ಮೈಸೂರಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟೊಂದರಿಂದ ಉದ್ವಿಗ್ನ ಸ್ಥಿತಿ, ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ
ಸೋಶಿಯಲ್ ಮೀಡಿಯಾದಲ್ಲಿ ಅನಾಹುತಕಾರಿ ಸಂದೇಶ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಉದಯಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಾರ ಹೇಳುತ್ತಾರೆ. ಕಲ್ಲು ತೂರಾಟ ಬೇಡ, ದಾಂಧಲೆ ಮಾಡಬೇಡಿ ಅಂತ ಪೊಲೀಸರು ಮತ್ತು ಧಾರ್ಮಿಕ ಮುಖಂಡರು ಹೇಳಿದರೂ ಯುವಕರ ಗುಂಪು ಕಲ್ಲು ತೂರಾಟ ಮುಂದುವರಿಸಿದೆ. ಬೇರೆ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಬಲವನ್ನು ತರಿಸಿ ಲಘು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸೆಲ್ಗಳನ್ನು ಸಿಡಿಸಿದ ನಂತರ ಉದ್ವಿಗ್ನ ಗುಂಪು ಚದುರಿದೆ.
ಮೈಸೂರು: ಸಾಮಾನ್ಯವಾಗಿ ಮೈಸೂರು ನಗರದಲ್ಲಿ ಕೋಮುಗಲಭೆ, ಗುಂಪು ಘರ್ಷಣೆಗಳು ನಡೆಯೋದು ವಿರಳ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುರೇಶ್ ಎನ್ನುವರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಪೋಸ್ಟೊಂದು ಉದ್ವಿಗ್ನ ಸ್ಥಿತಿಯನ್ನು ಸೋಮವಾರ ರಾತ್ರಿ ನಿರ್ಮಿಸಿತ್ತು. ಪೋಸ್ಟ್ ನೋಡಿ ಕುಪಿತಗೊಂಡ ಯುವಕರು ಸಾವಿರಾರು ಸಂಖ್ಯೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಯತ್ತ ಬಂದು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಕಾರು ಕಲ್ಲು ತೂರಾಟದಲ್ಲಿ ಜಖಂಗೊಂಡಿದೆ ಮತ್ತು ಬೇರೆ ವಾಹನಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಠಾಣೆಯ ಅವರಣದಲ್ಲಿ ಕಲ್ಲುಗಳು ಬಿದ್ದಿರುವುದನ್ನು ನೋಡಬಹುದು. ನಮ್ಮ ಮೈಸೂರರು ವರದಿಗಾರ ಸ್ಥಳದಿಂದ ನೀಡಿರುವ ವರದಿ ಇದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರು: ಮೂಟೆಗಟ್ಟಲೆ ಕಲ್ಲುಗಳನ್ನು ತಂದಿಟ್ಟು ಕಲ್ಲುತೂರಾಟ ನಡೆಸಲಾಯ್ತೇ? ಹಲವು ಅನುಮಾನ ಸೃಷ್ಟಿ