ರಾಬಕೊವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಗೆಲುವು; ಮತ್ತೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು ಮಾಡಿದ ಭೀಮಾ ನಾಯ್ಕ್
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಎಂಎಫ್ ಮಾಜಿ ಅಧ್ಯಕ್ಷ ಎಲ್.ಬಿ.ಪಿ. ಭೀಮಾ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ಅವರು ಬಳ್ಳಾರಿಯಿಂದ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ನಡುವೆ ಲಾಬಿ ಜೋರಾಗಿದೆ.
- Vinayak Badiger
- Updated on: Jul 10, 2025
- 8:59 pm
105 TMC ಸಾಮರ್ಥ್ಯದ ಟಿಬಿ ಡ್ಯಾಂನಲ್ಲಿ 80 ಟಿಎಂಸಿ ಮಾತ್ರ ನೀರು ಸಂಗ್ರಹ: ಕಾರಣವೇನು? ಇಲ್ಲಿದೆ ವಿವರ
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತುಂಗಭದ್ರಾ ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೂ ಕೂಡ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಉಳಿದ 25 ಟಿಎಂಸಿ ನೀರನ್ನು ಸಂಗ್ರಹಿಸದಿರುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
- Vinayak Badiger
- Updated on: Jul 7, 2025
- 11:04 am
ಬಂದ್ ಆಗುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ ಎರಡು ಲಕ್ಷ ಜನರ ಬದುಕು
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ, ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು ರಾಹುಲ್ ಗಾಂಧಿ. ನಂತರ, ಜಮೀನು ಗುರುತಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಅದು ನನಸಾಗುವ ಸುಳಿವು ಕಾಣುತ್ತಿಲ್ಲ. ಜೀನ್ಸ್ ಪಾರ್ಕ್ ನಿರ್ಮಾಣ ಒತ್ತಟ್ಟಿಗಿರಲಿ, ಇರುವ ಜೀನ್ಸ್ ವಾಷಿಂಗ್ ಘಟಕಗಳೇ ಮೂಲಸೌಕರ್ಯ ಕೊರತೆಯಿಂದ ಮುಚ್ಚುತ್ತಿವೆ. ಇದೀಗ ಬಳ್ಳಾರಿ ಜಿನ್ಸ್ ಉದ್ಯಮ ಪೂರ್ತಿ ಬಂದ್ ಆಗುವ ಆತಂಕದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ ಇದಕ್ಕೆ ಕಾರಣ.
- Vinayak Badiger
- Updated on: Jul 4, 2025
- 8:13 am
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಬಳ್ಳಾರಿಯಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಕ್ಕರ್ ಪ್ರಶಸ್ತಿಗೆ ಭಾಜನರಾಗಿದ್ದ ಬಾನು ಮುಷ್ತಾಕ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಬಾನು ಮುಷ್ತಾಕ್ ಅವರು ಈ ಆಯ್ಕೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸಮ್ಮೇಳನದಲ್ಲಿ 'ಎದೆಯ ಹಣತೆ' ಕೃತಿ ಅನುವಾದ ಮಾಡಿದ ದೀಪಾ ಬಾಸ್ತಿ ಅವರನ್ನೂ ಗೌರವಿಸಲಾಗುವುದು.
- Vinayak Badiger
- Updated on: Jun 29, 2025
- 9:29 pm
ಹೊಸಪೇಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟು, 13 ಜನ ಬಾಣಂತಿಯರಿಗೆ ನರಕಯಾತನೆ
ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿ ಇದೆ. ಆದರೆ, ವಿಜಯನಗರ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯೆ ಮಾಡಿದ ಎಡವಟ್ಟಿಗೆ ರೋಗಿಗಳು ನರಳಾಡುವಂತಾಗಿದೆ. ವೈದ್ಯ ಮಾಡಿದ ಸಿಜರಿಯನ್ಗೆ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಈ ಖಾಸಗಿ ಆಸ್ಪತ್ರೆಯ ಲೈಸೆನ್ಸ್ ರದ್ದಾಗಬೇಕು, ವೈದ್ಯೆಯ ವಿರುದ್ಧ ಕ್ರಮ ಆಗಬೇಕು ಅಂತ ನೋಂದವರು ಆಗ್ರಹಿಸಿದ್ದಾರೆ.
- Vinayak Badiger
- Updated on: Jun 22, 2025
- 9:22 pm
ಬಳ್ಳಾರಿಯಲ್ಲಿ ಹೃದಯವಿದ್ರಾವಕ ಘಟನೆ: ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಗಂಡ ಹೆಂಡತಿ ಜಗಳ ಅಂದ್ರೆ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಇವರದ್ದು ಸಾವಿನ ತನಕ. ಹೌದು.. ಕುರಿ ಮೇಯಿಸಲು ಬೆಳಗಾವಿಯಿಂದ ಬಳ್ಳಾರಿಗೆ ಬಂದಿದ್ದ ಕುಟುಂಬದಲ್ಲಿ ಗಲಾಟೆಯಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ತಾಯಿ ತನ್ನ ಮೂರು ಪುಟ್ಟ ಕಂದಮ್ಮಗಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
- Vinayak Badiger
- Updated on: Jun 18, 2025
- 8:56 pm
ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ
ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅದರಿಂದ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡೋದೇ ಇವನ ಕೆಲಸವಾಗಿತ್ತು. ಈವರೆಗೂ ಒಟ್ಟು 10 ನಕಲಿ ಖಾತೆ ಹಾಗೂ 90ಕ್ಕೂ ಹೆಚ್ಚು ಇ-ಮೇಲ್ ಐಡಿ ಮಾಡಿಕೊಂಡಿದ್ದ. ಈ ಕುರಿತು ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದ ಎರಡು ವರ್ಷಗಳ ನಂತರ ಮೋಸ್ಟ್ ವಾಂಟೆಡ್ ಕಾಮುಕ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮೊಬೈಲ್ ನಲ್ಲಿ 13,000 ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ.
- Vinayak Badiger
- Updated on: Jun 18, 2025
- 3:01 pm
ವಾಲ್ಮೀಕಿ ನಿಗಮ ಹಗರಣ: ಕರ್ನಾಟಕದಲ್ಲಿ ಏಕಕಾಲಕ್ಕೆ 8 ಕಡೆ ಇ.ಡಿ ದಾಳಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕರ್ನಾಟಕದ ಹಲವು ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮಾಜಿ ಸಚಿವರು, ಶಾಸಕರು ಮತ್ತು ಸಂಸದರ ಮನೆಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಗಮದ ಹಣ ದುರ್ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆ ದಾಳಿ ನಡೆದಿದೆ.
- Vinayak Badiger
- Updated on: Jun 11, 2025
- 11:30 am
ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಬ್ಬಿಣದ ಅದಿರು ಸಾಗಿಸುತ್ತಿದ್ದ ಟಿಪ್ಪರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Vinayak Badiger
- Updated on: May 26, 2025
- 2:42 pm
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್ಪಾಸ್ನಲ್ಲೇ ವಾಹನ ಸವಾರರ ಅಪಾಯಕಾರಿ ಪ್ರಯಾಣ
ಬಳ್ಳಾರಿ ಜಿಲ್ಲೆಯಲ್ಲಿಯೂ ಬುಧವಾರ ಸಂಜೆ ಭಾರಿ ಮಳೆಯಾಗಿದೆ. ಪರಿಣಾಮವಾಗಿ ಕೂಡ್ಲಿಗಿ, ಕೊಟ್ಟೂರು, ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಸಂಕಷ್ಟ ಎದುರಾಯಿತು. ಆದಾಗ್ಯೂ, ವಾಹನ ಚಾಲಕರು ನೀರು ತುಂಬಿಕೊಂಡಿರುವ ಅಂಡರ್ ಪಾಸ್ನಲ್ಲೇ ಅಪಾಯಕಾರಿ ಪ್ರಯಾಣ ಕೈಗೊಂಡರು.
- Vinayak Badiger
- Updated on: May 15, 2025
- 1:41 pm
Tungabhadra Dam: ತುಂಗಭದ್ರಾ ಡ್ಯಾಂನಲ್ಲಿ ಮತ್ತೊಂದು ಸಮಸ್ಯೆ: ಶೀಘ್ರ ಕ್ರಮಕ್ಕೆ ರೈತರ ಆಗ್ರಹ
ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಡ್ಯಾಂ ನಲ್ಲಿ ವರ್ಷಗಳು ಕಳೆದಂತೆ ಹೂಳು ತುಂಬಿಕೊಳ್ಳುತ್ತಿದೆ. ಒಂದು ಅಂದಾಜಿನ ಪ್ರಕಾರ 28 ಟಿಎಂಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಡ್ಯಾಂನಲ್ಲಿ ಶೇಖರಣೆಯಾಗಿರುವ ಹೂಳನ್ನು ತೆರವುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ಮಾಡದಿದ್ದರೆ ರೈತರಿಗೆ ತೊಂದರೆಯಾಗುವುದರ ಜತೆಗೆ, ಡ್ಯಾಂಗೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
- Vinayak Badiger
- Updated on: Apr 19, 2025
- 10:52 am
ಬಳ್ಳಾರಿಯಲ್ಲಿ ಮನಿ ಡಬ್ಲಿಂಗ್ ಸ್ಕ್ಯಾಮ್ ಕೇಸ್: 10 ದಿನವಾದ್ರೂ ಪತ್ತೆಯಾಗದ ಆರೋಪಿ, ಉದ್ಯಮಿಗಳು, ರಾಜಕಾರಣಿಗಳಿಗೂ ವಂಚನೆ
ಬಳ್ಳಾರಿಯ ಮನಿ ಡಬ್ಲಿಂಗ್ ಸ್ಕ್ಯಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ಹಣದ ಸಮೇತ ಪರಾರಿಯಾಗಿರುವ ವಂಚಕ ವಿಶ್ವನಾಥ್, 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಕರ್ನಾಟಕ ಮತ್ತು ಆಂಧ್ರ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರು ಆರೋಪಿಯ ಸುಳಿವಿಲ್ಲ. ಹೀಗಾಗಿ ಸದ್ಯ ಪ್ರಕರಣ ಪೊಲೀಸರಿಗೆ ಸವಾಲಾಗಿದೆ.
- Vinayak Badiger
- Updated on: Apr 16, 2025
- 1:34 pm