Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಹೋರಾಟ ಕೊನೆಗೊಳ್ಳುವವರೆಗೆ ವಕ್ಫ್ ಬೋರ್ಡ್​ನ ಎಲ್ಲ ಕೆಲಸಗಳನ್ನು ತಟಸ್ಥಗೊಳಿಸಬೇಕು: ಕುಮಾರ ಬಂಗಾರಪ್ಪ

ನಮ್ಮ ಹೋರಾಟ ಕೊನೆಗೊಳ್ಳುವವರೆಗೆ ವಕ್ಫ್ ಬೋರ್ಡ್​ನ ಎಲ್ಲ ಕೆಲಸಗಳನ್ನು ತಟಸ್ಥಗೊಳಿಸಬೇಕು: ಕುಮಾರ ಬಂಗಾರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2024 | 9:28 PM

ಬಿವೈ ವಿಜಯೇಂದ್ರ ನೇತೃತದಲ್ಲಿ ಕೆಲವು ಬಿಜೆಪಿ ನಾಯಕರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋರಾಟ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ ಬಂಗಾರಪ್ಪ, ನಾವು ಹೋರಾಟ ನಡೆಸಿದ ಸ್ಥಳಗಳಲ್ಲೇ ಹೋರಾಟ ಮಾಡಿದರೇನು ಪ್ರಯೋಜನ, ಅವರು ಚಾಮರಾಜನಗರ, ಮೈಸೂರು ಭಾಗಗಳಲ್ಲಿ ಮಾಡಿದ್ದರೆ ಅರ್ಥವಿರುತಿತ್ತು, ಅವರು ಮಾಡುತ್ತಿರೋದು ಹೋರಾಟ ನಾವು ಮಾಡಿದ್ದು ಶಕ್ತಿ ಪ್ರದರ್ಶನ ಎಂದು ಬಿಂಬಿಸುವ ಪ್ರಯತ್ನವಿದು ಎಂದರು.

ಬೆಳಗಾವಿ: ದೆಹಲಿಯಿಂದ ನಗರಕ್ಕೆ ವಾಪಸ್ಸಾದ ನಂತರ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಕುಮಾರ ಬಂಗಾರಪ್ಪ, ಜೆಪಿಸಿಯ ಸದಸ್ಯರಾಗಲೀ ಅಥವಾ ಪಕ್ಷದ ವರಿಷ್ಠರಾಗಲೀ ವಕ್ಫ್ ವಿರುದ್ಧ ಹೋರಾಟ ಕೈಬಿಡುವಂತೆ ನಮಗೆ ಹೇಳಿಲ್ಲ, ಇನ್ ಫ್ಯಾಕ್ಟ್ ತಾವು ಹೋರಾಟ ಮಾಡಿ ನೀಡಿದ ವರದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಬಹಳಷ್ಟು ನೆರವಾಗಲಿದೆ ಅಂತ ಜೆಪಿಸಿ ಚೇರ್ಮನ್ ಆಗಿರುವ ಜಗದಂಬಿಕಾ ಪಾಲ್ ಹೇಳಿದ್ದಾರೆ ಎಂದರು. ತಮ್ಮ ಹೋರಾಟ ಕೊನೆಗೊಳ್ಳುವವರೆಗೆ ಮತ್ತು ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರುವವರೆಗೆ ವಕ್ಫ್ ತಟಸ್ಥವಾಗಿರಲು ಕೇಂದ್ರದಿಂದ ಸೂಚನೆ ಹೊರಡಿಸಬೇಕೆಂದು ಮನವಿ ಮಾಡಿರುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್ ವಿರುದ್ಧ ಹೋರಾಟದ ವರದಿಯ ಬಗ್ಗೆ ಜೆಪಿಸಿ ಹೇಳಿದ್ದನ್ನು ವಿವರಿಸಿದ ಕುಮಾರ ಬಂಗಾರಪ್ಪ