ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋದ ವ್ಯಕ್ತಿ, ಮುಂದೇನಾಯ್ತು ನೋಡಿ
ಕೆಲವರಿಗೆ ಫೋಟೋ ಕ್ರೇಜ್ ಸಿಕ್ಕಾಪಟ್ಟೆ ಇರುತ್ತದೆ. ಹೀಗಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ಕ್ಯಾಮೆರಾ ಗೆ ಪೋಸ್ ನೀಡುತ್ತಾ ಸೆಲ್ಫಿ ಕ್ಲಿಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಹೌದು, ಈಗಿನ ಕಾಲದ ಯುವಕರು ಕ್ರೂರ ಪ್ರಾಣಿಗಳ ಜೊತೆಗೆ ಸೆಲ್ಫಿ ಕ್ಲಿಕಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋಗಿ ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಕಾಡಿನ ರಾಜ ಸಿಂಹ (lion) ಹೆಸರು ಕೇಳಿದ ಕೂಡಲೇ ಮೈ ನಡುಗುತ್ತದೆ. ಹೆಸರಿಗೆ ತಕ್ಕಂತೆ ರಾಜನಂತೆ ಗಾಂಭೀರ್ಯದಿಂದ ನಡಿಗೆ. ಆದರೆ ಸಿಂಹವು ಜೋರಾಗಿ ಗರ್ಜಿಸಿದರೇನೇ ಸಾಕು ಜೀವವೆ ಕೈಗೆ ಬಂದು ಬಿಡುತ್ತದೆ. ಕೆಲವರು ಸಿಂಹ ಜೊತೆಗೆ ಸೆಲ್ಫಿ ಕ್ಲಿಕಿಸಲು ಹೋದಾಗ ದಾಳಿ (attack) ಮಾಡುವುದೇ ಹೆಚ್ಚು. ಇದೀಗ ಇಂತಹದ್ದೆ ವಿಡಿಯೋ (video) ವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬನು ಮನೆಯಲ್ಲಿ ಸಾಕು ಸಿಂಹದೊಂದಿಗೆ ಸೆಲ್ಫಿ (selfi) ಕ್ಲಿಕಿಸಲು ಹೋಗಿದ್ದು ಗಬಕ್ಕನೆ ಕುತ್ತಿಗೆ ಬಾಯಿ ಹಾಕಿದೆ. ಈ ಭಯಾನಕ ವಿಡಿಯೋ (horrible video) ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ (social media) ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಈ ವಿಡಿಯೋವನ್ನು @zarnab.lashaari ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ನೀವು ಸಿಂಹದೊಂದಿಗೆ ಪೋಸ್ ನೀಡಲು ಪ್ರಯತ್ನಿಸಿದಾಗ ಸಿಂಹವು ನಿಮ್ಮ ಕುತ್ತಿಗೆ ಹಿಡಿದರೆ ಏನಾಗಬಹುದು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಿಂಹವೊಂದು ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ನೋಡಬಹುದು. ಅಷ್ಟರಲ್ಲಿ ವ್ಯಕ್ತಿಯೊಬ್ಬನು ಸಿಂಹದ ಬಳಿ ಬಂದು ಸೆಲ್ಫಿ ಕ್ಲಿಕಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆಯಲ್ಲಿ ಏಕಾಏಕಿ ಸಿಂಹವೊಂದು ವ್ಯಕ್ತಿಯ ಕುತ್ತಿಗೆಗೆ ಗಬ್ಬಕ್ಕನೆ ಬಾಯಿ ಹಾಕಿದೆ. ಆದರೆ ಸಿಂಹವನ್ನು ನೋಡಿಕೊಳ್ಳುವ ವ್ಯಕ್ತಿಯೂ ಅಲ್ಲೇ ಇದ್ದ ಕಾರಣ ಸಿಂಹದ ಮುಖಕ್ಕೆ ಹೊಡೆದು ವ್ಯಕ್ತಿಯ ಜೀವವನ್ನು ಉಳಿಸಿದ್ದಾನೆ. ಅದೃಷ್ಟವಶಾತ್ ಆ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ.
ಇದನ್ನೂ ಓದಿ : ತರಗತಿ ಕೊಠಡಿ ತಂಪಾಗಿಸಲು ಸಾಂಪ್ರಾದಾಯಿಕ ವಿಧಾನದ ಮೊರೆ ಹೋದ ಪ್ರಾಂಶುಪಾಲೆ, ಇಲ್ಲಿದೆ ವಿಡಿಯೋ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಈ ರೀತಿ ದಾಳಿ ನೋಡಿದ ಬಳಿಕ ನೀವು ಕಾಡು ಪ್ರಾಣಿಗಳನ್ನು ಮನೆಯಲ್ಲಿ ಅಲ್ಲ ಕಾಡಿನಲ್ಲಿಯೇ ಸಾಕಬೇಕು ಎಂದು ತಿಳಿದುಕೊಳ್ಳಿ’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಕಾಡು ಪ್ರಾಣಿಗಳನ್ನು ಎಂದಿಗೂ ಸಾಕುಪ್ರಾಣಿಗಳಾಗಿ ಸಾಕಬಾರದು’ ಎಂದಿದ್ದಾರೆ. ಇನ್ನೊಬ್ಬರು, ಆ ವ್ಯಕ್ತಿಯಿಲ್ಲದೇ ಹೋಗಿದರೆ ಸೆಲ್ಫಿ ಕ್ಲಿಕಿಸಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿತ್ತು’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನು ಕೆಲವರು ‘ಈ ರೀತಿ ಕ್ರೂರ ಪ್ರಾಣಿಗಳ ಜೊತೆಗೆ ಸೆಲ್ಫಿ ಕ್ಲಿಕಿಸಲು ಹೋಗುವುದು ಯಾಕೆ’ ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಓದಿ