Daily Devotional: ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ

Daily Devotional: ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Dec 06, 2024 | 6:37 AM

ಗಂಡ-ಹೆಂಡತಿಯ ನಡುವಿನ ಕಲಹ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಈ ಕಲಹವನ್ನು ನಿವಾರಿಸಿ ಸುಖಮಯ ದಾಂಪತ್ಯವನ್ನು ನಿರ್ಮಿಸಲು ಹಲವು ಮಾರ್ಗಗಳಿವೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ದಂಪತಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತವಾದ ಸಲಹೆಗಳನ್ನು ನೀಡಿದ್ದಾರೆ.

ಗಂಡ-ಹೆಂಡತಿ ಅಂದರೆ ದಂಪತಿ ನಡುವಣ ಬಾಂಧವ್ಯ ಅಮೂಲ್ಯವಾದುದು. ಇದು ಮನೆಯೊಳಕ್ಕೂ ಮತ್ತು ಮನೆಯಾಚೆಗೂ ಹೆಚ್ಚು ಮಹತ್ವ ಪಡೆದಿರುತ್ತದೆ, ಹೆಚ್ಚು ಪರಿಣಾಮ ಬೀರುತ್ತದೆ. ಗಂಡ-ಹೆಂಡತಿ ಸಂಬಂಧ ಜನುಮಜನುಮದ್ದು ಅನ್ನುತ್ತಾರೆ. ಅಂತಹ ಸಂಬಂಧವನ್ನು ಅತ್ಯಂತ ಜತನದಿಂದ ಪೊರೆಯಬೇಕು, ಕಾಪಾಡಿಕೊಂಡು ಬರಬೇಕು. ಆದರೆ ಮನುಷ್ಯ ಮನುಷ್ಯ ನಡುವೆ ಕಲಹ ಎಂಬುದು ಮನುಷ್ಯನ ಸೃಷ್ಟಿಯೊಂದಿಗೆ ಬಂದಿದೆ ಎನ್ನಬಹುದು. ಹಾಗಿರುವಾಗ ಗಂಡ-ಹೆಂಡತಿ ನಡುವೆಯೂ ಕಲಹ, ಜಗಳ ಎಂಬ ಕ್ಷಣಿಕ ಸಂಕಟಗಳು ಅಚಾನಕ್ಕಾಗಿ ಸೃಷ್ಟಿಯಾಗಿಬಿಡುತ್ತದೆ. ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ಎಂಬುವುದನ್ನು ಖ್ಯಾತ ಜ್ಯೋತಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.