ಆಂಧ್ರಪ್ರದೇಶ: ಪ್ರೇಮ ಪ್ರಕರಣ, ಮಗಳಿಗೆ ನೇಣು ಬಿಗಿದು ಸುಟ್ಟು ಹಾಕಿದ್ದ ವ್ಯಕ್ತಿ ಪೊಲೀಸರಿಗೆ ಶರಣು
ಮಗಳನ್ನು ಕೊಂದು ಸುಟ್ಟು ಹಾಕಿದ್ದ ವ್ಯಕ್ತಿ ಇದೀಗ ಪೊಲೀಸರ ಮುಂದೆ ಶರಣಾಗಿದ್ದಾನೆ. ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಗಳು ಓರ್ವ ಯುವಕನ್ನು ಪ್ರೀತಿಸುತ್ತಿದ್ದಳು, ಇದಕ್ಕೆ ಅವರು ಒಪ್ಪಿರಲಿಲ್ಲ, ಆಕೆ ಆಗಾಗ ಆತನನ್ನು ಭೇಟಿಯಾಗುತ್ತಿದ್ದಳು. ಇಡೀ ಕುಟುಂಬದಲ್ಲಿ ಇವಳೊಬ್ಬಳೇ ವಿದ್ಯಾವಂತೆ ಆಕೆಯ ಮೇಲೆ ನೂರಾರು ಕನಸುಗಳನ್ನು ಪೋಷಕರು ಕಟ್ಟಿದ್ದರು. ಆದರೆ ಆಕೆ ಪ್ರೀತಿಯಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾಳೆಂದು ಪೋಷಕರು ಹಲವು ಬಾರಿ ಬುದ್ಧಿ ಮಾತು ಹೇಳಿದ್ದರು. ಕೊನೆಗೆ ತಂದೆ ಆಕೆಯನ್ನು ಕೊಂದು ಬೆಂಕಿ ಹಾಕಿ ಸುಟ್ಟು ಹಾಕಿದ್ದ.

ಆಂಧ್ರಪ್ರದೇಶ, ಮಾರ್ಚ್ 06: ಮಗಳು ಪ್ರೀತಿಸುತ್ತಿರುವ ವಿಚಾರ ತಿಳಿದು ಕೋಪಗೊಂಡು ಆಕೆಯನ್ನು ನೇಣು ಬಿಗಿದು ಕೊಂದು, ಸುಟ್ಟು ಹಾಕಿದ್ದ ವ್ಯಕ್ತಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆ ದಕ್ಷಿಣ ರಾಜ್ಯದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಗುಂತಕಲ್ ಪಟ್ಟಣದ ಟಿ ರಾಮಾಂಜನೇಯುಲು ಎಂದು ಗುರುತಿಸಲಾದ ಆರೋಪಿ ಮಾರ್ಚ್ 1 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಸಾಪುರಂ ಗ್ರಾಮದ ನಿರ್ಜನ ಸ್ಥಳದಲ್ಲಿ ತನ್ನ ಮಗಳನ್ನು ನೇಣು ಬಿಗಿದು ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಆರೋಪಿ ತಿಂಡಿ ಮತ್ತು ಉಪಾಹಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆಕೆ ಪೋಷಕರ ಮಾತನ್ನು ಧಿಕ್ಕರಿಸಿ ಪ್ರಿಯಕರನನ್ನು ಆಗಾಗ ಭೇಟಿಯಾಗುತ್ತಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಮತ್ತು ತನ್ನ ತಾಯಿಯೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದಳು. ಇದರಿಂದ ಬೇಸರಗೊಂಡ ತಂದೆ ಮಾರ್ಚ್ 1 ರಂದು ಕಸಾಪುರಂಗೆ ಕರೆದೊಯ್ದು ಮರಕ್ಕೆ ನೇತು ಹಾಕಿದ್ದಾರೆ.
ಮತ್ತಷ್ಟು ಓದಿ: ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ
ಕಳೆದ ಐದು ವರ್ಷಗಳಿಂದ ತನ್ನ ಗೆಳೆಯನನ್ನು ಪ್ರೀತಿಸುತ್ತಿದ್ದಳು. ಆದರೆ, ಅವರ ಪೋಷಕರಿಗೆ ಈ ಸಂಬಂಧದ ಬಗ್ಗೆ ತಿಳಿದ ನಂತರ ಅವರ ಸಂಬಂಧವನ್ನು ನಿರಾಕರಿಸಿದ್ದರು. ಯುವತಿ ಎರಡನೇ ವರ್ಷದ ಪದವಿ ಪಡೆಯುತ್ತಿದ್ದಳು, ಗೆಳೆಯ ಹೈದರಾಬಾದ್ನಲ್ಲಿ ಪದವಿ ಪಡೆಯುತ್ತಿದ್ದ. ಮೃತಳು ಟಿ ರಾಮಾಂಜನೇಯುಲು ಅವರ ನಾಲ್ವರು ಹೆಣ್ಣುಮಕ್ಕಳಲ್ಲಿ ಕಿರಿಯವಳಾಗಿದ್ದಳು.
ಆಕೆಯ ಮೂವರು ಅಕ್ಕಂದಿರು ಅವಿದ್ಯಾವಂತರಾಗಿದ್ದರಿಂದ, ಆಕೆಯ ಒಡಹುಟ್ಟಿದವರಲ್ಲಿ ಶಿಕ್ಷಣ ಪಡೆದ ಏಕೈಕ ವ್ಯಕ್ತಿ ಅವಳು. ಪೊಲೀಸರ ಪ್ರಕಾರ, ಆಕೆಯ ಪೋಷಕರು ಆಕೆಯ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದರು. ಆಕೆಯ ತಂದೆಯ ಹತಾಶೆಗೆ ಇದು ಒಂದು ಕಾರಣವಾಗಿರಬಹುದು. ರಾಮಾಂಜನೇಯುಲು ಪೊಲೀಸರ ಮುಂದೆ ಶರಣಾದರು, ಪೊಲೀಸರು ಈಗ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 103 ರ ಅಡಿಯಲ್ಲಿ ಕಾನೂನು ಕ್ರಮಗಳನ್ನು ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








