ಮಂಗಳೂರಿಗೆ ತೆರಳುತ್ತಿದ್ದ ಕಾರು ಉಡುಪಿ ಬಳಿ ಪಲ್ಟಿ; ರಸ್ತೆ ಬದಿ ನಿಂತಿದ್ದ ಇಬ್ಬರು ವೃದ್ಧರ ಸ್ಥಿತಿ ಗಂಭೀರ

ಮಂಗಳೂರಿಗೆ ತೆರಳುತ್ತಿದ್ದ ಕಾರು ಉಡುಪಿ ಬಳಿ ಪಲ್ಟಿ; ರಸ್ತೆ ಬದಿ ನಿಂತಿದ್ದ ಇಬ್ಬರು ವೃದ್ಧರ ಸ್ಥಿತಿ ಗಂಭೀರ

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸುಷ್ಮಾ ಚಕ್ರೆ

Updated on:Dec 05, 2024 | 9:56 PM

ಮಣಿಪಾಲದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಉಡುಪಿಯ ಬಳಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಉಡುಪಿ ಕಡಿಯಾಳಿ ಒಕುಡೆ ಟವರ್ಸ್ ಬಳಿ ಈ ಘಟನೆ ನಡೆದಿದೆ. ವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಬ್ರೇಕ್ ಹಾಕಿದ್ದರಿಂದ ಸ್ವಿಫ್ಟ್ ಕಾರು ಪಲ್ಟಿ ಹೊಡೆದಿದೆ. ಈ ವೇಳೆ ರಸ್ತೆ ಬದಿ ತಮ್ಮ ಬೈಕ್​ನಲ್ಲಿ ನಿಂತಿದ್ದ ವೃದ್ದರಿಗೆ ಮತ್ತು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ.

ಉಡುಪಿ: ಉಡುಪಿಯ ಕಡಿಯಾಳಿ ಓಕುಡೆ ಟವರ್ಸ್​ ಬಳಿ ಕಾರು ಪಲ್ಟಿಯಾಗಿ ವೃದ್ಧರಿಬ್ಬರಿಗೆ ಗಾಯಗಳಾಗಿವೆ. ಮಣಿಪಾಲದಿಂದ ಮಂಗಳೂರು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಕಾರು ನಿಯಂತ್ರಣಕ್ಕೆ ತರಲು ಬ್ರೇಕ್ ಹಾಕಿದಾಗ ಈ ದುರ್ಘಟನೆ ನಡೆದಿದೆ. ಪಲ್ಟಿಯಾದ ಕಾರು ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಡಿಕ್ಕಿ ಹೊಡೆದಿದೆ. ಬೈಕ್​ ನಿಲ್ಲಿಸಿಕೊಂಡು ರಸ್ತೆ ಬದಿಯಲ್ಲಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು ಗಾಯಗಳಾಗಿವೆ. ಬಳಿಕ ಇನ್ನೊಂದು ಕಾರಿಗೂ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತಕ್ಕೆ ಒಳಗಾದ ವೃದ್ಧರ ಸ್ಥಿತಿ ಗಂಭೀರವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಉಡುಪಿಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 05, 2024 09:55 PM