ಜೋಡಿ ಕೊಲೆಗೆ ಬೆಚ್ಚಿಬಿದ್ದ ಬೆಳಗಾವಿ: ಪ್ರೀತಿಗೆ ಅಡ್ಡಬಂದ ಪ್ರೇಯಸಿಯ ತಾಯಿ, ಮಗನ ಹತ್ಯೆ

ಪ್ರೀತಿಗೆ ವಿರೋಧಿಸಿದ್ದಕ್ಕೆ ಯುವತಿಯ ತಾಯಿ ಮತ್ತು ಸಹೋದರನ ಹತ್ಯೆ ಮಾಡಿರುವಂತಹ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಡೆದಿದೆ. ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಸಂಬಂಧ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಜೋಡಿ ಕೊಲೆಗೆ ಬೆಳಗಾವಿ ಬೆಚ್ಚಿಬಿದ್ದಿದೆ.

ಜೋಡಿ ಕೊಲೆಗೆ ಬೆಚ್ಚಿಬಿದ್ದ ಬೆಳಗಾವಿ: ಪ್ರೀತಿಗೆ ಅಡ್ಡಬಂದ ಪ್ರೇಯಸಿಯ ತಾಯಿ, ಮಗನ ಹತ್ಯೆ
ಜೋಡಿ ಕೊಲೆಗೆ ಬೆಚ್ಚಿಬಿದ್ದ ಬೆಳಗಾವಿ: ಪ್ರೀತಿಗೆ ಅಡ್ಡಬಂದ ಪ್ರೇಯಸಿಯ ತಾಯಿ, ಮಗನ ಹತ್ಯೆ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2024 | 5:20 PM

ಬೆಳಗಾವಿ, ಡಿಸೆಂಬರ್​ 05: ಕೊವಿಡ್​ನಲ್ಲಿ ಮನೆ ಯಜಮಾನ ಸಾವನ್ನಪ್ಪುತ್ತಾರೆ. ಇಬ್ಬರು ಮಕ್ಕಳನ್ನ ಕಟ್ಟಿಕೊಂಡು ತಾಯಿ ಜೀವನ ನಡೆಸುತ್ತಿರುತ್ತಾರೆ. ಗಂಡು ದಿಕ್ಕಿಲ್ಲದ ಮನೆಗೆ ಅವನೊಬ್ಬ ಸಹಾಯ ಮಾಡುವ ನೆಪದಲ್ಲಿ ಮನೆಗೆ ಎಂಟ್ರಿಯಾಗುತ್ತಾರೆ. ಹೀಗೆ ಬಂದವನು ಇಡೀ ಮನೆಯನ್ನೇ ಸರ್ವನಾಶ ಮಾಡಿ, ತಾಯಿ ಮಗನನ್ನ ಕೊಂದು (kill) ರಣಕೇಕೆ ಹಾಕಿದ್ದಾರೆ. ಅಷ್ಟಕ್ಕೂ ಆ ಮನೆಯಲ್ಲಿ ನಿನ್ನೆ ರಾತ್ರಿ ಆಗಿದ್ದೇನೂ? ಆಪ್ತನಂತಿದ್ದವನೂ ಕೊಲೆ ಮಾಡಲು ಕಾರಣವೇನು ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರವಿದೆ ಓದಿ.

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಒಂದಲ್ಲಾ ಜೋಡಿ ಕೊಲೆ ಆಗಿದ್ದು, ಇದರಿಂದ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ತಾಯಿ ಮಂಗಲಾ ನಾಯಕ್(45), ಪುತ್ರ ಪ್ರಜ್ವಲ್ ನಾಯಕ್(18) ಕೊಲೆಯಾದ ದುರ್ದೈವಿಗಳು.

ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ

ಎಂದಿನಂತೆ ನಿನ್ನೆ ರಾತ್ರಿ ತಾಯಿ ಮಂಗಲಾ, ಮಗ ಪ್ರಜ್ವಲ್ ಹಾಗೂ ಮಗಳು ಊಟ ಮಾಡಿ ಮಲಗಲು ಮುಂದಾಗಿದ್ದಾರೆ. ಈ ವೇಳೆ ಅದೊಬ್ಬ ಗೆಳೆಯನ ಜೊತೆಗೆ ಮನೆಗೆ ಎಂಟ್ರಿಯಾಗಿದ್ದಾನೆ. ಹೀಗೆ ಹೊರಗಿನಿಂದ ಒಳಗೆ ಬಂದವನೇ ಎದುರಿಗೆ ಬಂದ ಮಂಗಲಾ ಮೇಲೆ ರಾಡ್​ನಿಂದ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಈ ವೇಳೆ ತಾಯಿ ಜೀವ ಉಳಿಸಲು ಬಂದ ಮಗನ ಮೇಲೆಯೂ ಅಮಾನುಷವಾಗಿ ಹಲ್ಲೆ ಮಾಡಿ, ರಾಡ್​ನಿಂದಲೇ ಕೊಚ್ಚಿ ಕೊಂದೇ ಬಿಟ್ಟಿದ್ದಾನೆ.

ಇದನ್ನೂ ಓದಿ: ಪುಡಿಗಾಸಿಗಾಗಿ ಯುವಕನನ್ನು ಕಿಡ್ನ್ಯಾಪ್​ ಮಾಡಿ ಕೊಲೆ: ಬರೊಬ್ಬರಿ 40 ದಿನಗಳ ಬಳಿಕ ಆರೋಪಿಗಳು ಅಂದರ್

ತಾಯಿ, ಮಗ ಜೀವ ಉಳಿಸಿಕೊಳ್ಳಲು ಇಡೀ ಮನೆ ಸುತ್ತ ಓಡಾಡಿದ್ರೂ ಬಿಡದ ವ್ಯಕ್ತಿ ಕೊಂದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಕರೆಯಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ ತಾಯಿ, ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದು ಗೊತ್ತಾಗುತ್ತೆ. ಕೂಡಲೇ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿ ಸ್ಥಳ ಪರಿಶೀಲನೆ ಮಾಡಿ ಶವವನ್ನ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸುತ್ತಾರೆ.

ಯುವತಿ ಕಾಣೆ

ಇನ್ನೂ ಜೋಡಿ ಕೊಲೆಯಿಂದ ಶಾಕ್​ನಲ್ಲಿದ್ದ ಪೊಲೀಸರು ಅಕ್ಕಪಕ್ಕದ ಮನೆಯವರಿಂದ ಮಾಹಿತಿ ಪಡೆದಿದ್ದರು. ಈ ವೇಳೆ ಮತ್ತೊಂದು ಶಾಕಿಂಗ್ ಅಂಶ ಬೆಳಕಿಗೆ ಬಂದಿತ್ತು. ಅದುವೇ ಮನೆಯಲ್ಲಿದ್ದ ಹೆಣ್ಣು ಮಗಳು ಕಾಣಿಸದಿರುವುದು. ಹೌದು ಇಲ್ಲಿ ಇಬ್ಬರನ್ನ ಕೊಂದ ಪಾಪಿಗಳು ಬಳಿಕ ಅಪ್ರಾಪ್ತಳನ್ನ ಕರೆದುಕೊಂಡು ಹೋಗಿರುವ ವಿಚಾರ ಸ್ಥಳೀಯರು ತಿಳಿಸಿದ್ದಾರೆ. ಈ ಕಾರಣಕ್ಕೆ ಕೂಡಲೇ ನಾಲ್ಕು ತಂಡ ಮಾಡಿದ ಪೊಲೀಸರು ಮಹಾರಾಷ್ಟ್ರ ಸೇರಿ ಬೇರೆ ಬೇರೆ ಕಡೆಗಳಿಗೆ ಟೀಮ್​ಗಳನ್ನ ಕಳುಹಿಸಿ ಮಧ್ಯರಾತ್ರಿಯೇ ಶೋಧ ಕಾರ್ಯ ಶುರು ಮಾಡಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ಮನೆ ಕಡೆ ಓಡಾಡಿದ್ದವರ ಗುರುತನ್ನ ಸ್ಥಳೀಯರು ಪೊಲೀಸರಿಗೆ ಹೇಳುತ್ತಾರೆ. ಆ ಆಧಾರದ ಮೇಲೆ ಇದೇ ಗ್ರಾಮದ ಲೋಕೇಶ್ ನಾಯಕ್ ಎಂಬಾತನ ಮನೆಗೆ ಒಂದು ಪೊಲೀಸ್ ಟೀಮ್ ಹೋಗುತ್ತೆ. ಈ ವೇಳೆ ಆತ ಮನೆಯ ಹೊರಗೆ ಬೆಂಕಿ ಕಾಯಿಸುತ್ತಾ ಕುಳಿತಿದ್ದವನನ್ನ ಹಿಡಿಯಲು ಮುಂದಾಗಿದ್ದಾರೆ. ಪೊಲೀಸರು ಬಂದಿದ್ದನ್ನ ನೋಡಿದ ಲೋಕೇಶ್ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಆತನನ್ನ ಹಿಡಿದು ವಿಚಾರಣೆ ನಡೆಸಿದಾಗ ರವಿ ಖಾನಾಪಗೋಳ ಬಂದಿದ್ದ ವಿಚಾರ ಹೇಳ್ತಾನೆ. ಜೊತೆಗೆ ಮನೆಯ ಬಳಿ ಆತನ ಬೈಕ್ ಬಿಟ್ಟು ತನ್ನ ಬೈಕ್ ತೆಗೆದುಕೊಂಡು ಚಂದಗಡಕ್ಕೆ ಹೋಗಿದ್ದಾಗಿ ಹೇಳ್ತಾನೆ.

ಸತ್ಯ ಬಾಯ್ಬಿಟ್ಟ ಆರೋಪಿ

ಇತ್ತ ಹೊತ್ತಿದ ಬೆಂಕಿಯಲ್ಲಿ ಬಟ್ಟೆಗಳನ್ನ ಸುಡ್ತಿರುವುದು ಹಾಗೂ ಆತನ ಚಪ್ಪಲಿ ಮೇಲೆ ರಕ್ತ ಬಿದ್ದಿರುವುದನ್ನ ಕಂಡ ಪೊಲೀಸರು ಕೂಡಲೇ ಆತನನ್ನ ಹಿಡಿದು ತಂದು ತೀವ್ರ ವಿಚಾರಣೆ ನಡೆಸಿ ಸತ್ಯ ಬಾಯಿ ಬಿಡಸ್ತಾರೆ. ಇನ್ನೊಂದು ಕಡೆ ರವಿ ಖಾನಾಪಗೋಳ ಮನೆ ಕೂಡ ಇದೇ ಊರಲ್ಲಿದ್ದ ಆತನ ಮನೆಗೆ ಮತ್ತೊಂದು ತಂಡ ಹೋಗಿ ನೋಡಿದಾಗ ಆತ ಮನೆಯಲ್ಲೇ ಇರೋದು ಗೊತ್ತಾಗಿ ಎಲ್ಲ ಕಡೆಯಿಂದ ಸುತ್ತುವರೆದು ಆತನನ್ನ ಹಿಡಿಯುವಲ್ಲಿ ಯಶಸ್ವಿಯಾಗ್ತಾರೆ.

ಆತನ ಮನೆ ತಪಾಸಣೆ ನಡೆಸಿದಾಗ ಅಲ್ಲಿ ಅಪ್ರಾಪ್ತ ಬಾಲಕಿ ಇದ್ದು ಆಕೆಯನ್ನ ರಕ್ಷಣೆ ಮಾಡಿಕೊಂಡು ಬರ್ತಾರೆ. ಠಾಣೆಗೆ ತಂದು ರವಿಯನ್ನ ವಿಚಾರಣೆ ನಡೆಸಿದಾಗ ಅಪ್ರಾಪ್ತಳ ಜೊತೆಗೆ ಮದುವೆಗೆ ಆಕೆಯ ತಾಯಿ ಒಪ್ಪಿರಲಿಲ್ಲ. ಅಂದಿನಿಂದ ಆಕೆಯ ಮೇಲೆ ಕೋಪವಿತ್ತು. ನಿನ್ನೆ ಹುಡುಗಿ ಜೊತೆಗೆ ಜಗಳ ಮಾಡಿಕೊಂಡಿದ್ದು ಆಕೆ ಪೋನ್ ಮಾಡಿ ಹೇಳ್ತಾಳೆ. ಈ ವೇಳೆ ಆಕೆಯನ್ನ ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ಆಕೆಯ ಬಳಿ ಹೋಗಿದ್ದು, ಅಡ್ಡ ಬಂದ ತಾಯಿ, ತಮ್ಮನನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಆರೋಪಿ ರವಿ.

ಇದನ್ನೂ ಓದಿ: ತಮ್ಮನನ್ನು ಬರ್ಬರವಾಗಿ ಕೊಂದು ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಅಣ್ಣ!

ಇನ್ನೂ ತಾಯಿ ಮದುವೆಗೆ ಒಪ್ಪಲಿಲ್ಲ, ಬೈಯ್ದು ಬುದ್ದಿವಾದ ಹೇಳಿದ್ದನ್ನ ಫೋನ್ ಮಾಡಿ ಹೇಳಿ ಪಾಪಿ ರವಿಯನ್ನ ಕರೆಯಿಸಿಕೊಂಡಿದ್ದಾಳೆ. ತನಗಿಂತ 15 ವರ್ಷ ದೊಡ್ಡವನ ಮದುವೆಯಾಗಲು ಮುಂದಾಗಿದ್ದಕ್ಕೆ ಹೆತ್ತ ತಾಯಿ ಹಾಗೂ ಒಡ ಹುಟ್ಟಿದ ತಮ್ಮನ ಸಾವಿಗೆ ಕಾರಣವಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೇಸ್​ನಲ್ಲಿ ಆಕೆಯದ್ದು ಏನಾದ್ರೂ ಪಾತ್ರ ಇದೆಯಾ ಅನ್ನೋ ಆಯಾಮದಲ್ಲಿ ತನಿಖೆ ಮಾಡ್ತಿದ್ದಾರೆ. ಅದೇನೆ ಇರಲಿ ಪ್ರೀತಿಗಾಗಿ ಇಲ್ಲಿ ಎರಡು ಜೀವ ಹೋಗಿದ್ರೇ ತಿಳಿಯದ ವಯಸ್ಸಲ್ಲಿ ಪ್ರೀತಿ ಅಂತಾ ಹೋದಾಕೆ ಇದೀಗ ಅವನು ಇಲ್ಲ, ಅಮ್ಮ-ತಮ್ಮನೂ ಇಲ್ಲದೇ ಬೀದಿಗೆ ಬಂದಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ