ಅಧಿಕಾರ ಹಸ್ತಾಂತರ ವಿಷಯ ನನ್ನ ವ್ಯಾಪ್ತಿಗೆ ಬರಲ್ಲ, ಮುಖ್ಯಮಂತ್ರಿಯವರನ್ನೇ ಕೇಳಬೇಕು: ಸತೀಶ್ ಜಾರಕಿಹೊಳಿ
ಮೊನ್ನೆ ದೆಹಲಿಯಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆದಿಲ್ಲ, ನಿರ್ಧಾರವನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅವರ ಮಾತಿಗೆ ಚಕಾರವೆತ್ತದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಹಾಗೆ ಹೇಳಿದ್ದರೆ ದೂಸ್ರಾ ಮಾತಿಲ್ಲ, ಅವರು ಹೇಳಿದ್ದೇ ಫೈನಲ್ ಅಂತ ಹೇಳಿದ್ದರು!
ಹಾಸನ: ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಜನಕಲ್ಯಾಣ ಸಮಾವೇಶ ಅಯೋಜನೆಗೊಂಡರೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುವ ವಿಚಾರ ಮರೆಯಾಗಿಲ್ಲ. ಸಮಾವೇಶದ ನಂತರ ನಮ್ಮ ವರದಿಗಾರನೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರ ಹಸ್ತಾಂತರ ಸಂಗತಿ ತನ್ನ ವ್ಯಾಪ್ತಿಗೆ ಬರಲ್ಲ, ಅದನ್ನು ಮುಖ್ಯಮಂತ್ರಿಯವರನ್ನೇ ಕೇಳಬೇಕು ಎನ್ನುತ್ತಾ ಸಮಾವೇಶ ಆಯೋಜಿಸಿದ ಉದ್ದೇಶವನ್ನು ವಿವರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ, ಸತೀಶ್ ಜಾರಕಿಹೊಳಿಗೆ ನಿಂದನೆ ಮಾಡಿದ್ದ ವ್ಯಕ್ತಿ ಅರೆಸ್ಟ್: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್
Latest Videos