ಕಾರಿನ ಡಿಕ್ಕಿಯ ಹೊರಗೆ ನೇತಾಡುತ್ತಿತ್ತು ಕೈ, ಬೈಕ್ ಸವಾರನೊಬ್ಬ ತಡೆದು ನಿಲ್ಲಿಸಿ ನೋಡಿದಾಗ ಕಂಡಿದ್ದೇನು?
ಕಾರಿನ ಡಿಕ್ಕಿಯ ಹೊರಗೆ ಕೈಯೊಂದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ಹೋಗುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿತ್ತು, ಈ ವಿಡಿಯೋವನ್ನು ಅಲ್ಲಿಯೇ ಹಿಂದೆ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಚಿತ್ರೀಕರಿಸಿದ್ದರು.

ಮುಂಬೈ, ಏಪ್ರಿಲ್ 15: ಕಾರಿನ ಡಿಕ್ಕಿಯ ಹೊರಗೆ ಕೈಯೊಂದು ನೇತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ಹೋಗುತ್ತಿದ್ದ ಕಾರೊಂದರ ಡಿಕ್ಕಿಯಿಂದ ಕೈಯೊಂದು ನೇತಾಡುತ್ತಿತ್ತು, ಈ ವಿಡಿಯೋವನ್ನು ಅಲ್ಲಿಯೇ ಹಿಂದೆ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಚಿತ್ರೀಕರಿಸಿದ್ದರು.
ಈ ವಿಡಿಯೋ ಪೊಲೀಸರಿಗೆ ತಲುಪಿದ ನಂತರ ನವಿ ಮುಂಬೈ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡವು ಕಾರ್ಯಪ್ರವೃತ್ತರಾಗಿ ವಾಹನವನ್ನು ಪತ್ತೆಹಚ್ಚಲು ಪ್ರಾರಂಭಿಸಿತು. ಸೋಮವಾರ ಸಂಜೆ ಸುಮಾರು 6.45 ರ ಸುಮಾರಿಗೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ರಾತ್ರಿ 8.30 ರ ಸುಮಾರಿಗೆ, ಪೊಲೀಸರು ಘಾಟ್‌ಕೋಪರ್ ಬಳಿ ಕಾರನ್ನು ಪತ್ತೆಹಚ್ಚಿದಾಗ ಸುಮಾರು ಮೂವರು ಹುಡುಗರು ತಮ್ಮ ಲ್ಯಾಪ್‌ಟಾಪ್ ಪ್ರಚಾರಕ್ಕಾಗಿ ರೀಲ್ಸ್ ತಯಾರಿಸುತ್ತಿರುವುದು ಕಂಡುಬಂದಿದೆ. ಆ ಹುಡುಗರು ಮುಂಬೈನವರಾಗಿದ್ದು, ಮದುವೆಗೆಂದು ನವಿ ಮುಂಬೈಗೆ ಬಂದಿದ್ದರು. ನಾವು ಅವರನ್ನು ಬಂಧಿಸಿ ಸತ್ಯಗಳನ್ನು ಪರಿಶೀಲಿಸಿದ್ದೇವೆ ಮತ್ತು ಇದರಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ (ಅಪರಾಧ ಶಾಖೆ) ಅಜಯ್ ಲ್ಯಾಂಡ್ಗೆ ಹೇಳಿದ್ದಾರೆ.
#WATCH | Prank Gone Wrong: Panic In Navi Mumbai As Hand Seen Hanging From Car Boot@Raina_Assainar #Mumbai #NaviMumbai #MumbaiNews pic.twitter.com/6pgK8lSVmg
— Free Press Journal (@fpjindia) April 14, 2025
ಪೊಲೀಸರು ತಾವು ಸೆರೆಹಿಡಿದ ಎಲ್ಲಾ ವೀಡಿಯೊಗಳನ್ನು ಪಡೆದುಕೊಂಡು ಪರಿಶೀಲಿಸಿದರು. ಬೈಕರ್ ಕಾರನ್ನು ನಿಲ್ಲಿಸಿ ಡಿಕ್ಕಿ ತೆರೆಯಲು ಕೇಳುವ ಮೊದಲು ಕೈ ಹೊರಚಾಚಿರುವುದನ್ನು ತೋರಿಸುವುದು ರೀಲ್ಸ್ನ ಮುಖ್ಯ ಉದ್ದೇಶ. ಬಳಿಕ ಡಿಕ್ಕಿ ಓಪನ್ ಮಾಡಿದಾಗ ಆ ಹುಡುಗ ಭಯವಾಯಿತೇ ನಾನು ಸತ್ತಿಲ್ಲ ನಾನು ಜೀವಂತವಾಗಿದ್ದೇನೆ.
ಮತ್ತಷ್ಟು ಓದಿ: ಪ್ರೇಯಸಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್ಗೆ ಬಂದ ವಿದ್ಯಾರ್ಥಿ, ಮುಂದೇನಾಯ್ತು ನೋಡಿ
ಇಷ್ಟೆಲ್ಲಾ ನಡೆದ ಬಳಿಕ ಬೈಕರ್ ಬಳಿ ನಾವು ಲ್ಯಾಪ್‌ಟಾಪ್ ಪ್ರೊಮೋಷನ್ ಮಾಡುತ್ತಿದ್ದೇವೆ, ನಮ್ಮ ಲ್ಯಾಪ್ಟಾಪ್ನಲ್ಲಿರುವ ಅದ್ಭುತ ಆಫರ್ಗಳನ್ನು ಕೇಳಿ ಎಂದು ಹೇಳುತ್ತಾನೆ. ಯಾವುದೇ ಎಫ್ಐಆರ್ ದಾಖಲಾಗಿಲ್ಲ, ಪೊಲೀಸರು ಹುಡುಗರ ವಿಚಾರಣೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ