ನಬಾರ್ಡ್ ಸಾಲದ ಮೊತ್ತ ಅರ್ಧಕ್ಕಿಂತ ಜಾಸ್ತಿ ಕಡಿಮೆಯಾದರೂ ರೈತ ಮತ್ತು ಮಣ್ಣಿನ ಮಕ್ಕಳು ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ

ನಬಾರ್ಡ್ ಸಾಲದ ಮೊತ್ತ ಅರ್ಧಕ್ಕಿಂತ ಜಾಸ್ತಿ ಕಡಿಮೆಯಾದರೂ ರೈತ ಮತ್ತು ಮಣ್ಣಿನ ಮಕ್ಕಳು ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2024 | 6:22 PM

ಕರ್ನಾಟಕ ರಾಜ್ಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ, ಮೇಕೆದಾಟು ಮತ್ತು ಮಹಾದಾಯಿ ಯೋಜನೆಗಳಿಗೆ ಕೇಂದ್ರದಿಂದ ಸಮ್ಮತಿ ಪಡೆದುಕೊಳ್ಳಲು ರಾಜ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರು ಶ್ರಮಿಸಬೇಕು, ಕೇಂದ್ರ ಸರ್ಕಾರದ ಮುಂದೆ ಕೋಲೆ ಬಸವನಂತೆ ತಲೆ ಅಲ್ಲಾಡಿಸಲು ಜನ ಅವರನ್ನು ಲೋಕಸಭೆ ಮತ್ತು ರಾಜ್ಯಸಭೆಗೆ ಕಳಿಸಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಹಾಸನ: ನಾವು ಮೊದಲೇ ಹೇಳಿದ ಹಾಗೆ ಜನಕಲ್ಯಾಣ ಸಮಾವೇಶವನ್ನು ಕಾಂಗ್ರೆಸ್ ಸರ್ಕಾರವು ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ಮಾಡಲು ಅಯೋಜಿಸಿತ್ತು. ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಬಾರ್ಡ್ ರಾಜ್ಯದಲ್ಲಿ ರೈತರಿಗೆ ನೀಡುವ ಸಾಲದ ಮೊತ್ತವನ್ನು ₹ 5600 ಕೋಟಿಗಳಿಂದ ₹ 2340 ಕೋಟಿಗಳಿಗೆ ಇಳಿಸಿರುವುದನ್ನು ಉಲ್ಲೇಖಿಸಿ, ರೈತನ ಮಗ ಮಣ್ಣಿನ ಅಂತೆಲ್ಲ ಹೇಳಿಕೊಳ್ಳುತ್ತಾ ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ದೇವೆಗೌಡ ಮತ್ತು ಕುಮಾರಸ್ವಾಮಿ ಯಾಕೆ ಸುಮ್ಮನಿದ್ದಾರೆ, ರೈತರಿಗೆ ಎದುರಾಗಲಿರುವ ಸಂಕಷ್ಟವನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜನಕಲ್ಯಾಣ ಕಾರ್ಯಕ್ರಮ ಯಾರು ಆಯೋಜಿಸಿದ್ದು ಅನ್ನೋದನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ