AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಕೆಲಸದಾಕೆಯ ಸ್ಥಾನವನ್ನು ಕಸಿದುಕೊಳ್ಳುತ್ತಿದೆ ರೋಬೋಟ್, ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ರೋಬೋಟ್ ಬಳಕೆ

ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ ಹೆಚ್ಚಿನವರು ಮನೆಕೆಲಸದಾಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದನ್ನು ನೋಡಬಹುದು..ಆದರೆ ಇದೀಗ ಮನೆಕೆಲಸದಾಕೆಯ ಸ್ಥಾನವನ್ನು ರೋಬೋಟ್ ಗಳು ಆಕ್ರಮಿಸಿಕೊಂಡಿವೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನವರು ಮನೆಕೆಲಸಕ್ಕಾಗಿ ರೋಬೋಟ್ ಗಳನ್ನು ಖರೀದಿಸುತ್ತಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಮನೆ ಕೆಲಸದಾಕೆಯ ಸ್ಥಾನವನ್ನು ಕಸಿದುಕೊಳ್ಳುತ್ತಿದೆ ರೋಬೋಟ್, ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ರೋಬೋಟ್ ಬಳಕೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 14, 2025 | 4:42 PM

ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಎಲ್ಲರೂ ತಂತ್ರಜ್ಞಾನ (technology) ದೊಂದಿಗೆ ಬೆಸೆದುಕೊಂಡಿದ್ದಾರೆ. ಆದರೆ ನೀವೇನಾದ್ರೂ ಅಂಡ್ರಾಯ್ಡ್ ಕುಂಜಪ್ಪನ್ (android kunjappan) ಸಿನಿಮಾ ನೋಡಿದರೆ ಮಿಕ್ಸರ್‌ ಅನ್ನೇ ಬಳಸದ ಅಪ್ಪನಿಗೆ ಮಗ ರೋಬೋಟ್‌ (robot) ತಂದು ಕೊಟ್ಟರೆ ಆಗುವ ಎಡವಟ್ಟುಗಳ ಸ್ಪಷ್ಟ ಚಿತ್ರಣ ಇಲ್ಲಿದೆ. ಹೌದು, ಆಧುನಿಕ ತಂತ್ರಜ್ಞಾನವನ್ನು ಧಿಕ್ಕರಿಸಿ ಬದುಕುವ ಅಪ್ಪ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಚಿಂತಿಸುವ ಮಗ, ಈ ಸಿನಿಮಾವೂ ಆಧುನಿಕತೆಗೆ ಬೆಸೆದುಕೊಂಡಿರುವ ಜನರಿಗೆ ಹತ್ತಿರವಾದಂತಿದೆ. ಈಗಿನವರು ಅಡುಗೆ ಕೆಲಸ ಸೇರಿದಂತೆ ಸಣ್ಣ ಪುಟ್ಟ ಕೆಲಸವನ್ನು ಮಾಡಲು ಮನೆಕೆಲಸದವರನ್ನು ನೇಮಿಸಿಕೊಳ್ಳುವ ಮೂಲಕ ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಮಾಯಾನಗರಿ ಬೆಂಗಳೂರಿನಲ್ಲಿ (bengaluru) ಈಗ ಮನೆಕೆಲಸಗಾರರ ಸ್ಥಾನವನ್ನು ರೋಬೋಟ್‌ಗಳು ಆಕ್ರಮಿಸಿಕೊಂಡಿದೆ. ಹೀಗಾಗಿ ಬೆಂಗಳೂರಿನ ಬಹುತೇಕ ಮನೆಗಳಲ್ಲಿ ರೋಬೋಟ್ ಗಳನ್ನು ಇಟ್ಟುಕೊಳ್ಳುವ ಪ್ರವೃತ್ತಿಯೂ ಹೆಚ್ಚುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ (times of india) ವರದಿ ಮಾಡಿದೆ.

ದೊಡ್ಡ ದೊಡ್ಡ ಪಟ್ಟಣಗಳಲ್ಲಿ ವಾಸವಿರುವ ಬಹುತೇಕ ಕುಟುಂಬವೂ ಮನೆಕೆಲಸಕ್ಕೆ ಸಂಪೂರ್ಣವಾಗಿ ಯಂತ್ರಗಳು ಹಾಗೂ ಮನೆ ಕೆಲಸದವರನ್ನು ಅವಲಂಬಿಸಿಕೊಂಡಿದೆ. ಈ ಕೆಲಸದಾಕೆಗೆ ಕೊಡುವ ಸಂಬಳವನ್ನೆಲ್ಲಾ ಒಟ್ಟು ಸೇರಿಸಿ ರೋಬೋಟ್ ಖರೀದಿಸಬಹುದು. ಅದಲ್ಲದೇ ಈಗಾಗಲೇ ತಮ್ಮ ದಿನನಿತ್ಯ ಕೆಲಸವನ್ನು ಸುಲಭವಾಗಿಸಲು ರೋಬೋಟ್ ಬಳಸುವ ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೆಬ್ಬಾಳ ನಿವಾಸಿ 35 ವರ್ಷದ ಮನೀಷಾ ರಾಯ್ ತನ್ನ ಮನೆಕೆಲಸದಾಕೆಯ ಬದಲಿಗೆ ರೋಬೋಟ್‌ ಖರೀದಿಸಿರುವ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.

ರೋಬೋಟ್ ಸ್ವಯಂಚಾಲಿತ ಸಾಧನವಾಗಿದ್ದು, ಬಳಕೆದಾರರು ನೀಡಿರುವ ನಿರ್ದೇಶನಗಳನ್ನು ಅನುಸರಿಸಬೇಕು, ಅಗತ್ಯವಿರುವ ಪದಾರ್ಥಗಳನ್ನು ಸೇರಿಸಬೇಕು ಹಾಗೂ ಸೂಕ್ತವಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಯಂತ್ರವು ಉಳಿದ ಪ್ರಕ್ರಿಯೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತದೆ ಎಂದಿದ್ದಾರೆ. ಅಡುಗೆ ಮಾಡುವಾಗ ನಾನು ಮನೆಕೆಲಸಗಳನ್ನು ಮಾಡುತ್ತೇನೆ, ಆಹಾರವೂ ಸುಟ್ಟು ಹೋಗುವುದಿಲ್ಲ ಎನ್ನುವುದರ ಖತರಿ ಇದೆ ಎನ್ನುತ್ತಾರೆ. ಈ ಮನೀಷಾ ರೋಬೋಟ್ ನಿರ್ವಹಿಸಲು ಮೊಬೈಲ್ ಅಪ್ಲಿಕೇಶನ್ ಬಳಸುತ್ತಾರೆ. ರೋಬೋಟ್ ಬಳಕೆಯಿಲ್ಲದೇ ಮನೆಯ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಲು ಸುಲಭವಂತೆ.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಅದಲ್ಲದೇ, ಅಡುಗೆ ರೋಬೋಟ್ ಅಡುಗೆಯವರನ್ನು ಇಟ್ಟುಕೊಳ್ಳುವುದಕ್ಕಿಂತ ಹೆಚ್ಚು ವೆಚ್ಚದಾಯಕವಾಗಿದೆ ಎನ್ನುತ್ತಾರೆ. ಮನೆಯ ಕೆಲಸದಾಕೆಗೆ ತಿಂಗಳಿಗೆ 2,500 ರೂ ಸಂಬಳ ನೀಡಿದ್ದರೂ ಹೆಚ್ಚಿನ ಕೆಲಸ ಇವರೇ ಮಾಡಬೇಕಿತ್ತು. ಆದರೆ ಇದೀಗ ಇವರು ವರ್ಷ 9,000 ರೂ ಉಳಿಸುತ್ತಾರೆ. ಈ ಅಡುಗೆ ರೋಬೋಟ್‌ನ ಬೆಲೆ ಸುಮಾರು 40,000 ರೂ ಆಗಿದ್ದು ಹೂಡಿಕೆ ಮಾಡಿದರೆ ನಷ್ಟವಿಲ್ಲ. ಹೆಚ್ಚು ಸಮಯ ತೆಗೆದುಕೊಳ್ಳದೆ ಬೇಗನೇ ಅಡುಗೆ ಮಾಡಿ ಮುಗಿಸುತ್ತದೆ. 10 ವರ್ಷದ ಮಗು ಕೂಡ ಈ ರೋಬೋಟ್ ನಿರ್ವಹಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದಲ್ಲದೇ, ಅವರ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ, ಅನೇಕರು ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ಬಳಸುತ್ತಿದ್ದಾರೆ, ಆದರೆ ಮಕ್ಕಳ ಆರೈಕೆ ಸೇರಿದಂತೆ ಇನ್ನಿತ್ತರ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಮನೆಕೆಲಸದವರು ಇದ್ದಾರೆಯಂತೆ.

ಇದನ್ನೂ ಓದಿ : ಅಮ್ಮಾ ಹೋಗ್ತಿಯಾ, ಕೆಲಸಕ್ಕೆ ಹೊರಟ ಅಮ್ಮನನ್ನೇ ನೋಡುತ್ತಾ ಅಳುತ್ತಿರುವ ಪುಟಾಣಿ ಕಂದಮ್ಮ

ಬೆಂಗಳೂರು ಮೂಲದ ವಾಸ್ತುಶಿಲ್ಪಿ ಮೀರಾ ವಾಸುದೇವ್, ಎರಡು ವಿಭಿನ್ನ ರೀತಿಯ ರೋಬೋಟ್‌ಗಳನ್ನು ಬಳಸುತ್ತಿದ್ದು, ನಮ್ಮಲ್ಲಿ ವೈರ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಕೂಡ ಇದೆ. ಅಡುಗೆಯನ್ನು ನಾನೇ ಮಾಡುತ್ತೇನೆ. ಈ ರೋಬೋಟ್‌ ಮೇಲ್ಮೈ ಕೊಳೆಯನ್ನು ಸ್ವಚ್ಛಗೊಳಿಸಿ, ಕಾರ್ಪೆಟ್‌ ಗಳ ಮೇಲಿನ ಕೊಳೆಯನ್ನು ತೆಗೆದುಹಾಕುತ್ತದೆ. ಅದಲ್ಲದೇ, ಅಸ್ತವ್ಯಸ್ತವಾಗಿರುವ ವಸ್ತುಗಳ ಸುತ್ತಲೂ ಮತ್ತು ಪೀಠೋಪಕರಣಗಳ ಸುತ್ತಲೂ ಚಲಿಸಿಧೂಳು ಹಾಗೂ ಕೊಳೆಯನ್ನು ತೆಗೆದು ಹಾಕುತ್ತದೆ. ಇಂದಿನ ವೈರ್‌ಲೆಸ್ ವ್ಯಾಕ್ಯೂಮ್ ಕ್ಲೀನರ್‌ಗಳು ಹಗುರವಾಗಿರುತ್ತವೆ ಮತ್ತು ಕಾರ್ಯನಿರ್ವಹಿಸಲು ಸುಲಭ. ಯಾವುದೇ ಒತ್ತಡ ಹಾಕದೇ ಸುಲಭವಾಗಿ ಮನೆಯನ್ನು ಸ್ವಚ್ಛಗೊಳಿಸಬಹುದು ಎಂದಿದ್ದಾರೆ.

ಕೋರಮಂಗಲದ 43 ವರ್ಷದ ರೇಣುಕಾ ಗುರುನಾಥನ್, ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಡಿಶ್‌ವಾಶರ್ ಮತ್ತು ಮನೆಯನ್ನು ಸ್ವಚ್ಛಗೊಳಿಸುವ ರೋಬೋಟ್ ಸೇರಿದಂತೆ ಸ್ವಯಂಚಾಲಿತ ಶುಚಿಗೊಳಿಸುವ ಯಂತ್ರಗಳನ್ನು ಅಳವಡಿಸಿಕೊಂಡಿದ್ದು, ಮನೆಕೆಲಸಕ್ಕೆ ಹೊರಗಿನವರನ್ನು ಅವಲಂಬಿಸಿಕೊಳ್ಳುವುದಕ್ಕಿಂತ ಈ ರೀತಿ ಯಂತ್ರಗಳು ಉತ್ತಮವಾಗಿದೆ. ಆದರೆ ವರ್ಷಕ್ಕೊಮ್ಮೆ ವೃತ್ತಿಪರ ಕ್ಲೀನರ್‌ಗಳನ್ನು ನೇಮಿಸಿಕೊಂಡು ಮನೆಯನ್ನು ಸ್ವಚ್ಛ ಗೊಳಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೋರಮಂಗಲ ನಿವಾಸಿ ರಜಿನಿ ವಿಸ್ಲಾವತ್ ರವರು ಗೃಹಿಣಿಯಾಗಿದ್ದು, ನಾನು ನನ್ನ ಅತ್ತೆ, ಮಾವ, ಗಂಡ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಜನವರಿಯಲ್ಲಿ ನಾನು ಅಡುಗೆ ರೋಬೋಟ್ ಖರೀದಿಸಿದೆ. ಮನೆಕೆಲಸದಾಕೆಯ ಜಾಗವನ್ನು ರೋಬೋಟ್ ಆಕ್ರಮಿಸಿಕೊಂಡಾಗ ಮನೆಯವರು ಆತಂಕ ವ್ಯಕ್ತಪಡಿಸಿದ್ದು ಇದೆ..ಆದರೆ ಇದೀಗ ರೋಬೋಟ್ ಮಾಡಿ ಕೊಡುವ ಊಟ ತಿಂಡಿ ಎಲ್ಲರಿಗೂ ಇಷ್ಟವಾಗುತ್ತಿದೆ. ನನ್ನ ಜೀವನವನ್ನು ತುಂಬಾ ಸುಲಭಗೊಳಿಸಿದ್ದು, ನನಗೆ ಕೆಲಸದವರಿಗಿಂತ ರೋಬೋಟ್‌ಗಳೇ ಇಷ್ಟ. ಅವು ಹೆಚ್ಚು ವಿಶ್ವಾಸಾರ್ಹವಾಗಿದೆ. ಅಡುಗೆ ರೋಬೋಟ್‌ನ ಬೆಲೆ ಸುಮಾರು 40,000 ರೂ. ಈ ಹೂಡಿಕೆ ಮಾಡಿದರೆ ಯಾವುದೇ ನಷ್ಟವಿಲ್ಲ ಎನ್ನುತ್ತಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ