AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ ಕಾಯಿಲೆಯಿಂದ ಬೇಸತ್ತು ದಯಾಮರಣಕ್ಕೆ ಮುಂದಾದ 25 ವರ್ಷದ ಯುವತಿ

ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ (25) ಎಂಬ ಯುವತಿ ಅಪರೂಪದ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ರೋಗದಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ಈ ಕಾಯಿಲೆಯು ನರಮಂಡಲವನ್ನು ಬಾಧಿಸಿ ತೀವ್ರ ನೋವು ನೀಡುತ್ತಿದೆ. ಹಲವು ವರ್ಷಗಳ ನೋವಿನಿಂದ ಬೇಸತ್ತಿರುವ ಅವರು, ಇದೀಗ ಆಸ್ಟ್ರೇಲಿಯಾದಲ್ಲಿ ದಯಾಮರಣಕ್ಕಾಗಿ ಅನುಮತಿ ಪಡೆದಿದ್ದಾರೆ.

ಅಪರೂಪದ ಕಾಯಿಲೆಯಿಂದ ಬೇಸತ್ತು ದಯಾಮರಣಕ್ಕೆ ಮುಂದಾದ 25 ವರ್ಷದ ಯುವತಿ
ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್
ಅಕ್ಷಯ್​ ಪಲ್ಲಮಜಲು​​
|

Updated on: Nov 25, 2025 | 2:42 PM

Share

ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಎಂಬ 25 ವರ್ಷದ ಯುವತಿ ಹಲವು ವರ್ಷಗಳಿಂದ ಅಪರೂಪದ ಹಾಗೂ ಗುಣಪಡಿಸಲಾಗದ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾರೆ. ಇದೀಗ ಈ ರೋಗದಿಂದ ಬೇಸತ್ತು ದಯಾಮರಣಕ್ಕೆ ಮುಂದಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅವರಿಗೆ 18ನೇ ವಯಸ್ಸಿನಲ್ಲಿ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ಇರುವುದು ಪತ್ತೆಯಾಯಿತು. ಈ ಕಾಯಿಲೆ ಇರುವ ಜನರಲ್ಲಿ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನರಕೋಶಗಳ ಮೇಲೆ ದಾಳಿಯನ್ನು ಮಾಡಿ. ಹೃದಯ ಬಡಿತ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕೊನೆಗೆ ಇದು ನರವೈಜ್ಞಾನಿಕ ರೋಗಕ್ಕೆ ಕಾರಣವಾಗುತ್ತದೆ. ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ತಮ್ಮ ಬಾಲ್ಯದ ಬಹುಪಾಲು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ. ವೈದ್ಯರು ಅವರಿಗೆ ಇರುವ ರೋಗದ ಬಗ್ಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಈ ಅಪರೂಪದ ರೋಗದಿಂದ ಸ್ಥಿತಿ ಹದಗೆಟ್ಟಿತು, ಅಡಿಲೇಡ್‌ ಅವರು ನಿರಂತರ ನೋವು, ವಾಕರಿಕೆ, ದಿನನಿತ್ಯ ವಾಂತಿ ಮಾಡುತ್ತಿದ್ದರು. ಕಳೆದ ಒಂದು ದಶಕದಿಂದ, ಅವರು ಸಂಪೂರ್ಣವಾಗಿ ಪ್ಯಾರೆನ್ಟೆರಲ್ ಪೌಷ್ಟಿಕಾಂಶವನ್ನು (TPN) ಅವಲಂಬಿಸಿದ್ದು, ಅಭಿದಮನಿ ಮೂಲಕ ಎಲ್ಲಾ ಪೋಷಣೆಯನ್ನು ಪಡೆಯುತ್ತಿದ್ದಾರೆ. ಇದರಿಂದ ಬಹು ಅಂಗಾಂಗ ವೈಫಲ್ಯ, ಬೆನ್ನುಮೂಳೆ ಮುರಿತ, ಸೀಳು ಎದೆಮೂಳೆ ಮತ್ತು ಇತರ ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಜತೆಗೆ ಅವರಿಗೆ ಆಹಾರವನ್ನು IV ಮೂಲಕ ನೀಡಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ IV ಗಳ ಮೂಲಕ ಆಹಾರವನ್ನು ನೀಡಲು ಸಾಧ್ಯವಾಗದಿದ್ದಾಗ, ಸಾವು ಖಂಡಿತ ಎಂಬ ಆಂತಕದಲ್ಲಿದ್ದಾರೆ. ಹೀಗಾಗಿ ಪ್ರತಿದಿನ ಈ ನೋವು ತಿಂದು ಸಾಕಾಗಿದೆ ಎಂದು ದಯಾಮರಣಕ್ಕೆ ಮುಂದಾಗಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ನೋವು ತಿಂದು ಸಾಕಾಯಿತು:

ಈ ಬಗ್ಗೆ ಅಡಿಲೇಡ್‌ನ ಅನ್ನಾಲೀಸ್ ಹಾಲೆಂಡ್ ಇನ್ಸ್ಟಾಗ್ರಾಮ್​​ನಲ್ಲಿ ಕೆಲವೊಂದು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂಥಹ ಕಾಯಿಲೆ ಬರುತ್ತದೆ ಎಂದು ಕಲ್ಪನೆ ಕೂಡ ಇರಲಿಲ್ಲ. ಸಾಕಾಗಿದೆ ಈ ನೋವು ತಿಂದು, ನನ್ನ ಕರುಳು ಮುಚ್ಚಿ ಹೋಗಿದೆ. ನರಗಳು ಕೆಲಸ ಮಾಡುತ್ತಿಲ್ಲ. ನನ್ನ ಮಲವು ತುಂಬಾ ಹಿಂದಕ್ಕೆ ಬರುತ್ತದೆ. ಇದರ ಜತೆಗೆ ದೊಡ್ಡ ಹಿಂಸೆ ಎಂದರೆ ನನ್ನ ದೇಹದಲ್ಲಿ ಫೀಡಿಂಗ್ ಟ್ಯೂಬ್‌ಗಳನ್ನು ಇರಿಸಲಾಗಿತ್ತು. ಪ್ರತಿದಿನ ವಾಂತಿ ಮಾಡಿ.. ಮಾಡಿ ಸಾಕಾಗಿದೆ. ನನ್ನ ವಯಸ್ಸಿನ ಸ್ನೇಹಿತರು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಮಕ್ಕಳಾಗಿದೆ. ಇನ್ನು ಕೆಲವರು ಮದುವೆಯಾಗುತ್ತಿದ್ದಾರೆ. ಆದರೆ ನಾನು ಈ ರೋಗದ ಜತೆಗೆ ಜೀವನ ನಡೆಸುತ್ತಿದ್ದೇನೆ. ನಾನು ಪ್ರತಿದಿನ ಬದುಕುಳಿಯುತ್ತಿದ್ದೇನೆ. ಈ ಒದ್ದಾಟ ಸಾಕಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸುಮಾರು 1,700 ವರ್ಷಗಳ ಹಳೆಯ ಶವಪೆಟ್ಟಿಗೆ ಪತ್ತೆ: ಅದರಲ್ಲಿದ್ದವು ಅಚ್ಚರಿಯ ವಸ್ತುಗಳು

ಆಸ್ಟ್ರೇಲಿಯಾದಲ್ಲಿ ದಯಾಮರಣ ಹೇಗೆ?

ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ಅಗತ್ಯ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ಮೂರು ವಾರಗಳ ನಂತರ, ಅನ್ನಾಲೀಸ್‌ಗೆ ಸ್ವಯಂಪ್ರೇರಿತ ದಯಾಮರಣಕ್ಕೆ ಅನುಮೋದನೆ ನೀಡಲಾಗಿದೆ. ಯಾವ ಕಾರಣಕ್ಕೆ ಅವರು ದಯಾಮರಣದ ಬೇಡಿಕೆ ಇಟ್ಟಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ದಯಾಮರಣವನ್ನು ಮೆಡಿಕಲ್ ಏಡ್ ಇನ್ ಡೈಯಿಂಗ್ (MAID) ಎಂದೂ ಕರೆಯುತ್ತಾರೆ, ಇದು ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳಲ್ಲಿ ಮಾರಕ ಕಾಯಿಲೆಯಿಂದ ಬಳಲುತ್ತಿರುವ, ಮಾನಸಿಕವಾಗಿ ಕುಗ್ಗಿರುವ ವಯಸ್ಕರಿಗೆ ಕಾನೂನುಬದ್ಧವಾಗಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು