AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ ಮೇಲೆ ಅನುಮಾನ: ಸಂತೆಯಿಂದ ಮಚ್ಚು ತಂದು ಸಿನಿಮೀಯವಾಗಿ ಮೂವರ ಹತ್ಯೆ ಮಾಡಿದ ವ್ಯಕ್ತಿ

ಆತ ಮೊದಲ ಪತ್ನಿಯನ್ನು ಬಿಟ್ಟು ಗಂಡ ಬಿಟ್ಟಿದ್ದಾಕೆಯ ಜೊತೆ ಸೇರಿದ್ದ. ಆಕೆಗೆ ಮಗಳಿದ್ದ ವಿಚಾರ ಗೊತ್ತಿದ್ದರೂ ಸಹಜೀವನ (ಲಿವ್ ಇನ್ ರಿಲೇಷನ್​ಶಿಪ್) ನಡೆಸುತ್ತಿದ್ದ. ಹೀಗಿರುವಾಗಲೇ ಎರಡನೇ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನದ ಭೂತ ಆತನಿಗೆ ಕಾಡಿದೆ. ಜೊತೆಗೆ ಮಗಳ ಮೇಲೂ ಅನುಮಾನ ಬಂದಿದೆ. ಅನುಮಾನದ ಹುತ್ತದಲ್ಲಿದ್ದ ಆತ ಎಸಗಿದ ಕೃತ್ಯ ಮಾತ್ರ ಭಯನಾಕ. ಬೆಂಗಳೂರಿನ ಪೀಣ್ಯದಲ್ಲಿ ನಡೆದ ತ್ರಿವಳಿ ಕೊಲೆಯ ವಿವರ ಇಲ್ಲಿದೆ.

ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ ಮೇಲೆ ಅನುಮಾನ: ಸಂತೆಯಿಂದ ಮಚ್ಚು ತಂದು ಸಿನಿಮೀಯವಾಗಿ ಮೂವರ ಹತ್ಯೆ ಮಾಡಿದ ವ್ಯಕ್ತಿ
ಸಾಂದರ್ಭಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Edited By: |

Updated on: Jan 10, 2025 | 9:09 AM

Share

ಬೆಂಗಳೂರು, ಜನವರಿ 10: ನಗರದ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರಿಗೆ ಶರಣಾಗಿದ್ದ ಆರೋಪಿ ಗಂಗರಾಜುವನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಒಂದೊಂದೇ ಭಯಾನಕ ಅಂಶಗಳು ಹೊರಬರುತ್ತಿವೆ. ಇದರೊಂದಿಗೆ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಕೂಡ ದೊರೆತಂತಾಗಿದೆ. ಅಸಲಿಗೆ ಗಂಗರಾಜು ಕೊಲೆ ಮಾಡಿದ್ದು ಎರಡನೇ ಪತ್ನಿಯನ್ನಲ್ಲ, ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯನ್ನು ಹಾಗೂ ಆಕೆಯ ಮಗಳನ್ನು ಎಂಬುದು ಗೊತ್ತಾಗಿದೆ.

ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಭಾಗ್ಯಮ್ಮ ಮತ್ತು ಗಂಗರಾಜು ಲಿವಿಂಗ್ ಇನ್ ರಿಲೇಷನಲ್ಲಿದ್ದರು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ದರೂ ಕೂಡಾ ಒಟ್ಟಿಗೆ ಜೀವನ ಮಾಡಲು ಆರೋಪಿ ಒಪ್ಪಿದ್ದ. ಆದರೆ, ಇತ್ತೀಚೆಗೆ ಭಾಗ್ಯಮ್ಮ ಸೇರಿ ಹೆಣ್ಣುಮಕ್ಕಳ ಮೇಲೂ ಸಾಕಷ್ಟು ಅನುಮಾನ ಪಡುತ್ತಿದ್ದ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಮಲತಂದೆಯೇ ಅನುಮಾನ ಪಟ್ಟಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ರೈತರ ಸಂತೆಯಿಂದ ಮಚ್ಚು ಖರೀದಿಸಿ ತಂದು ಕೊಲೆ

ಇತ್ತೀಚೆಗೆ ಮನೆಗೆ ಬಂದಿದ್ದ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ‌ ಹೆಸರಘಟ್ಟಕ್ಕೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ಮಚ್ಚು ಖರೀದಿ‌ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನು 500 ರೂಪಾಯಿ ಕೊಟ್ಟು ನೇರವಾಗಿ ಮನೆಗೆ ತಂದಿದ್ದ. ಬಳಿಕ ಮೂವರನ್ನು ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಕೂಡಾ ಮಾಡಿಕೊಂಡಿದ್ದ.

ಪತ್ನಿ ಮನೆಯಲ್ಲಿ ಇಲ್ಲದನ್ನು ಮೊದಲೇ ತಿಳಿದಿದ್ದ ಆರೋಪಿ ಒಬ್ಬೊಬ್ಬರನ್ನೇ ಕೊಲೆ ಮಾಡಲು ಸಂಚು ಹೂಡಿದ್ದನಂತೆ. ಸಂತೆಯಿಂದ ಮನೆಗೆ ಬರುತ್ತುದ್ದಂತೆಯೇ ಮತ್ತೆ ಗಲಾಟೆ ತೆಗೆದು ಮೊದಲು ಮಲ ಮಗಳಾದ ನವ್ಯಾಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಬಳಿಕ ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿ ಇಬ್ಬರ ರುಂಡ ಮುಂಡ ಬೇರ್ಪಡಿಸಿ ಬಿಸಾಡಿದ್ದಾನೆ.

ಇಷ್ಟಲ್ಲದೆ ಮನೆಯಲ್ಲೇ ಇಬ್ಬರನ್ನ ಕೊಂದು ಮನೆಯಲ್ಲಿ ಪತ್ನಿಗಾಗಿ ಬಾಗಿಲ ಹಿಂದೆ ಆರೋಪಿ ಗಂಗರಾಜು ಹೊಂಚು ಹಾಕಿ ಕುಳಿತಿದ್ದಾನೆ. ಅಷ್ಟರಲ್ಲಿ ಪತ್ನಿ ಮನೆಗೆ ಬಂದಿದ್ದು, ರಕ್ತದ ಮದ ಮಡುವಿನಲ್ಲಿದ್ದ ಮಗಳ ನೋಡಿ ಕಿರುಚಾಡಿದ್ದಾಳೆ. ಅಷ್ಟರಲ್ಲಿ ಪತ್ನಿಯ ಮೇಲೂ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಸಾಲ ಮರುಪಾವತಿಸದ ಹಿನ್ನಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು

ಆರೋಪಿಯು ಆರು ವರ್ಷಗಳಿಂದ ಮೃತಳ ಜೊತೆಗೆ ಇದ್ದಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ಆದರೆ, ಆಕೆಯ ಮೇಲಿನ ಅನುಮಾನದಿಂದಲೇ ಆತ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು