ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ಕೈಗಾದಲ್ಲಿ ಮತ್ತೆರಡು ಅಣು ವಿದ್ಯುತ್ ಘಟಕ, ಕಾಮಗಾರಿ ಚುರುಕು: ವಿದ್ಯುತ್ ಉತ್ಪಾದನೆಗೆ ಬರಲಿದೆ ಮತ್ತಷ್ಟು ಬಲ
ಕರ್ನಾಟಕದ ಏಕೈಕ ಅಣು ವಿದ್ಯತ್ ಸ್ಥಾವರ ಕೈಗಾದಲ್ಲಿದೆ. ಇದುವರೆಗೂ ನಾಲ್ಕು ಘಟಕಗಳ ಮೂಲಕ ಕರ್ನಾಟಕ ಸೇರಿದಂತೆ ದೇಶದ ಬೇರೆ ರಾಜ್ಯಗಳಿಗೂ ವಿದ್ಯುತ್ ಒದಗಿಸಿ ದಾಖಲೆ ನಿರ್ಮಿಸಿತ್ತು. ಸದ್ಯ ಇನ್ನೆರಡು ಹೊಸ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ವಿದ್ಯುತ್ ಶಕ್ತಿಗೆ ಮತ್ತಷ್ಟು ಬಲ ತುಂಬಲಿದೆ.
- Suraj Mahaveer Utture
- Updated on: Aug 6, 2025
- 6:58 am
ಕಾರವಾರ: ಡಿಜಿಟಲ್ ಅರೆಸ್ಟ್ ಭೀತಿಗೆ 89.90 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಉತ್ತರ ಕನ್ನಡದ ಶಿರಸಿಯ ರವೀಂದ್ರ ಕೃಷ್ಣ ಹೆಗಡೆ ಅವರು ಡಿಜಿಟಲ್ ಬಂಧನದ ಭಯದಿಂದ 89.9 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ವಂಚಕರು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮುಂಬೈ ಪೊಲೀಸರು ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಲಾಗಿದ್ದು, ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Suraj Mahaveer Utture
- Updated on: Jul 30, 2025
- 10:40 pm
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ, ಭೂಕುಸಿತಗಳು ಮುಂದುವರೆದಿವೆ. ರಾಷ್ಟ್ರೀಯ ಹೆದ್ದಾರಿ 766(ಇ) ಭೂಕುಸಿತ ಸಂಭವಿಸಿದೆ. ಕುಮಟಾ ತಾಲೂಕಿನಲ್ಲಿ ದೇವಿಮನೆ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭೂಕುಸಿತದಿಂದಾಗಿ ರಸ್ತೆಗಳು ಮುಚ್ಚಲ್ಪಟ್ಟಿವೆ.
- Suraj Mahaveer Utture
- Updated on: Jul 28, 2025
- 3:37 pm
ಕಾರವಾರದಲ್ಲಿ ಮುಂದುವರಿದ ಮಳೆ ಅವಾಂತರ: ಕಾರಿನ ಮೇಲೆ ಮರ ಬಿದ್ದು ಅತ್ತೆ ಸಾವು, ಸೊಸೆ ಪಾರು
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಮಳೆಯಿಂದಾಗಿ ಒಂದು ದೊಡ್ಡ ಮರ ಕಾರಿನ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವಂತಹ ಘಟನೆ ಪಿಕಳೆ ಆಸ್ಪತ್ರೆಯ ಬಳಿ ನಡೆದಿದೆ. ಮತ್ತೋರ್ವ ಗರ್ಭಿಣಿ ಮಹಿಳೆ ಮತ್ತು ಕಾರು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
- Suraj Mahaveer Utture
- Updated on: Jul 20, 2025
- 4:33 pm
ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ ಸಂದೇಶ
ಮಾಜಿ ಸಂಸದ ಅನಂತ ಕುಮಾರ್ ಹೆಗಡೆಯವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ. ಈ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 24 ರಂದು ಬಂದ ಈ ಇ-ಮೇಲ್ ಬೆದರಿಕೆಯ ಕುರಿತು ನ್ಯಾಯಾಲಯದ ಅನುಮತಿ ಪಡೆದು ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
- Suraj Mahaveer Utture
- Updated on: Jul 18, 2025
- 6:39 pm
ಏಕಾಏಕಿ ರೌದ್ರಾವತಾರ ತಾಳಿದ ಅರೆಬೈಲ್ ಫಾಲ್ಸ್ ಮಧ್ಯದಲ್ಲಿ ಸಿಲುಕಿದ ಪ್ರವಾಸಿಗರು: ರಕ್ಷಣೆಗೆ ರೋಚಕ ಕಾರ್ಯಾಚರಣೆ
ಫಾಲ್ಸ್ ವೀಕ್ಷಣೆಗೆ ತೆರಳಿದ್ದ ಹುಬ್ಬಳ್ಳಿಯ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಜಲಪಾತದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಸಮಯಪ್ರಜ್ಞಯಿಂದ ಅವರನ್ನು ರಕ್ಷಣೆ ಮಾಡಲಾಗಿದೆ. ಜಲಪಾತದ ರೌದ್ರ ನರ್ತನ ಹಾಗೂ ಪ್ರವಾಸಿಗರ ರಕ್ಷಣೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
- Suraj Mahaveer Utture
- Updated on: Jul 17, 2025
- 12:04 pm
ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಕುಟುಂಬ: 2 ವರ್ಷ ಬಳಿಕ ಯುವಕನಿಗೆ ಸಿಕ್ತು ಮುಕ್ತಿ
ಆತ ಯಾವುದೋ ಕಾರಣದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದನು. ಆತನಿಗೆ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಬದಲು ವಾಸಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. TV9 ತಂಡ ಯುವಕನನ್ನು ರಕ್ಷಣೆ ಮಾಡಿ, ಚಿಕಿತ್ಸೆ ಒದಗಿಸಲು ಸಹಾಯ ಮಾಡಿದೆ.
- Suraj Mahaveer Utture
- Updated on: Jul 16, 2025
- 9:01 pm
ಪೈಪ್ ಕದ್ದ ಶಿರಸಿ ನಗರಸಭೆ ಸದಸ್ಯನನ್ನು ಲಾಕ್ ಮಾಡಿದ ಲೋಕಾಯುಕ್ತ
ಶಿರಸಿ ನಗರಸಭೆಯ ಹಾಲಿ ಬಿಜೆಪಿ ಸದಸ್ಯ ಗಣಪತಿ ನಾಯ್ಕ್ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಗಣಪತಿ ನಾಯ್ಕ್ ಮತ್ತು ನಗರಸಭೆಯ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು, ಗಣಪತಿ ನಾಯ್ಕ್ ವಿರುದ್ಧ ನಗರಸಭೆಯ ಪೈಪ್ ಕಳ್ಳತನ ಆರೋಪವೂ ಇದೆ.
- Suraj Mahaveer Utture
- Updated on: Jul 16, 2025
- 7:25 pm
ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳಿಗೆ ಗೋಕರ್ಣ ಪ್ರವಾಸದ ಆಫರ್!
ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವ್ಯತ್ಯಯ ಹಿನ್ನೆಲೆ ಇತ್ತೀಚೆಗೆ ಶಿರಸಿಯ ಸಹಸ್ರಹೊಂಡ ಎಂಬ ಸ್ಥಳ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತ ಒಬ್ಬರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಗೋಕರ್ಣ ಪ್ರವಾಸ ವ್ಯವಸ್ಥೆ ಕೈಗೊಂಡಿದ್ದು, ಬಸ್ನ ಕೊನೆಯ ಆಸನಲ್ಲಿ ಕೂಳಿತು ಪ್ರಯಾಣಿಸುವಂತೆ ತಿಳಿಸಿದ್ದಾರೆ.
- Suraj Mahaveer Utture
- Updated on: Jul 14, 2025
- 1:49 pm
ಸೋರುತ್ತಿದೆ ಕದಂಬರು ನಿರ್ಮಿಸಿದ ಬನವಾಸಿಯ ಮಧುಕೇಶ್ವರ ದೇವಸ್ಥಾನ: ಕಣ್ಮುಚ್ಚಿ ಕುಳಿತ ಸರ್ಕಾರ
ಉತ್ತರ ಕನ್ನಡದ ಬನವಾಸಿಯಲ್ಲಿರುವ ಐತಿಹಾಸಿಕ ಮಧುಕೇಶ್ವರ ದೇವಸ್ಥಾನದ ಛಾವಣಿ ಅಬ್ಬರದ ಮಳೆಯಿಂದ ಸೋರುತ್ತಿದೆ. 2010ರ ನವೀಕರಣದ ನಂತರ ಮತ್ತೆ ಸೋರಿಕೆ ಆರಂಭವಾಗಿದೆ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ದೇವಸ್ಥಾನದ ಸ್ಥಿತಿ ಹದಗೆಟ್ಟಿದೆ. 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದರೂ, ದುರಸ್ತಿ ಕಾರ್ಯಗಳು ಇನ್ನೂ ಆರಂಭವಾಗಿಲ್ಲ. ಈ ಐತಿಹಾಸಿಕ ಸ್ಮಾರಕವನ್ನು ಉಳಿಸಲು ತುರ್ತು ಕ್ರಮ ಅಗತ್ಯ.
- Suraj Mahaveer Utture
- Updated on: Jul 13, 2025
- 9:34 pm
ಭಟ್ಕಳ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್: ಆರೋಪಿಯ ಅಡಗುತಾಣ ಪತ್ತೆ
ಉತ್ತರ ಕನ್ನಡದ ಭಟ್ಕಳ ಪಟ್ಟಣಕ್ಕೆ ಬಾಂಬ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದಿತ್ತು. ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಆರೋಪಿ ಅಡಗಿಕೊಂಡಿರುವ ತಾಣ ಗೊತ್ತಾಗಿದೆ. ಆರೋಪಿಯು ಮೈಸೂರು, ಬಳ್ಳಾರಿ, ಕೇರಳದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದನು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
- Suraj Mahaveer Utture
- Updated on: Jul 13, 2025
- 5:12 pm
ಸಂಘದ ಸಾಲ ತೀರಿಸಲು 20 ದಿನದ ಮಗುವನ್ನು ಮಾರಾಟ ಮಾಡಿದ ದಂಪತಿ
ಉತ್ತರ ಕನ್ನಡದ ದಾಂಡೇಲಿಯಲ್ಲಿ ಮನಲಕುವ ಘಟನೆ ನಡೆದಿದೆ. ಸಾಲದ ಸುಳಿಗೆ ಸಿಲುಕಿದ ದಂಪತಿ ತಮ್ಮ 20 ದಿನದ ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸರು ಬೆಳಗಾವಿಯಲ್ಲಿ ಮಗುವನ್ನು ಖರೀದಿಸಿದವರನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Suraj Mahaveer Utture
- Updated on: Jul 11, 2025
- 10:24 pm