ವಕ್ಫ್ ವಿರುದ್ಧ ಹೋರಾಟದ ವರದಿಯ ಬಗ್ಗೆ ಜೆಪಿಸಿ ಹೇಳಿದ್ದನ್ನು ವಿವರಿಸಿದ ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆಸಿರುವ ಹೋರಾಟ, ಇಡೀ ದೇಶಕ್ಕೆ ಮಾದರಿಯಾಗಿದೆ, ಅವರು 10 ಜಿಲ್ಲೆಗಳಲ್ಲಿ ಹೋರಾಟ ನಡೆಸಿ ನೀಡಿರುವ ವರದಿಯು ತಮ್ಮ ಅಧ್ಯಯನ ಮತ್ತು ವಕ್ಫ್ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಬಹಳಷ್ಟು ನೆರವಾಗಲಿದೆ ಎಂದು ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್ ಹೇಳಿದ್ದಾರೆ ಎಂದು ಕುಮಾರ ಬಂಗಾರಪ್ಪ ತಿಳಿಸಿದರು.
ದೆಹಲಿ: ವಕ್ಫ್ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಹಿನ್ನೆಲೆಯಲ್ಲಿ ರೈತರ ಭೂಕಬಳಿಕೆ, ಒತ್ತುವರಿ ಮೊದಲಾದ ಹಲವು ಸಮಸ್ಯೆಗಳ ಸಮಗ್ರ ಅಧ್ಯಯನ ಮಾಡಲು ನೇಮಿಸಿರುವ ಜಂಟಿ ಸಂಸದೀಯ ಸಮಿತಿಗೆ ರಾಷ್ಟ್ರದ ರಾಜಧಾನಿಯಲ್ಲಿ ವರದಿಯನ್ನು ಸಲ್ಲಿಸಿ ಜೆಪಿಸಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಡನೆ ಮಾತಾಡಿದ ಕುಮಾರ ಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವ ಮತ್ತು ಕೆಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ರಾಜ್ಯದ ಸುಮಾರು 10 ಜಿಲ್ಲೆಗಳ ಪ್ರವಾಸ ಮಾಡಿ ರೈತರ ಸಂಕಷ್ಟಗಳನ್ನು ದಾಖಲೆ ಸಮೇತ ಜೆಪಿಸಿಗೆ ವರದಿ ನೀಡಿದ್ದೇವೆ, ರಾಜ್ಯದಲ್ಲಿ ವಕ್ಫ್ ಬೋರ್ಡ್ ಸುಮಾರು 65,000 ಆಸ್ತಿಗಳ ಮಾಲೀಕರಿಗೆ ನೋಟೀಸ್ಗಳನ್ನು ನೀಡಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ರನ್ನು ವರಿಷ್ಠರು ಉಚ್ಛಾಟಿಸುತ್ತಾರೋ ಅಥವಾ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಿಸುತ್ತಾರೋ? ಕುಮಾರ ಬಂಗಾರಪ್ಪ
Latest Videos