅಬ್ರಾರ್ ಅಹ್ಮದ್ 10 ಓವರ್ಗಳಲ್ಲಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿದರು. ಅಬ್ರಾರ್ ಅವರ ಹತ್ತು ಓವರ್ ಪೂರ್ಣಗೊಳ್ಳುತ್ತಿದ್ದಂತೆ ಪಾಕ್ ಸ್ಪಿನ್ನರ್ನ ಬಳಿ ತೆರಳಿದ ವಿರಾಟ್ ಕೊಹ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿರಾಟ್ ಕೊಹ್ಲಿಯ ಈ ಕ್ರೀಡಾಸ್ಪೂರ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಅಂದಹಾಗೆ ಇದೇ ಪಂದ್ಯದಲ್ಲಿ ಅಬ್ರಾರ್ ಅಹ್ಮದ್ ಶುಭ್ಮನ್ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಪೆವಿಲಿಯನ್ಗೆ ನಡಿ ಎಂದು ಕಣ್ ಸನ್ನೆ ಮಾಡಿದ್ದರು. ಇಂತಹದೊಂದು ಬೀಳ್ಕೊಡುಗೆಯನ್ನು ನಿರೀಕ್ಷಿಸದಿದ್ದ ಗಿಲ್ ಗುರಾಯಿಸುತ್ತಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಇದಾಗ್ಯೂ ವಿರಾಟ್ ಕೊಹ್ಲಿ ಯುವ ಸ್ಪಿನ್ನರ್ನ ಪ್ರದರ್ಶನವನ್ನು ಪಂದ್ಯದ ನಡುವೆಯೇ ಶ್ಲಾಘಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ಧಾರೆ.
Published on: Feb 24, 2025 11:32 AM
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್ಗೆ ಸೂಚನೆ

