ನಾನು ಬದುಕಿರುವುದು ಎರಡೇ ತಿಂಗಳು ಎಂದು ಬದುಕಿರುವಾಗಲೇ ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ
ಮನುಷ್ಯನಿಗೆ ಸಾವು ಕಟ್ಟಿಟ್ಟ ಬುತ್ತಿ, ಅದು ಹೇಗೆ ಬರುತ್ತದೆ ಎಂಬ ತಿಳಿವಳಿಕೆಯೂ ನಮಗೆ ಇರಲ್ಲ. ಹೆಚ್ಚಾಗಿ ರೋಗಗಳಿಂದಲ್ಲೇ ಈ ಸಾವು ಎನ್ನುವುದು ಸಂಭವಿಸುತ್ತದೆ. ಅದರಲ್ಲೂ ಈ ಕ್ಯಾನ್ಸರ್ ಎನ್ನುವುದು ಯುವ ಸಮಾಜವನ್ನು ಕಾಡುತ್ತಿದೆ. ಅದೆಷ್ಟು ದಂಪತಿಗಳ ಜೀವಕ್ಕೆ ಇದು ಕರಾಳವಾಗಿದೆ. ಚೀನಾದ ಮಹಿಳೆಯೊಬ್ಬಳಿಗೆ ಈ ಕ್ಯಾನ್ಸರ್ ಎಂಬ ಕತ್ತಲೆ ಕಾಡಿದೆ. ನಾನು ಇನ್ನು ಎರಡು ತಿಂಗಳು ಬದುಕುವುದು ಎಂದು ಆಕೆ ತನ್ನ ಅಂತಿಮ ಕಾರ್ಯವನ್ನು ತಾನೇ ಮಾಡಿದ್ದಾಳೆ. ಇದೀಗ ಈ ಬಗ್ಗೆ ಎಲ್ಲ ಕಡೆ ವೈರಲ್ ಆಗಿದೆ.

ಮನುಷ್ಯ ಈ ಭೂಮಿಗೆ ಬರುವಾಗ ಅವನ ಹುಟ್ಟು ಸಾವಿನ ಲೆಕ್ಕಚಾರಗಳು ಮೊದಲೇ ಆಗಿರುತ್ತದೆ ಎಂಬುದು ಹಿರಿಯರ ಹಾಗೂ ನಮ್ಮ ಹಿಂದೂ ಧರ್ಮಶಾಸ್ತ್ರಗಳಲ್ಲಿ (Hinduism) ಹೇಳಿದ್ದಾರೆ. ಹುಟ್ಟಿದಾಗ ಸಂತೋಷ, ಸತ್ತಾಗ ದುಃಖ ಇದು ಎರಡು ಮನುಷ್ಯ ಜೀವನದಲ್ಲಿ ಬರುವ ಎರಡು ಹಂತ. ಇದನ್ನು ನಾವು ಹೇಗೆ ಸ್ವೀಕಾರ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಇದರಲ್ಲೂ ಸಾವು ಎನ್ನುವುದು ಹೇಗೆ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ, ಅದರೂ ಇಂದಿನ ತಂತ್ರಜ್ಞಾನದಿಂದ ಎಲ್ಲವೂ ತಿಳಿಯುತ್ತದೆ. ಇನ್ನು ಕೆಲವರಿಗೆ ತಮ್ಮ ರೋಗದಿಂದ ತಮ್ಮ ಸಾವಿನ ರಹಸ್ಯ ಗೊತ್ತಾಗುತ್ತದೆ. ಅದರೂ ಛಲದಿಂದ ಕೆಲವರು ಬದುಕುತ್ತಾರೆ. ಆ ಮೂಲಕ ಇಡೀ ಸಮಾಜಕ್ಕೆ ಸ್ಪೂರ್ತಿಯಾಗುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದೆ. ಅದರಲ್ಲೂ ಈ ಕ್ಯಾನ್ಸರ್ ಎಂಬ ಆರೋಗ್ಯ ಸಮಸ್ಯೆ ಇತ್ತೀಚೆಗೆ ಅನೇಕ ಯುವಕರಲ್ಲಿ ಕಂಡು ಬರುತ್ತಿದೆ. ಅದೆಷ್ಟೋ ಜನ ಕ್ಯಾನ್ಸರ್ (Cancer) ಗೆದ್ದದ್ದು ಇದೆ. ಇನ್ನು ಅನೇಕರು ಈ ರೋಗದಿಂದ ಹೋರಾಟ ಮಾಡಿ ಸೋತ ಉದಾಹರಣೆಗಳು ಇದೆ. ಆದರೆ ಇಲ್ಲೊಂದು ಘಟನೆ ವಿಚಿತ್ರವಾಗಿದೆ. ಚೀನಾದ 30 ವರ್ಷದ ಮಹಿಳೆ ತನಗೆ ಕ್ಯಾನ್ಸರ್ ಇದೆ. ಇನ್ನು ಸ್ವಲ್ಪ ದಿನ ಬದುಕಿರುವುದು ಎಂದು ತನ್ನ ಎಲ್ಲ ಸಂಬಂಧಿಕರನ್ನು ಕರೆದು ತನ್ನ ಅಂತ್ಯಸಂಸ್ಕಾರವನ್ನು ಜೀವಂತ ಇರುವಾಗಲೇ ಮಾಡಿದ್ದಾಳೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಬಗ್ಗೆ ಒಂದು ವರದಿಯನ್ನು ಮಾಡಿದೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಜಿಯಾಂಗ್ ಯಿ ಎಂಬ ಮಹಿಳೆಗೆ ಮೂರು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆಕೆ ಇನ್ನು ಎರಡು ತಿಂಗಳು ಮಾತ್ರ ಬದುಕುವುದು ಎಂದು ವೈದ್ಯರು ಹೇಳಿದರು. ಈ ವಿಚಾರ ಆಕೆಗೆ ಸೇರಿದಂತೆ, ಅವಳ ಮನೆಯವರಿಗೂ ದುಃಖ ಉಂಟು ಮಾಡಿತ್ತು. ಆದರೆ ಆಕೆ ಮಾತ್ರ ಗಟ್ಟಿ ನಿರ್ಧಾರ ಮಾಡಿಕೊಂಡು ಛಲದಿಂದ ಬದುಕುತ್ತಿದ್ದಾಳೆ. ಜೀವಂತವಾಗಿರುವಾಗ ಜಗತ್ತಿಗೆ ಮತ್ತು ತನ್ನ ಸ್ನೇಹಿತರಿಗೆ ವಿದಾಯ ಹೇಳಬೇಕು ಎಂಬುದು ಆಕೆಯ ಆಸೆಯಾಗಿತ್ತು. ಅದಕ್ಕಾಗಿ ತನ್ನ ಮನೆಗೆ ಎಲ್ಲರನ್ನೂ ಕರೆದು ತನ್ನ ಅಂತಿಮ ವಿಧಿ ವಿಧಾನಗಳು ಅಥವಾ ಸತ್ತ ನಂತರ ಮಾಡಬೇಕಾದ ಕಾರ್ಯಗಳನ್ನು ತನ್ನ ಮುಂದೆಯೇ ಮಾಡುವಂತೆ ಕೇಳಿಕೊಂಡಿದ್ದಾಳೆ.
ಗಂಡ ಮತ್ತು ಮಗುವಿನ ಮುಂದೆಯೇ, ತನ್ನ ಅಂತಿಮ ಕ್ರಿಯೆಯನ್ನು ಮಾಡಿದ್ದಾಳೆ. ಇದಕ್ಕಾಗಿ ತನ್ನ ಭಾವಚಿತ್ರವನ್ನು ತಾನೇ ಚಿತ್ರಿಸಿ, ಹೂವಿನ ಹಾರ ಹಾಕಿದ್ದಾಳೆ. ಇನ್ನು ಮನೆಗೆ ಬರುವವರಿಗೆ ಒಂದು ಕಾರ್ಡ್ ಕೂಡ ನೀಡಿದ್ದಾಳೆ. ಅದರಲ್ಲಿ ನಮಸ್ತೆ! “ನಾನು ದುರಾದೃಷ್ಟವಂತನಲ್ಲದಿದ್ದರೆ… ಮುಂದಿನ ಎರಡು ವರ್ಷಗಳಲ್ಲಿ ನಾನು ದೇವತೆಯಾಗುತ್ತೇನೆ.. ಖಂಡಿತವಾಗಿಯೂ ನನಗೆ ನಿಮ್ಮ ಆಶೀರ್ವಾದವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: ಇದೊಂದು ಹೃದಯಸ್ಪರ್ಶಿ ವಿಡಿಯೋ : ಹಕ್ಕಿಗೆ ಆಹಾರ ನೀಡಿ ಹಸಿವು ನೀಗಿಸುತ್ತಿರುವ ಪುಟಾಣಿ
ಆಕೆಯ ಅಂತಿಮ ಕಾರ್ಯದಲ್ಲಿ ಆಕೆ ಸ್ನೇಹಿತರು, ಮನೆಯವರು ಭಾಗವಹಿಸಿದರು. ಅದರಲ್ಲಿ ಒಬ್ಬರು ಹೀಗೆ ಹೇಳಿದ್ದಾರೆ. “ನಿಮ್ಮ ಭವಿಷ್ಯದಲ್ಲಿ ಸೂರ್ಯನಂತೆ ಪ್ರಕಾಶಮಾನವಾಗಿ ಬದುಕಿತ್ತೀರಾ” ಎಂದು ಹೇಳಿದ್ದಾರೆ. ಮತ್ತೊಬ್ಬ ಮಹಿಳೆ ಜಿಯಾಂಗ್‌ನನ್ನು ತಬ್ಬಿಕೊಂಡು ಸಾಂತ್ವನ ಹೇಳುತ್ತಾರೆ. “ಈ ರೋಗ ತುಂಬಾ ಭಯಾನಕವಲ್ಲ, ನಾನು ಈ ನೋವನ್ನು ಅನುಭವಿಸಿದ್ದೇನೆ, ಆದರೆ ಈಗ ಅದನ್ನು ಗೆದ್ದು ಬಂದಿದ್ದೇನೆ. ನೀವು ಕೂಡ ಇದನ್ನು ಗೆಲ್ಲುತ್ತೀರಾ ಎಂದು ಹೇಳಿದ್ದಾರೆ. ಮನೆಯವರು ಆಕೆಯ ಬಾಲ್ಯ, ವೃತ್ತಿ ಜೀವನ, ಎಲ್ಲವನ್ನು ನೆನಪಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 15 April 25