Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮನನ್ನು ಬರ್ಬರವಾಗಿ ಕೊಂದು ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಅಣ್ಣ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ ಹೆಣದ ಮುಂದೆ ಕೂತು ಬಿಡಿ ಸೇದಿರುವಂತಹ ಘಟನೆ ನಡೆದಿದೆ. ಕೌಟುಂಬಿಕ ಕಲಹ ಸಾವಿನಲ್ಲಿ ಅಂತ್ಯವಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಮ್ಮನನ್ನು ಬರ್ಬರವಾಗಿ ಕೊಂದು ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಅಣ್ಣ!
ತಮ್ಮನನ್ನು ಬರ್ಬರವಾಗಿ ಕೊಂದು ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಅಣ್ಣ!
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2024 | 4:38 PM

ಕಾರವಾರ, ಡಿಸೆಂಬರ್​ 04: ಕುಡಿದ ಮತ್ತಿನಲ್ಲಿ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ (kill) ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ನಡೆದಿದೆ. ಅಣ್ಣ ಸುಬ್ರಾಯ್ ನಾಯ್ಕ್​ನಿಂದ ನಾಗೇಶ್ ನಾಯ್ಕ್(50) ಕೊಲೆ ಮಾಡಲಾಗಿದೆ. ಕೌಟುಂಬಿಕ ಕಲಹ ಸಾವಿನಲ್ಲಿ ಅಂತ್ಯವಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಕೊಲೆ ಮಾಡಿ ಹೆಣದ ಮುಂದೆ ಅಣ್ಣ ಬೀಡಿ ಸೇದುತ್ತಾ ಕೂತ್ತಿದ್ದರು. ಈ ಹಿಂದೆ ಅಣ್ಣನ ಮೇಲೆ ತಮ್ಮ ನಾಗೇಶ್ ನಾಯ್ಕ್ ಹಲ್ಲೆ ಮಾಡಿದ್ದ.

ಬಲೂನ್ ಊದೂವ ಭರದಲ್ಲಿ ಗಂಟಲಲ್ಲಿ ಸಿಲುಕಿ 13 ವರ್ಷದ ಪುಟ್ಟ ಪೋರ ಸಾವು

ಬಲೂನ್ ಊದೂವ ಭರದಲ್ಲಿ ಬಾಯಲ್ಲಿ ಹೋದ ಬಲೂನ್​ನಿಂದಾಗಿ 13 ವರ್ಷದ ಪುಟ್ಟ ಪೋರ ಸಾವನ್ನಪ್ಪಿರುವಂತಹ ಘಟನೆ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ. 13 ವರ್ಷದ ನವೀನ್ ಮೃತ ಪುಟ್ಟ ಪೋರ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹಿಟ್​ ಆ್ಯಂಡ್​ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ

ಎಂದಿನಂತೆ ತನ್ನ ಮನೆಯಲ್ಲಿ ನವೀನ್​ ಆಟವಾಡುತ್ತಿದ್ದ. ಈ ವೇಳೆ ಕೈಗೆ ಬಲೂನ್​ ಸಿಕ್ಕಿದೆ. ಬಲೂನ್ ದೊಡ್ಡದಾಗಿ ಊದಬೇಕು ಅಂತಾ ಹತ್ತಾರು ಬಾರಿ ಪ್ರಯತ್ನಸಿದ್ದಾನೆ. ಬಲೂನ್ ಊದುವುದು ಮತ್ತೆ ಅದರ ಗಾಳಿ ಹೊರಗೆ ಬಿಡುವುದು ಹೀಗೆ ಆಟವಾಡುತ್ತಿದ್ದ. ಮಗ ಆಟ ಆಡ್ತಾ ಇದಾನೆ ಅಂತಾ ಪಾಲಕರು ಸಹ ತಮ್ಮ ತಮ್ಮ ಕೆಲಸದಲ್ಲಿ ಬಿಜಿ ಆಗಿದ್ದರು.

ಬಲೂನ್​ನಲ್ಲಿ ಜಾಸ್ತಿ ಗಾಳಿ ತುಂಬ ಬೇಕು ಅಂತಾ. ಫುಲ್ ಶಕ್ತಿ ಹಾಕಿ ಊದಿದ್ದಾನೆ. ಒಮ್ಮಿಂದ ಒಮ್ಮೆಲೆ ಏನಾಯ್ತೋ ಗೊತ್ತಿಲ್ಲ ಬಲೂನ್ ಬಾಯಿಯಲ್ಲಿ ಹೋಗಿದೆ. ಬಾಯಲ್ಲಿ ಇದ್ದಿದ್ರೆ ಏನು ಆಗ್ತಾ ಇರಲಿಲ್ಲ, ಗಾಳಿಯ ರಭಸಕ್ಕೆ ಗಂಟಲಲ್ಲಿ ಸಿಕ್ಕಿಕೊಂಡಿದೆ. ಇನ್ನೂ ಗಂಟಲಲ್ಲಿ ಬಲೂನ್ ಹೋಗಿ ಸಿಕ್ಕಿ ಕೊಳ್ಳುತ್ತಿದ್ದಂತೆ, ಕೆಮ್ಮುವುದಕ್ಕೆ ಆರಂಭ ಮಾಡಿದ ಬಾಲಕನ ಉಸಿರು ಗಟ್ಟಿಸ ತೊಡಕಿತು.

ಇದನ್ನೂ ಓದಿ: ಬೈಕ್ ಕಳ್ಳತನ ಆರೋಪಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಹುಬ್ಬಳ್ಳಿ ಪೊಲೀಸರ ಹಣದ ದಾಹ ಬಯಲು

ಈತನನ್ನು ನೋಡಿದ ತಾಯಿ ಏನಾಯ್ತೂ ಅಂತಾ ನೋಡಿದಾಳೆ. ಗಂಟಲಲ್ಲಿ ಬಲೂನ್ ಸಿಕ್ಕಾಕೊಂಡಿದ್ದು ಹೊರಗೆ ತೆಗೆಯಲು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಇತ್ತ ವಿನಾಯಕ ಉಸಿರಾಡಲು ಒದ್ದಾಡ ತೋಡಗಿದಾನೆ, ಈತನ ರೋಧನೆ ನೋಡಿ ಕೂಡಲೆ ಹಳಿಯಾಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲೆ ಆತ ಮೃತಪಟ್ಟಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​