ಜನಕಲ್ಯಾಣ ಕಾರ್ಯಕ್ರಮ ಯಾರು ಆಯೋಜಿಸಿದ್ದು ಅನ್ನೋದನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ವರನಟ, ಕನ್ನಡದ ಕಣ್ಮಣಿ ದಿವಂಗತ ರಾಜ್ಕುಮಾರ್ ಅವರನ್ನು ಜ್ಞಾಪಕಮಾಡಿಕೊಂಡರು. ಅಣ್ಣಾವ್ರು ಅಭಿಮಾನಿಗಳನ್ನು ದೇವ್ರು ಅನ್ನುತ್ತಿದ್ದರು, ಹಾಗೆಯೇ ನಮಗೆ ಮತದಾರರೇ ದೇವರು ಎಂದು ಮುಖ್ಯಮಂತ್ರಿ ಹೇಳಿದರು. ಅವರ ಈ ಮಾತಿಗೆ ಜನರಿಂದ ನಿರೀಕ್ಷಿಸಿದಷ್ಟು ಚಪ್ಪಾಳೆ ಬರಲಿಲ್ಲ.
ಹಾಸನ: ಜನಕಲ್ಯಾಣ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಅಯೋಜಿಸಿದ್ದು ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ, ಅದರೆ ವಿಷಯ ಹಾಗಿಲ್ಲ, ಸ್ವಾಭಿಮಾನಿ ಒಕ್ಕೂಟ, ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಬಗ್ಗೆ ಸಹಾನುಭೂತಿ ಉಳ್ಳವರು ಕಾರ್ಯಕ್ರಮ ಆಯೋಜಿಸುತ್ತೇವೆ ಅಂತ ತನ್ನಲ್ಲಿಗೆ ಬಂದಾಗ ರಾಜ್ಯದ ಮುಖ್ಯಮಂತ್ರಿಯಾಗಿ ಅದನ್ನು ಒಪ್ಪಲ್ಲ, ಕೆಪಿಸಿಸಿಯೂ ಅವರೊಂದಿಗೆ ಕೈ ಜೋಡಿಸುತ್ತದೆ ಎಂದು ಹೇಳಿದ್ದೆ ಎಂದರು. ಇದು ಕೆಪಿಸಿಸಿ ಮತ್ತು ಸ್ವಾಭಿಮಾನಿ ಒಕ್ಕೂಟ ಜಂಟಿಯಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜನಕಲ್ಯಾಣ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಬಂದಾಗ ಜನರಿಂದ ಕೇಕೆ, ಚಪ್ಪಾಳೆ ಮತ್ತು ಶಿಳ್ಳೆ
Published on: Dec 05, 2024 05:37 PM
Latest Videos