Video: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ
ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದಲ್ಲಿ ಎಷ್ಟೇ ಒತ್ತಡವಿರಲಿ, ಧೈರ್ಯ ತುಂಬುವ ವ್ಯಕ್ತಿಗಳಿದ್ದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ. ಇಲ್ಲೊಬ್ಬ ಯುವತಿಯು ವೃತ್ತಿ ಜೀವನದ ಒತ್ತಡದಿಂದ ಕುಸಿದಿದ್ದು ತಂದೆಯ ಮಾತು ಈಕೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬದುಕಿನಲ್ಲಿ (life) ಯಾವುದೇ ಸಂಬಂಧಗಳು ಬರಲಿ, ಆದರೆ ಕೊನೆತನಕ ಜತೆಗೆ ನಿಲ್ಲುವುದು ತಂದೆ ತಾಯಿ ಮಾತ್ರ. ಪರಿಶುದ್ಧ ಪ್ರೀತಿ ನೀಡಿ ಕಷ್ಟ ಸುಖದಲ್ಲಿ ಜತೆಗೆ ನಿಂತು ಸಾಂತ್ವಾನ ನೀಡುವ ಸಂಬಂಧ ಜತೆಗೆ ಇದ್ದರೆ ಅದಕ್ಕಿಂತ ಇನ್ನೇನು ಬೇಕು. ಈ ಯುವತಿಯೊಬ್ಬಳು ವೃತ್ತಿ ಜೀವನದ ಒತ್ತಡಕ್ಕೆ ಸಿಲುಕಿ ಅಳುತ್ತಿದ್ದು, ತಂದೆಯ (father) ಸಾಂತ್ವಾನದ ಮಾತುಗಳು ಮತ್ತೆ ಎದ್ದು ನಿಲ್ಲುವಂತೆ ಮಾಡಿದೆ. ತಂದೆ ಮಗಳ ಬಾಂಧವ್ಯ ಸಾರುವ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.
Lakshya metha ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಹೃದಯಸ್ಪರ್ಶಿ ವೀಡಿಯೊ. ಯುವತಿಯೊಬ್ಬಳು ತನ್ನ ವೃತ್ತಿಜೀವನದ ಅಗಾಧ ಒತ್ತಡದಲ್ಲಿ ಕುಸಿದು ಬೀಳುತ್ತಾಳೆ. ಆದರೆ ಅವಳ ತಂದೆಯ ಶಾಂತ ಮತ್ತು ಪ್ರೀತಿಯ ಮಾತುಗಳು ಅವಳಿಗೆ ಮತ್ತೆ ಎದ್ದು ನಿಲ್ಲಲು ಶಕ್ತಿಯನ್ನು ನೀಡುತ್ತವೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Heartwarming video 🥹
A young girl breaks down under heavy career pressure, but her father’s calm and loving words give her the strength to stand again ❤️ pic.twitter.com/Cf6IzksQZP
— Lakshay Mehta (@lakshaymehta08) December 2, 2025
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬೆಳಗಿನ ಜಾವ 2 ಗಂಟೆಗೆ ಅಳುತ್ತಾ ತನ್ನ ತಂದೆಗೆ ಕರೆ ಮಾಡುವುದನ್ನು ನೀವು ನೋಡಬಹುದು. ತಂದೆ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದು ನೀನು ವೈದ್ಯೆಯಾದರೆ ಮಾತ್ರ ಎಲ್ಲವೂ ಆಗುತ್ತದೆ ಎಂದಲ್ಲ, ಇಲ್ಲದಿದ್ದರೆ ಏನೂ ಆಗುವುದಿಲ್ಲ ಎಂದಲ್ಲ. ಜಗತ್ತಿನಲ್ಲಿ ಅನೇಕ ಒಳ್ಳೆಯ ಸ್ಥಾನಗಳಿವೆ, ಒಳ್ಳೆಯ ಕೆಲಸಗಳಿವೆ. ಯಾವುದೇ ಒತ್ತಡಕ್ಕೆ ಮಣಿಯಬೇಡ. ಕೂಲ್ ಆಗಿರು. ಕೆಲವೊಮ್ಮೆ ನಿನಗೆ ಓದುವುದರಲ್ಲಿ ಬೇಸರವಾಗುತ್ತದೆ, ಪರವಾಗಿಲ್ಲ ಓದುವುದನ್ನು ನಿಲ್ಲಿಸು ಎಂದು ಹೇಳುವುದನ್ನು ನೋಡಬಹುದು. ಆ ಬಳಿಕ ನನಗೆ ಇನ್ನೂ ವಯಸ್ಸಾಗಿಲ್ಲ, ಹಣದ ಸಮಸ್ಯೆ ಇಲ್ಲ. ನಾನು ಸಾಕಷ್ಟು ಸಂಪಾದಿಸುತ್ತೇನೆ, ಚಿಂತಿಸಬೇಡ ಎಂದು ಧೈರ್ಯ ತುಂಬುತ್ತಿದ್ದಂತೆ ಕಣ್ಣೀರನ್ನು ಒರೆಸುತ್ತಾಳೆ.
ಇದನ್ನೂ ಓದಿ:ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ
ಈ ವಿಡಿಯೋ ನಾಲ್ಕೂವರೆ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಸಮಾಧಾನದ ಮಾತುಗಳು ಎಲ್ಲರಿಗೂ ಸಿಗಲ್ಲ ಎಂದಿದ್ದಾರೆ. ಮತ್ತೊಬ್ಬ, ಅಪ್ಪ ಮನಸ್ಸು ಯಾವತ್ತು ಮಕ್ಕಳಿಗೆ ಕಷ್ಟ ಆಗಬಾರದು ಎಂದು ಬಯಸುತ್ತದೆ. ಮಗಳ ಕಷ್ಟ ಸುಖದಲ್ಲಿ ನಿಲ್ಲುವ ಅಪ್ಪ ಸಿಕ್ಕವರು ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




