ದೇವೇಗೌಡರ ಬಗ್ಗೆ ಕೃಷ್ಣಪ್ಪ ನುಡಿದಿದ್ದ ಭವಿಷ್ಯ ವಾಣಿಯನ್ನು ಹಾಸನ ಸಮಾವೇಶದಲ್ಲಿ ಪ್ರಸ್ತಾಪಿಸಿದ ಸಿಎಂ
ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರವನ್ನ ಗೆದ್ದ ಕೈಪಡೆ, ಇಂದು(ಡಿಸೆಂಬರ್ 05) ದೇವೇಗೌಡರ ಕೋಟೆ ಹಾಸನದಲ್ಲಿ ಗರ್ಜಿಸಿದೆ. ಗೌಡರ ಸಾಮ್ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಇತರೆ ಕೈ ನಾಯಕರು ಅಬ್ಬರಿಸಿದ್ದಾರೆ. ಇನ್ನು ಸಿಎಂ ತಮ್ಮ ಭಾಷಣದ ವೇಳೆ, ದೇವೇಗೌಡರ ಬಗ್ಗೆ ಹಿಂದೆಯೇ ಕೃಷ್ಣಪ್ಪ ನುಡಿದಿದ್ದ ಭವಿಷ್ಯ ವಾಣಿಯನ್ನು ಪ್ರಸ್ತಾಪಿಸಿದ್ದಾರೆ. ಹಾಗಾದ್ರೆ, ಯಾರು ಆ ಕೃಷ್ಣಪ್ಪ? ಏನು ಭವಿಷ್ಯ ನುಡಿದಿದ್ದರು?
ಬೆಂಗಳೂರು/ಹಾಸನ, (ಡಿಸೆಂಬರ್ 05): ದೇವೇಗೌಡರ ಕೋಟೆ ಹಾಸನದಲ್ಲಿ ನಡೆದ ಕಾಂಗ್ರೆಸ್ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡಿದ್ದಾರೆ. ಬೈ ಎಲೆಕ್ಷನ್ ಸಮರದಲ್ಲಿ ದೇವೇಗೌಡರ ಆಡಿದ್ದ ಒಂದೊಂದು ಮಾತುಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಗರ್ವಭಂಗ ಮಾತಿಗೂ ಡಿಚ್ಚಿ ಕೊಟ್ಟಿದ್ದಾರೆ. ಈ ಮಧ್ಯ ಈ ಹಿಂದೆ ಕೃಷ್ಣಪ್ಪ ನುಡಿದಿದ್ದ ಭವಿಷ್ಯ ವಾಣಿಯನ್ನು ಪ್ರಸ್ತಾಪಿಸಿ ದೇವೇಗೌಡರಿಗೆ ಟಾಂಗ್ ಕೊಟ್ಟಿಟ್ಟಿದ್ದಾರೆ. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಅದನ್ನೇ ಸಿದ್ದರಾಮಯ್ಯ ಇಂದು ಸಮಾವೇಶದಲ್ಲಿ ಪ್ರಾಸ್ತಾಪಿಸಿ ದೊಡ್ಡಗೌಡ್ರಿಗೆ ತಿವಿದಿದ್ದಾರೆ.
ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ಈಗ ದೇವೇಗೌಡರು ನೋಡುವಂತಾಗಿದೆ . ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ: ಅಂತಿಮವಾಗಿ ಗೆಲ್ಲುವುದು ಸತ್ಯವೇ: ಹಾಸನ ಜನಕಲ್ಯಾಣ ಸಮಾವೇಶ ಕುರಿತು ಸಿಎಂ ಭಾವುಕ ಮಾತು
ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಟಿ.ಕೃಷ್ಣಪ್ಪ ಅವರನ್ನ ಪುಣ್ಯಕೋಟಿ ಕೃಷ್ಣಪ್ಪ ಅಂತಾನೇ ಜನ ಕರೆಯುತ್ತಿದ್ದರು. ರಾಜಕೀಯ, ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಅತ್ಯಂತ ಸರಳ ಜೀವಿ ಹೆಚ್.ಟಿ.ಕೃಷ್ಣಪ್ಪ ಅವರು 2021ರಲ್ಲಿ ಇಹಲೋಕ ತ್ಯಜಿಸಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಮಂತ್ರಿಗಳಾಗಿ ಸೇವಾ ಸಲ್ಲಿಸಿದ್ದರು. ಅತ್ಯಂತ ಶಿಸ್ತು ಪ್ರಾಮಾಣಿಕತೆ ರಾಜಕಾರಣಿಯಾಗಿ ಪ್ರಸಿದ್ಧ ರಾಗಿದ್ದ ಕೃಷ್ಣಪ್ಪ ನವರು, ತತ್ವ ಸಿದ್ದಾಂತ ಬಿಟ್ಟು ಹೊರ ಬಂದವರೇ ಅಲ್ಲ. ಕಳೆದ ಎರಡು ದಶಕಗಳಿಂದ ಕಲುಷಿತಗೊಂಡಿರುವ ಈ ರಾಜಕಾರಣದಿಂದ ದೂರ ಉಳಿದಿದ್ದರು. ರಾಮಕೃಷ್ಣ ಹೆಗಡೆ ಅಬ್ದುಲ್ ನಸೀರ್ ಸಾಬ್ , ನಂಜೇಗೌಡರು ಸೇರಿದಂತೆ ಸಾಕಷ್ಟು ಪ್ರಬುದ್ಧ ರಾಜಕಾರಣಿ ಗಳ ನಿರಂತರ ಒಡನಾಟ ಇಟ್ಟುಕೊಂಡು ಸಿದ್ದಾಂತ ದಲ್ಲೇ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Thu, 5 December 24