ಬಳ್ಳಾರಿಯ ಬಿಮ್ಸ್​ನಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಸಾವು!

ಗಂಡು ಮಗು ಜನಿಸಿತು ಎಂದು ಎಲ್ಲರೂ ಸಂತಸದಲ್ಲಿದ್ದರು. ಆದ್ರೆ, ಅರ್ಧ ಗಂಟೆಯಲ್ಲೇ ಬಡಿದ ಕಂದನ ಸಾವಿನ ಸುದ್ದಿ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಬಳ್ಳಾರಿಯ ಬಿಮ್ಸ್​ನಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಈಗ ಮಗು ಮೃತಪಟ್ಟಿದೆ.

ಬಳ್ಳಾರಿಯ ಬಿಮ್ಸ್​ನಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಸಾವು!
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2024 | 7:50 PM

ಬಳ್ಳಾರಿ, (ಡಿಸೆಂಬರ್ 05): ಬಳ್ಳಾರಿಯ ಬಿಮ್ಸ್​ನಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಆಘಾತ ಎದುರಾಗಿದೆ.. ಐವರು ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷಕ್ಕೆ ಇಂದು ಶಿಶು ಸಾವನ್ನಪ್ಪಿದೆ‌‌.. ನಾರ್ಮಲ್ ಹೆರಿಗೆಗೆ ಅಂತಾ ದಾಖಲಾಗಿದ್ದ ಗರ್ಭಿಣಿಗೆ ವೈದ್ಯರು ಏಕಾಏಕಿ ಸಿಜರಿನ್ ಮಾಡಿದ್ದರು ಜೊತೆಗೆ ಮಗು ಕೂಡ ಚೆನ್ನಾಗಿದೆ ಅಂತಾ ಹೇಳಿದ್ರು, ಆದ್ರೆ ಅರ್ಧ ಗಂಟೆ ಬಿಟ್ಟು ಮಗು ಸಾವಾಗಿದೆ ಅಂತಾ ಹೇಳಿದ್ದಾರೆ ಹೀಗಾಗಿ ಪೋಷಕರ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬರಲ್ಲ ಇಬ್ಬರಲ್ಲ ನಾಲ್ವರು ಬಾಣಂತಿಯರು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಿಮ್ಸ್​ನಲ್ಲಿ ಓರ್ವ ಬಾಣಂತಿ ಉಸಿರು ಚೆಲ್ಲಿದ್ದಾರೆ. ಎರಡ್ಮೂರು ವಾರಗಳ ಆಂತರದಲ್ಲಿ ಐವರು ಬಾಣಂತಿಯರ ಸಾವು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ.. ಐವಿ ಫ್ಲೂಯೆಡ್​​ನಿಂದಲೇ ಸರಣಿ ಸಾವು ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆದಿದೆ. ಇದರ ನಡುವೆ ಇಂದು(ಡಿಸೆಂಬರ್ 05) ಬಿಮ್ಸ್​​ನಲ್ಲಿ ಹಸುಗೂಸು ಉಸಿರು ಚೆಲ್ಲಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ: ಐವಿ ಗ್ಲುಕೋಸ್​ನಲ್ಲಿ ಆಘಾತಕಾರಿ ಅಂಶ ಪತ್ತೆ

ಸಿರಗುಪ್ಪ ಬಳಿಯ ಸಿರಗೇರದ ಗಂಗೋತ್ರಿ ಎನ್ನುವರು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಚೆನ್ನಾಗಿದೆ ಎಂದು ವೈದ್ಯುರ ಹೇಳಿದ್ದಾರೆ. ಆದ್ರೆ, ಇದಾದ ಅರ್ಧಗಂಟೆಯಲ್ಲಿ ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಶಿಶುವಿನ ಸಂಬಂಧಿಕರು ರೊಚ್ಚಿಗೆದ್ದಾರೆ.

ಗಂಗೋತ್ರಿಗೆ ಈ ಹಿಂದೆ ನಾರ್ಮಲ್ ಡೆಲಿವರಿ ಆಗಿದ್ದರಿಂದ ಈ ಬಾರಿಯೂ ನಾರ್ಮಲ್ ಆಗುತ್ತೆ ಎಂದು ವೈದ್ಯರು ಹೇಳಿದ್ದರು. ತಡ ರಾತ್ರಿಯೇ ಗಂಗೋತ್ರಿಗೆ ಪೇನ್​ ಶುರುವಾಗಿದ್ದು, ಬೆಳಗ್ಗೆ ಒದ್ದಾಡಲು ಆರಂಭಿಸಿದ್ದಾರೆ. ಅಲ್ಲಿತನಕ ಸುಮ್ಮನಿದ್ದ ವೈದ್ಯರು ಕೂಡಲೇ ಸಿಜೆರಿಯನ್ ವಾರ್ಡ್​​ಗೆ ಶಿಫ್ಟ್​ ಮಾಡಿದ್ದಾರೆ. ಬಳಿಕ ಗಂಡು ಮಗು ಜನಿಸಿದ್ದು, ತಾಯಿ-ಮಗು ಆರೋಗ್ಯವಾಗಿದೆ ಅಂತೇಳಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಮಗು ಆರೋಗ್ಯದಲ್ಲಿ ಏರುಪೇರಾಗಿ ಸಾವಾಗಿದೆ ಅಂತೇಳಿದ್ರಂತೆ.

ತಾಯಿ ಗರ್ಭದಲ್ಲಿ ಮಗು ಮಲ ತಿಂದಿದೆ. ಇದರಿಂದ ಶಾಸಕೋಶಕ್ಕೆ ತೊಂದರೆ ಆಗಿ ಮಗು ಮೃತಪಟ್ಟಿದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ವೈದ್ಯರ ಸಬೂಬು. ಇತ್ತ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗಂಡು ಮಗು ಜನಿಸಿತು ಎಂದು ಎಲ್ಲರೂ ಸಂತಸದಲ್ಲಿದ್ರು. ಆದ್ರೆ, ಅರ್ಧ ಗಂಟೆಯಲ್ಲೇ ಬಡಿದ ಕಂದನ ಸಾವಿನ ಸುದ್ದಿ ಎಲ್ಲರನ್ನೂ ಆಘಾತಕ್ಕೆ ದೂಡಿದೆ.. ತನಿಖೆಯಿಂದ ಈ ಸಾವಿನ ಅಸಲಿಯತ್ತು ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ