ಯತ್ನಾಳ್ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ಕ್ರಮದ ಬಗ್ಗೆ ಕಾರ್ಯಕರ್ತರ ಹಾಗೆ ನನಗೂ ಗೊಂದಲ: ವಿಜಯೇಂದ್ರ

ಯತ್ನಾಳ್ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ಕ್ರಮದ ಬಗ್ಗೆ ಕಾರ್ಯಕರ್ತರ ಹಾಗೆ ನನಗೂ ಗೊಂದಲ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2024 | 7:53 PM

ಪಕ್ಷದ ರಾಜ್ಯಾಧ್ಯಕ್ಷ ಆದಾಗಿನಿಂದ ಸಂಘಟನೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ, ರಾಜ್ಯಾಧ್ಯಕ್ಷನ ಸ್ಥಾನ ಒಂದು ಮಂತ್ರಿಗಿರಿಯಲ್ಲ, ಪಕ್ಷದ ಎಲ್ಲ ಕಾರ್ಯಕರ್ತರನ್ನು ಹುರಿದುಂಬಿಸುವ, ಅವರಲ್ಲಿ ಶಕ್ತಿ ತುಂಬುವ ಗುರುತರವಾದ ಜವಾಬ್ದಾರಿಯಾಗಿದೆ, ತನ್ನ ಕೆಲಸದಲ್ಲಿ ಸಣ್ಣಪುಟ್ಟ ತಕರಾರುಗಳು ಎದುರಾಗುತ್ತವೆ, ಪಕ್ಷದ ವರಿಷ್ಠರು ಅವುಗಳನ್ನು ಸರಿಮಾಡುತ್ತಾರೆ ಎಂದು ವಿಜಯೇಂದ್ರ ಹೇಳಿದರು.

ರಾಯಚೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಪಕ್ಷದ ವರಿಷ್ಠರು ಯಾವ ಕ್ರಮ ಜರುಗಿಸಲಿದ್ದಾರೆ ಅಂತ ರಾಜ್ಯದ ನಾಯಕರಿಗೆ ಗೊತ್ತಿಲ್ಲ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಜೊತೆ ತನಗೂ ಅದೇ ಗೊಂದಲವಿದೆ, ನಾಯಕರ ನಡವಳಿಕೆ ಮತ್ತು ನಿನ್ನೆ ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹೇಳಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂಬ ವಿಶ್ವಾಸ ತನಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯತ್ನಾಳ್ ತಂಡದ ಹೆಸರು ಹೇಳಲು ತಯಾರಿಲ್ಲದ ವಿಜಯೇಂದ್ರ ತಮ್ಮ ಪಕ್ಷದವರನ್ನೇ ಕೆಲವರು ಎನ್ನುತ್ತಾರೆ!