ಜನಕಲ್ಯಾಣ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಬಂದಾಗ ಜನರಿಂದ ಕೇಕೆ, ಚಪ್ಪಾಳೆ ಮತ್ತು ಶಿಳ್ಳೆ

ಜನಕಲ್ಯಾಣ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣಕ್ಕೆ ಬಂದಾಗ ಜನರಿಂದ ಕೇಕೆ, ಚಪ್ಪಾಳೆ ಮತ್ತು ಶಿಳ್ಳೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 05, 2024 | 4:58 PM

ಜನಕಲ್ಯಾಣ ಸಮಾವೇಶವನ್ನು ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು ಅನ್ನೋದು ಕಾಂಗ್ರೆಸ್ ನಾಯಕರ ಭಾಷಣಗಳಿಂದ ಸ್ಪಷ್ಟವಾಯಿತು. ಎಲ್ಲರೂ ದೇವೇಗೌಡರ ಕುಟುಂಬವನ್ನ ಟೀಕಿಸುವುದನ್ನು ಮಾತ್ರ ಮರೆಯಲಿಲ್ಲ. ಜೈಲಲ್ಲಿರುವ ಪ್ರಜ್ವಲ್ ರೇವಣ್ಣರನ್ನೂ ಟಾರ್ಗೆಟ್ ಮಾಡಲಾಯಿತು.

ಹಾಸನ: ನಗರದ ಎಸ್ ಎಂ ಕೃಷ್ಣ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸಮಾವೇಶದಲ್ಲಿ ಹೆಚ್ಚುಕಡಿಮೆ ಪಕ್ಷದ ಹಿರಿಯ ಮತ್ತ್ತು ಪ್ರಮುಖ ನಾಯಕರೆಲ್ಲ ಮಾತಾಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಬಂದಾಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರಿಂದ ಒಕ್ಕೊರಲಿನ ಕೂಗು, ಶಿಳ್ಳೆ ಮತ್ತು ಚಪ್ಪಾಳೆ. ಅವರನ್ನು ಸುಮ್ಮನಾಗಿಸಲು ಮುಖ್ಯಮಂತ್ರಿಯವರಿಗೆ ಒಂದೆರಡು ನಿಮಿಷಗಳ ಸಮಯ ಬೇಕಾಯಿತು. ಸಿಎಂ ಮೊದಲಿಗೆ ಸನ್ನೆ ಮಾಡಿ ಕೂತ್ಕೊಳ್ಳಿ ಅನ್ನುತ್ತಾರೆ, ಜನ ಕೇಳದಾದಾಗ ಏಯ್ ಸುಮ್ನಿರಿ, ಕೂತ್ಕೊಳ್ಳಿ ಅಂತ ತಮ್ಮ ಎಂದಿನ ಶೈಲಿಯಲ್ಲಿ ಗದರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಾಸನ ಕಾಂಗ್ರೆಸ್ ಕಾರ್ಯಕ್ರಮದ ದಿಕ್ಕೇ ಬದಲು: ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್ 

Published on: Dec 05, 2024 04:58 PM