Video: ತಲೆ ಸವರಿ ಪ್ರೀತಿ ತೋರಿದ ವ್ಯಕ್ತಿಯನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ನಿಯತ್ತು, ನಿಷ್ಠೆ, ನಿಸ್ವಾರ್ಥ ಪ್ರೀತಿಗೆ ಇನ್ನೊಂದು ಹೆಸರೇ ಈ ಶ್ವಾನ. ಒಂದು ಹೊತ್ತು ಊಟ ಹಾಕಿ, ಪ್ರೀತಿ ತೋರಿದರೆ ಅದು ಜೀವನ ಪರ್ಯಂತ ಜತೆಗೆ ಇರುತ್ತದೆ. ಹೌದು, ತಲೆ ಸವರಿ ತೋರಿದ ಪ್ರೀತಿಗೆ ಬೀದಿ ನಾಯಿಯೂ ವ್ಯಕ್ತಿಯನ್ನು ಕಂಡೊಡನೆ ಮುದ್ದಾಗಿ ಪ್ರತಿಕ್ರಿಯೆ ನೀಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ಶ್ವಾನಗಳ (Dogs) ನಿಷ್ಕಲ್ಮಶ, ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಲೆ ಸವರಿ ಪ್ರೀತಿ ತೋರಿದ ವ್ಯಕ್ತಿಯನ್ನು ಕಂಡೊಡನೆ ಬೀದಿ ಶ್ವಾನವೊಂದು ಬಾಲ ಅಲ್ಲಾಡಿಸುತ್ತ ಪ್ರತಿಕ್ರಿಯಿಸಿದೆ. ಚಾರ್ಲಿಯ ಶುದ್ಧ ಪ್ರೀತಿಗೆ ನೆಟ್ಟಿಗರು ಕರಗಿ ಹೋಗಿದ್ದಾರೆ.
ಶ್ರೀನಿವಾಸ್ ಕೆ. ಯಾದವ್ (srinivas_k_yadav_1268) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮುಗ್ಧ ಪ್ರಾಣಿಗಳ ಶುದ್ಧ ಪ್ರೀತಿಯನ್ನು ನೋಡಬಹುದು. ಈ ವಿಡಿಯೋದಲ್ಲಿ ಸ್ನೇಹಿತರೇ ಇದರ ಹೆಸರು ಚಾರ್ಲಿ (ಇದು ಬೀದಿ ನಾಯಿ ), ಇದಕ್ಕೆ ನಾನೇ ಹೆಸರಿಟ್ಟಿದ್ದು. ಇದಕ್ಕೆ ತಿನ್ನೋದಕ್ಕೆ ನಾನು ಏನು ಕೊಟ್ಟಿಲ್ಲ ಆದರೆ ದಿನ ನಿತ್ಯ ಆಗಾಗ ರಸ್ತೆಯಲ್ಲಿ ಸಿಕ್ತಾ ಇತ್ತು. ನಾನು ಅದರ ತಲೆ ಸವರಿ ಪ್ರೀತಿಯಿಂದ ಮಾತನಾಡಿಸಿ ಹೋಗುತಿದ್ದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ನಾಲೈದು ದಿನದಿಂದ ನಾನು ಇದನ್ನು ನೋಡಿರಲಿಲ್ಲ. ನಾನು ಕೆಲಸ ಮಾಡುವ ಜಾಗಕ್ಕೆ ಬಂದು ನನ್ನನ್ನು ಮಾತನಾಡಿಸಿ, ನಾನು ಬರುವವರೆಗೂ ಅಲ್ಲೇ ಇದ್ದು ನನ್ನ ಜೊತೆ ಬಂದಿದೆ. ಅಬ್ಬಬ್ಬಾ ಈ ಮೂಕ ಪ್ರಾಣಿಗಳದ್ದು ಅದೆಂತ ಪ್ರೀತಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇಲ್ಲಿ ತಲೆ ಸವರಿ ಪ್ರೀತಿ ತೋರಿದ ವ್ಯಕ್ತಿಯನ್ನು ಕಂಡೊಡನೆ ಬೀದಿ ನಾಯಿಯೊಂದು ಬಾಲ ಅಲ್ಲಾಡಿಸುತ್ತ ಮುದ್ದಾಗಿ ಪ್ರತಿಕ್ರಿಯಿಸಿರುವುದನ್ನು ನೋಡಬಹುದು.
ಇದನ್ನೂ ಓದಿ: ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ
ಈ ವಿಡಿಯೋ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾಯಿನೇ ನಿನ್ನತ್ರ ಮಾತಾಡುತ್ತೆ ಅಂದ್ರೆ ನೀನೇ ಭಾಗ್ಯವಂತ ನೀನೇ ಧನ್ಯವಂತ, ನೀನೆ ಪುಣ್ಯವಂತ ನೀನೇ ನೀತಿವಂತ, ಒಳ್ಳೆಯದಾಗಲಿ ಎಂದಿದ್ದಾರೆ. ಇನ್ನೊಬ್ಬರು, ಅದು ಜಗಳ ಮಾಡ್ತಾ ಇದೆ ನಿಮ್ ಜೊತೆ. ನೀವು ಅದನ್ನು ಬಿಟ್ಟ ಹೋಗಿದ್ರಿ ಅದಕ್ಕೆ ಕೋಪ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.




