ಅಂತ್ಯಸಂಸ್ಕಾರದ ವೇಳೆ ಶವ ಪೆಟ್ಟಿಗೆಯಿಂದ ಕೇಳಿ ಬಂತು ವಿಚಿತ್ರ ಶಬ್ಧ: ಮುಂದೇನಾಯ್ತು?
ಥೈಲ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಅಂತ್ಯಸಂಸ್ಕಾರದ ಕೆಲವೇ ಕ್ಷಣಗಳ ಮೊದಲು ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡು ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ. ಮೃತಪಟ್ಟಿದ್ದಾರೆಂದು ಭಾವಿಸಿದ್ದ 65 ವರ್ಷದ ಮಹಿಳೆ, ದೇವಾಲಯದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದಾಗ ಪೆಟ್ಟಿಗೆಯಿಂದ ಶಬ್ಧ ಬಂದಿದೆ. ದೇವಾಲಯವು ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥೈಲ್ಯಾಂಡ್‌ನಲ್ಲಿ (woman wakes up coffin) ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದೆ. ಈ ಘಟನೆ ಬ್ಯಾಂಕಾಕ್‌ನ ಹೊರವಲಯದಲ್ಲಿರುವ ನೊಂಥಬುರಿ ಪ್ರಾಂತ್ಯದಲ್ಲಿರುವ ಬೌದ್ಧ ದೇವಾಲಯವಾದ ವಾಟ್ ರಾಟ್ ಪ್ರಖೋಂಗ್ ಥಾಮ್‌ನಲ್ಲಿ ನಡೆದಿದೆ. ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾದ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಮಹಿಳೆಯ ತೋಳುಗಳು ಮತ್ತು ತಲೆ ಸ್ವಲ್ಪ ಅಲುಗಾಡಿದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ.
ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್‌ಥೂಪ್ ಸೋಮವಾರ ಎಪಿ ನೀಡಿದ ಮಾಹಿತಿ ಪ್ರಕಾರ, “ಅರವತ್ತೈದು ವರ್ಷದ ಮಹಿಳೆಯನ್ನು ಆಕೆಯ ಸಹೋದರ ಫಿಟ್ಸಾನುಲೋಕ್ ಪ್ರಾಂತ್ಯದಿಂದ ಅಂತ್ಯಕ್ರಿಯೆಗಾಗಿ ಕರೆತಂದಿದ್ದಾರೆ. ಸಿಬ್ಬಂದಿಗಳು ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ವೇಳೆ ಶವಪೆಟ್ಟಿಗೆಯಿಂದ ಶಬ್ದ ಬಂದಿದೆ. ನನಗೆ ಸ್ವಲ್ಪ ಆಶ್ಚರ್ಯವಾಯಿತು, ಶವಪೆಟ್ಟಿಗೆಯನ್ನು ತೆರೆಯಲು ಹೇಳಿದೆ. ಶವಪೆಟ್ಟಿಗೆ ತೆರೆದಾಗ ಅಲ್ಲಿ ಮಹಿಳೆ ಪೆಟ್ಟಿಗೆಗೆ ಬಡಿಯುವುದು ಕಂಡಿದೆ” ಎಂದು ಹೇಳಿದ್ದಾರೆ.
ಇನ್ನು ಮಹಿಳೆ ಸಹೋದರ ಪೈರತ್ ಸೂದ್ಥೂಪ್ಗೆ ಹೇಳಿರುವ ಪ್ರಕಾರ, ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು, ಮತ್ತು ಎರಡು ದಿನಗಳ ಹಿಂದೆ , ಪ್ರತಿಕ್ರಿಯಿಸದೆ ಇರುವುದನ್ನು ಕಂಡು ಸತ್ತಿದ್ದಾರೆ ಎಂದುಕೊಂಡಿದ್ದರು. ನಂತರ ಮನೆಯಲ್ಲಿ ಕಾರ್ಯ ಎಲ್ಲ ಮಾಡಿ, ಶವಪೆಟ್ಟಿಗೆಯಲ್ಲಿ ತುಂಬಿಸಿಕೊಂಡು ಐದು ನೂರು ಕಿಲೋಮೀಟರ್ ದೂರದಿಂದ ಬ್ಯಾಂಕಾಕ್‌ಗೆ ಕರೆದೊಯ್ದರು. ಇದಕ್ಕೂ ಮೊದಲು ಅಂಗಾಂಗಗಳನ್ನು ದಾನ ಮಾಡಬೇಕು ಎಂಬ ಬಯಕೆ ಕೂಡ ಇತ್ತು.ಆದರೆ ಅವರ ಸಹೋದರನ ಬಳಿ ಅಧಿಕೃತ ಮರಣ ಪ್ರಮಾಣಪತ್ರವಿಲ್ಲದ ಕಾರಣ ಆಸ್ಪತ್ರೆ ಆಕೆಯ ದೇಹವನ್ನು ಸ್ವೀಕರಿಸಲು ನಿರಾಕರಿಸಿತು. ನಂತರ ಅಂತ್ಯಸಾಂಸ್ಕರಕ್ಕೆ ದೇವಾಲಯಕ್ಕೆ ತಂದಿದ್ದಾರೆ. ಆದರೆ ಅಲ್ಲಿ ಉಚಿತ ಅಂತ್ಯಕ್ರಿಯೆಗೆ ಕೆಲವೊಂದು ದಾಖಲೆಗಳು ಬೇಕಿತ್ತು. ಹಾಗಾಗಿ ಅಲ್ಲೂ ಮಹಿಳೆಯ ಅಂತ್ಯಕ್ರಿಯೆಗೆ ನಿರಕಾರಿಸಿತ್ತು. ಕೊನೆಗೆ ದೇವಾಲಯದಲ್ಲಿ ಆಡಳಿತ ಮಂಡಳಿಯಲ್ಲಿ ಮಾತನಾಡಿ, ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವೇಳೆ ಮಹಿಳೆ ಇದ್ದ ಶವಪೆಟ್ಟಿಗೆಯಿಂದ ಶಬ್ದ ಕೇಳಿ ಬಂದಿದೆ.
ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬೇಸತ್ತು ದಯಾಮರಣಕ್ಕೆ ಮುಂದಾದ 25 ವರ್ಷದ ಯುವತಿ
ನಂತರ ದೇವಾಲಯದ ಸಹಾಯದಿಂದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಅತ್ಯಂತ ಬಡವರಾಗಿದ್ದು, ಅವರ ಚಿಕಿತ್ಸೆ ಸಂಪೂರ್ಣ ವೆಚ್ಚವನ್ನು ದೇವಾಲಯವು ಭರಿಸುವುದಾಗಿ ದೇವಾಲಯದ ಮಠಾಧೀಶರು ಭರವಸೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




