AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ

ದೂರದ ಊರಿಗೆ ಕೆಲಸಕ್ಕೆಂದು ಹೋದ ಮಗ ಅಥವಾ ಮಗಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಖುಷಿಯೋ ಖುಷಿ. ಇದೀಗ ವೈರಲ್‌ ವಿಡಿಯೋದಲ್ಲಿ ವಿದೇಶದಲ್ಲಿ ನೆಲೆಸಿದ್ದ ವ್ಯಕ್ತಿಯೂ ಎಂಟು ವರ್ಷಗಳ ಬಳಿಕ ಊರಿಗೆ ಬಂದು ಹೆತ್ತವರಿಗೆ ಸರ್ಪ್ರೈಸ್ ನೀಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 26, 2025 | 9:48 AM

Share

ಹೆತ್ತವರಿಗೆ (parents) ಮಕ್ಕಳೆಂದರೆ ಪಂಚಪ್ರಾಣ. ಹೀಗಾಗಿ ಮಕ್ಕಳು ಎಲ್ಲೇ ಇರಲಿ, ಚೆನ್ನಾಗಿರಲಿ ಎಂದು ಬಯಸುವ ಜೀವಗಳದು. ದುಡಿಮೆಗೆಂದು ದೂರದ ಊರು, ವಿದೇಶಕ್ಕೆ ಖುಷಿಯಿಂದಲೇ ಕಳುಹಿಸಿ ಕೊಡುವ ಹೆತ್ತವರು ಒಳಗೊಳಗೇ ಕೊರಗುತ್ತಾರೆ. ಮಕ್ಕಳು ತಮ್ಮನ್ನು ಕಾಣಲು ಬರುತ್ತಾರೆ ಎಂದರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಇಲ್ಲೊಬ್ಬ ಮಗನು ಎಂಟು ವರ್ಷಗಳ ಬಳಿಕ ಹೆತ್ತವರನ್ನು ಕಾಣಲು ಬಂದಿದ್ದಾನೆ. ತಾನು ಬರುವ ವಿಷಯ ತಿಳಿಸದೇ ಸರ್ಪ್ರೈಸ್ (surprise) ನೀಡಿದ್ದಾನೆ. ಮಗನ ಆಗಮನ ಹೆತ್ತವರ ಕಣ್ಣಲ್ಲಿ ನೀರು ತರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.

Shashishetty1022 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಹೋಟೆಲ್‌ನಲ್ಲಿ ಕುಳಿತಿದ್ದ ತಂದೆ ತಾಯಿಗೆ ಮಗ ಸರ್ಪ್ರೈಸ್ ನೀಡಿದ್ದಾನೆ. ವೇಟರ್‌ನಂತೆ ಎದುರಿಗೆ ಬಂದ ಮಗನನ್ನು ಕಂಡು ಹೆತ್ತವರು ಕಣ್ಣೀರು ಹಾಕಿ ಅಪ್ಪಿ ಮುದ್ಧಾಡುತ್ತಿರುವುದನ್ನು ಕಾಣಬಹುದು. ಮಗನು  ಹೆತ್ತವರನ್ನು ಸಂತೈಸಿರುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಹಳ್ಳಿಯಿಂದ ಯುಕೆಗೆ ಬಂದ ಅಪ್ಪ-ಅಮ್ಮ: ಇದು ನನ್ನ ಕನಸು ಎಂದ ಮಗ

ಈ ವಿಡಿಯೋ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಎಂಟು ವರ್ಷಗಳ ಕಾಲ ಹೆತ್ತವರನ್ನು ನೋಡದೆ ಹೇಗೆ ಇದ್ದೆ. ನಿನ್ನನ್ನು ಎಷ್ಟು ಮಿಸ್ ಮಾಡಿಕೊಂಡರೆಂದು ಅವರ ಕಣ್ಣುಗಳೇ ಹೇಳುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರೆ, ಇನ್ನೊಬ್ಬರು ನಿಮ್ಮ ಅಪ್ಪನನ್ನು ನೋಡಿ ನನ್ನ ಕಣ್ಣು ಒದ್ದೆಯಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ