ಪವಿತ್ರಾ ಗೌಡ ಜತೆ ನನ್ನದು ಲಿವ್​ಇನ್ ರಿಲೇಷನ್​ಶಿಪ್​; ದರ್ಶನ್​ ಒಪ್ಪಿಕೊಂಡ ಹಲವು ಸತ್ಯಗಳು

ಕಳೆದ 10 ವರ್ಷಗಳಿಂದಲೂ ದರ್ಶನ್​ ಮತ್ತು ಪವಿತ್ರಾ ಗೌಡ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇವರಿಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಇನ್ನುಳಿದ ಆರೋಪಿಗಳ ಜೊತೆ ತಮ್ಮ ಸ್ನೇಹ-ಸಂಬಂಧ ಎಂಥದ್ದು ಎಂಬುದನ್ನು ದರ್ಶನ್​ ವಿವರಿಸಿದ್ದಾರೆ. ಚಾರ್ಜ್​ಶೀಟ್​ನಲ್ಲಿ ಈ ಅಂಗಳು ಉಲ್ಲೇಖ ಆಗಿವೆ.

ಪವಿತ್ರಾ ಗೌಡ ಜತೆ ನನ್ನದು ಲಿವ್​ಇನ್ ರಿಲೇಷನ್​ಶಿಪ್​; ದರ್ಶನ್​ ಒಪ್ಪಿಕೊಂಡ ಹಲವು ಸತ್ಯಗಳು
ಪವಿತ್ರಾ ಗೌಡ, ದರ್ಶನ್​
Follow us
Shivaprasad
| Updated By: ಮದನ್​ ಕುಮಾರ್​

Updated on: Sep 09, 2024 | 3:35 PM

ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಚಾರ್ಜ್​ಶೀಟ್​ ಸಲ್ಲಿಕೆ ಆಗಿದೆ. ಟಿವಿ9ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್ ಪ್ರತಿ ಲಭ್ಯವಾಗಿದೆ. ಇದರಲ್ಲಿ ಆರೋಪಿ ದರ್ಶನ್​ ನೀಡಿದ ಸ್ವಇಚ್ಛಾ ಹೇಳಿಕೆ ಇದೆ. ಈ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ವಿರುದ್ಧ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಮೆಸೇಜ್​ ಮಾಡಿದ್ದಕ್ಕೆ ಇಷ್ಟೆಲ್ಲ ದುರಂತ ನಡೆದು ಹೋಗಿದೆ. ತನಿಖೆಯ ವೇಳೆ ದರ್ಶನ್​ ನೀಡಿದ ಹೇಳಿಕೆಯಲ್ಲಿ ಅನೇಕ ಶಾಕಿಂಗ್​ ಸಂಗತಿಗಳು ತಿಳಿದುಬಂದಿವೆ. ದರ್ಶನ್​ ನೀಡಿದ ಸ್ವಇಚ್ಛಾ ಹೇಳಿಕೆ ಹೀಗಿದೆ..

‘ನಾನು ರಾಜರಾಜೇಶ್ವರಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಚಿತ್ರನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. 2011ರ ಸೆ.9ರಂದು ನನ್ನ ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದರು. ನನ್ನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಮೊ.ಸಂ: 425/2011 ಐಪಿಸಿ ಸೆಕ್ಷನ್ 498ಎ, 355, 307, 323, 5060 ಕೇಸ್ ದಾಖಲಾಗಿ ಖುಲಾಸೆಯಾಗಿರುತ್ತದೆ. ನಾನು, ನನ್ನ ಪತ್ನಿ, ಮಗ ಹೊಸಕೆರೆಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದೇವೆ.’

‘ನನ್ನ ಪತ್ನಿ ಗೃಹಿಣಿ, ಮಗ 10ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ನಾನು, ವಿಜಯಲಕ್ಷ್ಮೀ ಮದುವೆಯಾಗಿ 22 ವರ್ಷವಾಗಿದ್ದು, ಪವಿತ್ರಾಗೌಡ 10 ವರ್ಷಗಳಿಂದ ಲೀವ್​ಇನ್ ರಿಲೇಷನ್​ಶಿಪ್​ನಲ್ಲಿದ್ದು ಪವಿತ್ರಾಗೌಡ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುತ್ತಾರೆ. ಪವನ್ ಮನೆ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿರುತ್ತಾನೆ. ನಂದೀಶ್ ಎಂಬುವನು ನನ್ನ ಅಭಿಮಾನಿ, ಆತನ ಪರಿಚಯವಿದೆ.’

ಇದನ್ನೂ ಓದಿ: ದರ್ಶನ್​​ಗೆ ಅಭಿಮಾನಿಗಳಿಂದಲೇ ಸಂಕಷ್ಟ? ಪ್ರಕರಣದಲ್ಲಿ ಮುಂದಿನ ಹೆಜ್ಜೆಯೇನು?

‘ಲಕ್ಷ್ಮಣ ನನ್ನ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ವಿನಯ್ ಸುಮಾರು 3-4 ವರ್ಷಗಳಿಂದ ನನಗೆ ಪರಿಚಯ ಇದೆ. ವಿನಯ್​ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿರುತ್ತಾರೆ. ನಾಗರಾಜ್ ಮೈಸೂರಿನ ನನ್ನ ಫಾರ್ಮ್​ಹೌಸ್​ ನೋಡಿಕೊಳ್ತಿದ್ದರು. ಪ್ರದೋಶ್​ ನನಗೆ ಸುಮಾರು 16 ವರ್ಷಗಳಿಂದ ಪರಿಚಯವಿದೆ. ಪ್ರದೋಶ್ ಆಗಾಗ ನನ್ನ ಮನೆಗೆ ಬಂದು ಹೋಗುತ್ತಿರುತ್ತಾನೆ. ಚಿತ್ರದುರ್ಗದ ರಾಘವೇಂದ್ರ ನನ್ನ ಅಭಿಮಾನಿಯಾಗಿದ್ದು, ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿರುತ್ತಾನೆ’ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್​​ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್