ಹಣ ಚೆಲ್ಲಿ ವೋಟು ಗಿಟ್ಟಿಸುವ ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ಅವಮಾನ: ಬಿವೈ ವಿಜಯೇಂದ್ರ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಗಬೇಕೆಂದುಕೊಂಡಿರುವ ಸಮಯದಲ್ಲಿ ಸಿದ್ದರಾಮಯ್ಯ ಜನಕಲ್ಯಾಣ ಸಮಾವೇಶ ನಡೆಸಿದ್ದಾರೆ, ಶಿವಕುಮಾರ್ ಸ್ಥಿತಿ ಏನಾಗಿರಬೇಡ? ಸಿಎಂ ಗಾದಿಗೆ ಪೈಪೋಟಿ ನಡೆಯುತ್ತಿರುವ ಸಂಗತಿ ಎಲ್ಲರಿಗೂ ಗೊತ್ತು. ಮೊನ್ನೆ ದೆಹಲಿಯಲ್ಲಿ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ನಡುವೆ ನಡೆದ ಒಳಒಪ್ಪಂದ ಏನು ಅಂತ ಜನರಿಗೆ ಮುಖ್ಯಮಂತ್ರಿಯೇ ತಿಳಿಸಬೇಕು ಎಂದು ವಿಜಯೇಂದ್ರ ಹೇಳಿದರು.
ಕಲಬುರಗಿ: ತೊಗರಿ ಕಣಜವೆಂದು ಕರೆಸಿಕೊಳ್ಳುವ ಕಲಬುರಗಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದರು. ಯಾವ ಪುರುಷಾರ್ಥಕ್ಕಾಗಿ ಇವರು ಜನಕಲ್ಯಾಣ ಸಮಾವೇಶ ಮಾಡುತ್ತಿದ್ದಾರೆ? ಲೋಕಸಭಾ ಚುನಾವಣೆಯಲ್ಲಿ ಮತ್ತು ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಯಥೇಚ್ಛವಾಗಿ ಹಣ ಹಂಚಿ ವೋಟು ಗಿಟ್ಟಿಸಿದೆ. ಮತ ಪಡೆಯಲು ಹಣ ಚೆಲ್ಲುವುದು ಗ್ಯಾರಂಟಿ ಯೋಜನೆಗಳಿಗೆ ಮಾಡುವ ಅವಮಾನವಲ್ಲದೆ ಮತ್ತೇನು? ಯಾಕೆ ಸರ್ಕಾರದ ಪ್ರತಿನಿಧಿಗಳು ಯುವನಿಧಿ ಬಗ್ಗೆ ಮಾತಾಡುತ್ತಿಲ್ಲ? ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡಲಾಗದ ಸರ್ಕಾರ ನಿರುದ್ಯೋಗಿ ಯುವಕರಿಗೆ ಹಣದ ನೆರವು ನೀಡೀತೆ ಎಂದು ಅವರು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ರಾಜಕಾರಣದಲ್ಲಿ ಪಳಗಿದವರಲ್ಲ; ಯಡಿಯೂರಪ್ಪ ಹೋರಾಟ ಮಾಡಿದವರು: ರಮೇಶ್ ಜಾರಕಿಹೊಳಿ