ವಿಜಯೇಂದ್ರ ರಾಜಕಾರಣದಲ್ಲಿ ಪಳಗಿದವರಲ್ಲ; ಯಡಿಯೂರಪ್ಪ ಹೋರಾಟ ಮಾಡಿದವರು: ರಮೇಶ್ ಜಾರಕಿಹೊಳಿ

ವಿಜಯೇಂದ್ರ ರಾಜಕಾರಣದಲ್ಲಿ ಪಳಗಿದವರಲ್ಲ; ಯಡಿಯೂರಪ್ಪ ಹೋರಾಟ ಮಾಡಿದವರು: ರಮೇಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2024 | 8:38 PM

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರಮೇಶ್ ಜಾರಕಿಹೊಳಿ, ವಯಸ್ಸಿನಲ್ಲಿ ಚಿಕ್ಕವರಾಗಿರುವ ವಿಜಯೇಂದ್ರ ರಾಜಕಾರಣದಲ್ಲಿ ಅಪ್ರಬುದ್ಧ, ಅವರ ತಂದೆ ಬಿಎಸ್ ಯಡಿಯೂರಪ್ಪ ಹೋರಾಟ ಮಾಡುತ್ತಾ ಪಕ್ಷವನ್ನು ಕಟ್ಟಿದವರು, ವಿಜಯೇಂದ್ರ ಮುಂದೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಹುದು, ಅದರೆ ಈಗ ಸೂಕ್ತವಲ್ಲ ಎಂದರು.

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ನೇತೃತದಲ್ಲಿ ವಕ್ಫ್ ಭೂಕಬಳಿಕೆ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡವು ದೆಹಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬೆಳಗಾವಿಗೆ ವಾಪಸ್ಸಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಮೇಶ ಜಾರಕಿಹೊಳಿ ತಮ್ಮ ತಂಡದ ಹೋರಾಟವನ್ನು ಜೆಪಿಸಿ ಮುಕ್ತವಾಗಿ ಕೊಂಡಾಡಿದೆ ಮತ್ತು ಅದು ದೇಶದ ಎಲ್ಲ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಜೆಪಿಸಿ ಸದಸ್ಯರು ಹೇಳಿದ್ದಾರೆ ಹಾಗೂ ತಾವು ನೀಡಿದ ವರದಿ ಜೆಪಿಸಿಯ ಕೆಲಸಕ್ಕೆ ಬಹಳಷ್ಟು ನೆರವಾಗಲಿದೆ ಎಂದಿದ್ದಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದೆಹಲಿಯಲ್ಲಿ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಕಿವಿಮಾತು: ಪಾಠಕ್​ ಶಿಸ್ತಿನ ಪಾಠ