ದರ್ಶನ್ ಹಾಗೂ ಪವಿತ್ರಾ ಪತಿ-ಪತ್ನಿಯಾ? ಚಾರ್ಜ್ಶೀಟ್ನಲ್ಲಿರೋ ಉಲ್ಲೇಖ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ಅವರ ನಂಬರ್ ಅನ್ನು ದರ್ಶನ್ ಅವರು ಪವೀ ಅಂತ ಸೇವ್ ಮಾಡಿಕೊಂಡಿದ್ದಾರೆ. ತನಿಖೆ ವೇಳೆ ಪೊಲೀಸರು ಮೊಬೈಲ್ನಲ್ಲಿನ ಮಾಹಿತಿ ರಿಟ್ರೀವ್ ಮಾಡಿದಾಗ ಇಂಥ ಸಂಗತಿಗಳು ಬಯಲಾಗಿವೆ.
ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಾಗಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದರು. ಈ ಕಾರಣದಿಂದಲೇ ಇಬ್ಬರೂ ಅರೆಸ್ಟ್ ಆಗಿದ್ದಾರೆ. ಪವಿತ್ರಾ ಅವರನ್ನು ಪೊಲೀಸರು ದರ್ಶನ್ ಪತ್ನಿ ಎಂದು ಕರೆದಿದ್ದರು. ಇದಕ್ಕೆ ವಿಜಯಲಕ್ಷ್ಮೀ ಆಕ್ರೋಶ ಹೊರಹಾಕಿದ್ದರು. ನಾನು ಅವರ ಪತ್ನಿ ಎಂದಿದ್ದರು. ಹಾಗಾದರೆ ದರ್ಶನ್ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಇದಕ್ಕೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಇದೆ. ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು ಎಂದು ಬರೆಯಲಾಗಿದೆ. ರೇಣುಕಾ ಸ್ವಾಮಿ ಎದುರು ಬಯ್ಯುವಾಗ ದರ್ಶನ್ ಅವರು ಪವಿತ್ರಾರನ್ನು ಪತ್ನಿ ಎಂದು ಕರೆದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Sat, 7 September 24