ಅಂತಿಮವಾಗಿ ಗೆಲ್ಲುವುದು ಸತ್ಯವೇ: ಹಾಸನ ಜನಕಲ್ಯಾಣ ಸಮಾವೇಶ ಕುರಿತು ಸಿಎಂ ಭಾವುಕ ಮಾತು

ಹಾಸನದಲ್ಲಿ ನಡೆದ ಕಾಂಗ್ರೆಸ್‌ನ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಉಪಚುನಾವಣೆಯಲ್ಲಿನ ಭರ್ಜರಿ ಗೆಲುವನ್ನು ಆಚರಿಸಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಭಾವುಕ ಭಾಷಣ ಮಾಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಮಾವೇಶವು ದೇವೇಗೌಡರ ಕೋಟೆಯಲ್ಲಿ ಕಾಂಗ್ರೆಸ್‌ ಬಲ ಪ್ರದರ್ಶನ ಮಾಡಿದೆ.

ಅಂತಿಮವಾಗಿ ಗೆಲ್ಲುವುದು ಸತ್ಯವೇ: ಹಾಸನ ಜನಕಲ್ಯಾಣ ಸಮಾವೇಶ ಕುರಿತು ಸಿಎಂ ಭಾವುಕ ಮಾತು
ಅಂತಿಮವಾಗಿ ಗೆಲ್ಲುವುದು ಸತ್ಯವೇ: ಹಾಸನ ಜನಕಲ್ಯಾಣ ಸಮಾವೇಶ ಕುರಿತು ಸಿಎಂ ಭಾವುಕ ಮಾತು
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 05, 2024 | 8:43 PM

ಹಾಸನ, ಡಿಸೆಂಬರ್​ 05: ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರವನ್ನ ಗೆದ್ದ ಕಾಂಗ್ರೆಸ್ (Congress)​, ಇಂದು ದೇವೇಗೌಡರ ಕೋಟೆಯಲ್ಲಿ ಗರ್ಜಿಸಿದೆ. ದಳಪತಿಗಳ ಸಾಮ್ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರು ಅಬ್ಬರಿಸಿದ್ದಾರೆ. ಕಾಂಗ್ರೆಸ್ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು, ಬೈ ಎಲೆಕ್ಷನ್ ವೇಳೆ ದೇವೇಗೌಡರು ಆಡಿದ್ದ ಮಾತುಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸಮಾವೇಶ ಕುರಿತು ಭಾವುಕ ಮಾತುಗಳನ್ನಾಡಿದ್ದಾರೆ.

ಜನಕಲ್ಯಾಣೋತ್ಸವ ನನಗೆ ಆನೆಬಲ

ಹಾಸನದಲ್ಲಿ ಇಂದು ನಡೆದ ಜನಕಲ್ಯಾಣೋತ್ಸವದ ಅಭೂತಪೂರ್ವ ಯಶಸ್ಸು ನನಗೆ ಆನೆಬಲ ನೀಡಿದೆ. ನನ್ನ ಮತ್ತು ಪಕ್ಷದ ಮೇಲಿನ ಪ್ರೀತಿಯಿಂದ ದೂರದೂರದ ಊರುಗಳಿಂದ ಆಗಮಿಸಿ, ಅನ್ಯಾಯ, ಅಪಪ್ರಚಾರ, ದ್ವೇಷರಾಜಕಾರಣದ ವಿರುದ್ಧದ ನನ್ನ ದನಿಗೆ ದನಿಗೂಡಿಸಿದ ನನ್ನ ಎಲ್ಲಾ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ನಾನು ಋಣಿ ಎಂದಿದ್ದಾರೆ.

ಇದನ್ನೂ ಓದಿ: ಜನಕಲ್ಯಾಣ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಬಂದಾಗ ಜನರಿಂದ ಕೇಕೆ, ಚಪ್ಪಾಳೆ ಮತ್ತು ಶಿಳ್ಳೆ

ಈ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಶೋಷಿತ ಸಮುದಾಯಗಳ ಸಂಘಟನೆಗಳು ಮತ್ತು ಪಕ್ಷದ ನಾಯಕರಿಗೆ ಅನಂತ ಧನ್ಯವಾದಗಳು. ಜನತೆಯ ಸೇವೆಯೇ ಜನಾರ್ಧನನ ಸೇವೆ. ಅಧಿಕಾರವೆಂಬುದು ಜನಸೇವೆ ಮಾಡಲು ಒದಗಿಬಂದ ಅವಕಾಶ ಎಂದು ಪ್ರಾಮಾಣಿಕವಾಗಿ ನಂಬಿದವನು ನಾನು.

ಸಿಎಂ ಸಿದ್ದರಾಮಯ್ಯ ಟ್ವೀಟ್ 

ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾವಂತರು, ಶೋಷಿತ ಜನರು ಇದ್ದಾರೆ ಎಂಬುದಕ್ಕೆ ಇಂದು ಸೇರಿದ್ದ ಜನಸಾಗರ ಸಾಕ್ಷಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರುವ ವರೆಗೆ ರಾಜಕೀಯ ವಿರೋಧಿಗಳ ಯಾವ ಷಡ್ಯಂತ್ರ, ಬೆದರಿಕೆಗಳಿಗೆ ನಾನು ಜಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ. ನಾನು ಸತ್ಯದ ಪರವಾಗಿದ್ದೇನೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ಸಿಎಂ ಸಿದ್ದರಾಮಯ್ಯ ಭಾವುಕ ಮಾತುಗಳನ್ನಾಡಿದ್ದಾರೆ.

ಮತದಾರರ ಕೃತಜ್ಞತೆ ಸಲ್ಲಿಸಲು ಈ ಸಮಾವೇಶ ಎಂದ ಸಿಎಂ

ಇದು ಅತ್ಯಂತ ಮಹತ್ವದ ಸಮಾವೇಶವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಹಾಸನದಲ್ಲಿ ಇಷ್ಟು ದೊಡ್ಡ ಸಮಾವೇಶ ಆಗಿಲ್ಲ. ಹಾಸನದಲ್ಲಿ ಏಕೆ ಈ ಸಮಾವೇಶ ಮಾಡ್ತಿದ್ದಾರೆಂದು ವ್ಯಾಖ್ಯಾನ ಮಾಡ್ತಿದ್ದರು. ಮೈಸೂರಿನಲ್ಲಿ ಅನೇಕ ಸಮಾವೇಶಗಳು ಆಗಿವೆ, ಹಾಸನದಲ್ಲಿ ಆಗಿಲ್ಲ. ಈ ಬಗ್ಗೆ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ ಜತೆ ಚರ್ಚಿಸಿದೆ. ಹೆಚ್​​ಸಿಎಂ, ವೆಂಕಟೇಶ್​ ಕೂಡ ಹಾಸನದಲ್ಲಿ ಸಮಾವೇಶ ಮಾಡಲು ನಿರ್ಧರಿಸಿದರು.

ಇದನ್ನೂ ಓದಿ: ನಬಾರ್ಡ್ ಸಾಲದ ಮೊತ್ತ ಅರ್ಧಕ್ಕಿಂತ ಜಾಸ್ತಿ ಕಡಿಮೆಯಾದರೂ ರೈತ ಮತ್ತು ಮಣ್ಣಿನ ಮಕ್ಕಳು ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ

ಏಕೆ ಈ ಸಮಾವೇಶ ಮಾಡ್ತಿದ್ದೀರಿ ಅಂತಾ ಮಾಧ್ಯಮದಲ್ಲಿ ಚರ್ಚೆ ಆಗಿದೆ. ಕಾಂಗ್ರೆಸ್​ ಮಾತ್ರವಲ್ಲ, ಸ್ವಾಭಿಮಾನ ಒಕ್ಕೂಟ ಸಹಯೋಗದಲ್ಲಿ ಕೃತಜ್ಞತೆ ಸಮಾವೇಶಕ್ಕೆ ಸ್ವಾಭಿಮಾನ ಒಕ್ಕೂಟ ತೀರ್ಮಾನಿಸಿತ್ತು. ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ನಾವೇ ಗೆದ್ದಿದ್ದೇವೆ. ಸಂಡೂರು ಕ್ಷೇತ್ರದಲ್ಲಿ ತುಕಾರಾಂ ಅವರೇ ಶಾಸಕರಾಗಿ ಇದ್ದರು. ಚನ್ನಪಟ್ಟಣ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಗೆದ್ದಿರಲಿಲ್ಲ. ಆದರೆ ನಮ್ಮ ಮತದಾರರ ಆಶೀರ್ವಾದದಿಂದ 3 ಕ್ಷೇತ್ರಗಳಲ್ಲೂ ಗೆದ್ದೆವು. ಹೀಗಾಗಿ ಮತದಾರರ ಕೃತಜ್ಞತೆ ಸಲ್ಲಿಸಲು ಈ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:41 pm, Thu, 5 December 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ