ತರಗತಿ ಕೊಠಡಿ ತಂಪಾಗಿಸಲು ಸಾಂಪ್ರಾದಾಯಿಕ ವಿಧಾನದ ಮೊರೆ ಹೋದ ಪ್ರಾಂಶುಪಾಲೆ, ಇಲ್ಲಿದೆ ವಿಡಿಯೋ
ಈಗಿನ ಕಾಲದಲ್ಲಿ ಗೋಡೆಗೆ ಸೆಗಣಿ ಹಚ್ಚುವುದು ಬಿಡಿ ಅಂಗಳಕ್ಕೆ ಸೆಗಣಿ ಹಚ್ಚುವುದನ್ನು ನೋಡುವುದೇ ಕಡಿಮೆ. ಹಿಂದೆಲ್ಲಾ ಮನೆಯ ನೆಲ ಹಾಗೂ ಅಂಗಳಕ್ಕೆ ಸೆಗಣಿ ಹಚ್ಚಿ ಮನೆಯ ಅಂದವನ್ನು ಹೆಚ್ಚಿಸುತ್ತಿದ್ದರು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿ ಕಾಲೇಜಿನ ಪ್ರಾಂಶುಪಾಲರೊಬ್ಬರು, ಬಿಸಿಲಿನ ಬೇಗೆಯಿಂದ ಶಾಖವನ್ನು ತಡೆಯಲು ಗೋಡೆಗಳಿಗೆ ಹಸುವಿನ ಸೆಗಣಿಯನ್ನು ಲೇಪಿಸಿದ್ದು, ಪ್ರಾಂಶುಪಾಲರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿ, ಏಪ್ರಿಲ್ 14: ಕೆಲವು ಕಡೆಗಳಲ್ಲಿ ವರುಣನ ಸಿಂಚನವಾಗಿದ್ದರೂ ಕೂಡ, ಇನ್ನು ಕೆಲವೆಡೆಯಲ್ಲಿ ಬಿಸಿಲಿ (summer) ನ ಝಳ (heat) ವು ಜೋರಾಗಿದೆ. ಮನೆಯ ಹೊರಗೆ ಬಿಡಿ, ಮನೆಯೊಳಗೇ ಇರಲು ಆಗುತ್ತಿಲ್ಲ. ದಿನವಿಡೀ ಫ್ಯಾನ್ (fan) ತಿರುಗಿದ್ದರೂ ಸೆಕೆಯನ್ನು ಕಡಿಮೆಯಾಗಲ್ಲ. ಕೆಲವರಂತೂ ಮನೆಗೆ ಎಸಿ (air cooler) ಅಳವಡಿಕೆ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಇದೀಗ ದೆಹಲಿ ವಿಶ್ವವಿದ್ಯಾನಿಲಯ ಕಾಲೇಜಿ (dehli university college) ನ ಪ್ರಾಂಶುಪಾಲ (principal) ರು ಬಿಸಿಲಿನ ಶಾಖದಿಂದ ಮುಕ್ತಿ ಪಡೆಯಲು ತರಗತಿ ಕೊಠಡಿಗಳಿಗೆ ಸೆಗಣಿ (Cow dung) ಲೇಪಿಸುತ್ತಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋವನ್ನು ಪ್ರೊಫೆಸರ್ ವಿಜೇಂದರ್ ಚೌಹಾಣ್ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ, ‘ತರಗತಿಯ ಗೋಡೆಗಳ ಮೇಲೆ ಹಸುವಿನ ಸಗಣಿಯನ್ನು ಲೇಪಿಸಲು ಉತ್ತೇಜಿಸುವ ಕಾಲೇಜಿನ ವಿದ್ಯಾರ್ಥಿಗಳ ನೇಮಕಾತಿ ಅವಕಾಶವನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ನೀವು ಉದ್ಯೋಗದಾತರಾಗಿದ್ದರೆ ಹಾಗೂ ಅಂತಹ ಪ್ರಾಧ್ಯಾಪಕರಿರುವ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅರ್ಜಿದಾರರನ್ನು ನೇಮಿಸಿಕೊಳ್ಳುತ್ತೀರಾʼ ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
She is Principal of a college of my University. Duly plastering cow-shit on classroom walls. I am concerned about many things – to begin with- If you are an employer and applicant studied from an institution which has such academic leader- what are odds of her getting hired? pic.twitter.com/0olZutRudS
— Vijender Chauhan (@masijeevi) April 13, 2025
ವೈರಲ್ ಆಗಿರುವ ವಿಡಿಯೋದಲ್ಲಿ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಯ ಸಹಾಯದಿಂದ ಗೋಡೆಗಳಿಗೆ ಹಸುವಿನ ಸೆಗಣಿ ಲೇಪಿಸುವುವುದನ್ನು ಕಾಣಬಹುದು ʼ ಸಿ ಬ್ಲಾಕ್ನಲ್ಲಿ ತರಗತಿ ಕೊಠಡಿಯನ್ನು ತಂಪಾಗಿಸಲು ಸ್ಥಳೀಯ ವಿಧಾನಗಳನ್ನು ಬಳಸಲಾಗುತ್ತಿದೆʼ ಎಂದು ಪ್ರಿನ್ಸಿಪಾಲರು ತಿಳಿಸಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ : ಮನೆ ಕೆಲಸದಾಕೆಯ ಸ್ಥಾನವನ್ನು ಕಸಿದುಕೊಳ್ಳುತ್ತಿದೆ ರೋಬೋಟ್, ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ರೋಬೋಟ್ ಬಳಕೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋಗೆ ಬಳಕೆದಾರರೊಬ್ಬರು, ‘ವಿಶ್ವವಿದ್ಯಾನಿಲಯದ ಎಲ್ ಬಿ ಕಾಲೇಜಿನ ಪ್ರಾಂಶುಪಾಲರು ಮೊದಲು ಕಾಲೇಜಿನೊಳಗೆ ಹಸುವನ್ನು ಕಟ್ಟಿ ಹಾಕಿದರು. ಸೆಗಣಿಯನ್ನು ಬಳಸಿಕೊಂಡು ಕಾಲೇಜಿನ ಗೋಡೆಗಳಿಗೆ ಸುಣ್ಣ ಬಳಿಯುವ ಕೆಲಸವೂ ಆರಂಭವಾಗಿದೆ. ಕಾಲೇಜುಗಳಲ್ಲಿ ಗೋಮೂತ್ರ ಕುಡಿಯುವುದನ್ನು ಕಡ್ಡಾಯಗೊಳಿಸಿದರೆ ದೇಶ ವಿಶ್ವಗುರುವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ಗ್ರಾಮೀಣ ಪ್ರದೇಶದಲ್ಲಿ ಇದು ಸರ್ವೇ ಸಾಮಾನ್ಯವಾಗಿರುತ್ತದೆ. ಇದು ಬೇಸಿಗೆಯಲ್ಲಿ ಕೋಣೆಯನ್ನು ತಂಪಾಗಿರಿಸುತ್ತದೆ ‘ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ಇದೇನು ಹಳ್ಳಿ ಮನೆಯಲ್ಲ. ಕಾಲೇಜು ಕೊಠಡಿ ತಂಪಾಗಿರಬೇಕೆಂದು ಬಯಸಿದರೆ, ಎಸಿ ಖರೀದಿಸಿ ‘ ಎಂದು ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 am, Tue, 15 April 25