ಸಿನಿಮಾ ಶೈಲಿಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದವ ಸಿಕ್ಕಿಬಿದ್ದ: ಸೀನಿಮಿಯ ರೀತಿ ಬೆನ್ನಟ್ಟಿ ಹಿಡಿದ ಪೊಲೀಸ್ರು
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಿನಿಮಾ ಶೈಲಿಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 16 ಲಕ್ಷ ರೂ. ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಖದೀಮ ಬುಲೆರೋ ವಾಹನದಲ್ಲಿ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಪೊಲೀಸರ ತೀಕ್ಷ್ಣ ಕಾರ್ಯಾಚರಣೆಯಿಂದ ಅಪರಾಧಿಯನ್ನು ಬಂಧಿಸಲಾಗಿದೆ.
ಬೀದರ್, ಡಿಸೆಂಬರ್ 05: ಸಿನಿಮಾ ಶೈಲಿಯಲ್ಲಿ ಬುಲೆರೋ ವಾಹನದಲ್ಲಿ ಶ್ರೀಗಂಧ (Sandalwood) ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ನಡೆದಿದೆ. ಬಂಧಿತನಿಂದ 16 ಲಕ್ಷ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ತುಂಡು ವಶಕ್ಕೆ ಪಡೆಯಲಾಗಿದೆ.
ಆತ ಸಿನಿಮಾ ಸ್ಟೈಲಿನಲ್ಲಿ ಶ್ರೀಗಂಧ ಮರದ ತುಂಡುಗಳನ್ನ ಕತ್ತರಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೂಡಬಿ ಕ್ರಾಸ್ ಬಳಿ ನವೆಂಬರ್ 28 ರಂದು ಸಂಜೆ 04:30 ರ ಸುಮಾರಿಗೆ ಬುಲೆರೋ ವಾಹನದಲ್ಲಿ ಸುಮಾರು 100 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನ ಯಾವುದೇ ಪರವಾನಿಗೆ ಇಲ್ಲದೆ ಖದೀಮ ಸಾಗಾಟ ಮಾಡುತ್ತಿದ್ದ. ವಿಷಯ ತಿಳಿದು ಪೊಲೀಸರು ದಾಳಿ ಮಾಡಿ ಶ್ರೀಗಂಧ ಸಮೇತ ಖದೀಮರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಜೋಡಿ ಕೊಲೆಗೆ ಬೆಚ್ಚಿಬಿದ್ದ ಬೆಳಗಾವಿ: ಪ್ರೀತಿಗೆ ಅಡ್ಡಬಂದ ಪ್ರೇಯಸಿಯ ತಾಯಿ, ಮಗನ ಹತ್ಯೆ
ಖದೀಮರು ಶ್ರೀಗಂಧದ ಮರಕ್ಕೆ ಕನ್ನ ಹಾಕಿ, ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದಾರೆ. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಖದೀಮನ ಪ್ಲ್ಯಾನ್ ತಲೆಕೆಳಗಾಗುವಂತೆ ಮಾಡಿದ್ದು, ಮಾಲ್ ಸಮೇತ ಕಳ್ಳನ್ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈಗೆ ಶ್ರೀಗಂಧದ ತುಂಡುಗಳ ಸಾಗಾಟ
ಇನ್ನು ಖದೀಮ ಅಕ್ರಮವಾಗಿ ತುಂಬಿದ ಶ್ರೀಗಂಧದ ಮರದ ತುಂಡುಗಳು ಯಾರಿಗೂ ಕಾಣಬಾರದು ಎಂದು ವಾಹನ ಹಿಂಬದಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ, ಅಲ್ಲಿ ಶ್ರೀಗಂಧ ಮರದ ತುಂಡುಗಳನ್ನ ತುಂಬಿದ್ದ ನಂತರ ಅದೇ ವಾಹನದಲ್ಲಿ ತರಕಾರಿಯನ್ನ ತುಂಬಿಸಿಕೊಂಡು, ಹೈದ್ರಾಬಾದ್ನಿಂದ ಬಸವಕಲ್ಯಾಣ ಮಾರ್ಗವಾಗಿ ಮುಂಬೈಗೆ ಶ್ರೀಗಂಧದ ತುಂಡುಗಳನ್ನ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದಿದ್ದಾನೆ.
ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ಒಂದೇ ದಿನ ಮೂರು ಮನೆ ಕಳ್ಳತನವಾಗಿದ್ದವು. ಮೂರು ಮನೆಯಲ್ಲಿನ 200 ಗ್ರಾಮ್ ಬಂಗಾರ, 1200 ಗ್ರಾಮ್ ಬೆಳ್ಳಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಓರ್ವ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಬಂಧಿತನಿಂದ 28 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿಯ ಅಭರಣ ಜಪ್ತಿ ಮಾಡಲಾಗಿದೆ.
ಮೂವರು ಕಳ್ಳಿಯರ ಬಂಧನ
ಮಹಿಳಾ ಪ್ರಯಾಣಿಕರ ಬ್ಯಾಗ್ನಿಂದ ಹಣ, ಬಂಗಾರ ಕದಿಯುತ್ತಿದ್ದ ಕಳ್ಳಿಯರನ್ನು ಬಂಧಿಸಲಾಗಿದೆ. ಪ್ರಯಾಣಿಕರು ಜಾಸ್ತಿಯಿರುವ ಬಸ್ನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಮಹಿಳೆಯರ ಬ್ಯಾಗ್ ಕಟ್ ಮಾಡಿ ಹಣ ಒಡವೆ ಕದಿಯುತ್ತಿದ್ದರು.
ಇದನ್ನೂ ಓದಿ: ಪುಡಿಗಾಸಿಗಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ: ಬರೊಬ್ಬರಿ 40 ದಿನಗಳ ಬಳಿಕ ಆರೋಪಿಗಳು ಅಂದರ್
ಪುಣೆ ಮೂಲದ ಇಬ್ಬರು, ಕಲಬುರಗಿ ಮೂಲದ ಮೂವರು ಕಳ್ಳಿಯರನ್ನು ಬಂಧಿಸಲಾಗಿದೆ. ಬಂಧಿತ ಕಳ್ಳಿಯರಿಂದ ನಾಲ್ಕು ಲಕ್ಷ 28 ಸಾವಿರ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ. ಮನ್ನಾಖೇಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Thu, 5 December 24