AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಾರು 1,700 ವರ್ಷಗಳ ಹಳೆಯ ಶವಪೆಟ್ಟಿಗೆ ಪತ್ತೆ: ಅದರಲ್ಲಿದ್ದವು ಅಚ್ಚರಿಯ ವಸ್ತುಗಳು

ಬುಡಾಪೆಸ್ಟ್‌ನ ಒಬುಡಾದಲ್ಲಿ ಪುರಾತತ್ವಶಾಸ್ತ್ರಜ್ಞರಿಗೆ 1,700 ವರ್ಷಗಳ ಹಳೆಯ ರೋಮನ್ ಶವಪೆಟ್ಟಿಗೆ ಪತ್ತೆಯಾಗಿದೆ. ಇದನ್ನು ತೆರೆದಾಗ, ಚಿಕ್ಕ ವಯಸ್ಸಿನ ಯುವತಿಯ ಅಸ್ಥಿಪಂಜರ, ಸುಮಾರು 140 ರೋಮನ್ ನಾಣ್ಯಗಳು, ಗಾಜಿನ ಜಾಡಿಗಳು, ಕಂಚಿನ ಪ್ರತಿಮೆಗಳು ಮತ್ತು ಆಭರಣಗಳು ಪತ್ತೆಯಾಗಿವೆ. ಈ ಶವಪೆಟ್ಟಿಗೆ 4ನೇ ಶತಮಾನದ ಶ್ರೀಮಂತ ರೋಮನ್ ಕುಟುಂಬಕ್ಕೆ ಸೇರಿತ್ತು ಎಂದು ಸಂಶೋಧಕರು ಹೇಳಿದ್ದಾರೆ. ಇದೊಂದು ಅಪೂರ್ವ ಐತಿಹಾಸಿಕ ಸಂಶೋಧನೆಯಾಗಿದೆ.

ಸುಮಾರು 1,700 ವರ್ಷಗಳ ಹಳೆಯ ಶವಪೆಟ್ಟಿಗೆ ಪತ್ತೆ: ಅದರಲ್ಲಿದ್ದವು ಅಚ್ಚರಿಯ ವಸ್ತುಗಳು
ರೋಮನ್ ಶವಪೆಟ್ಟಿಗೆ
ಅಕ್ಷಯ್​ ಪಲ್ಲಮಜಲು​​
|

Updated on:Nov 25, 2025 | 12:59 PM

Share

ಜಗತ್ತಿನಲ್ಲಿ ವಿಚಿತ್ರ ಘಟನೆಗಳು ಆಗ್ಗಾಗೆ ನಡೆಯುತ್ತಲೇ ಇರುತ್ತದೆ. ಇದೀಗ ಇಲ್ಲೊಂದು ಅಂತಹದೇ ಒಂದು ಅಚ್ಚರಿಯ ಘಟನೆಯೊಂದು ನಡೆದಿದೆ. ಬುಡಾಪೆಸ್ಟ್‌ನಲ್ಲಿ (Roman sarcophagus) ಪುರಾತತ್ತ್ವಜ್ಞರು ಪುರತಾನ ವಸ್ತುಗಳನ್ನು ಉತ್ಖನನ ಮಾಡುವಾಗ ಸುಮಾರು 1,700 ವರ್ಷಗಳ ಹಳೆಯ ಶವದ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಈ ಪೆಟ್ಟಿಗೆಯನ್ನು ಓಪನ್​​ ಮಾಡಿದಾಗ ಅವರಿಗೆ ಅಚ್ಚರಿಯ ವಸ್ತುಗಳು ಸಿಕ್ಕಿವೆ. ಶತಮಾನಗಳಿಂದ ಈ ಶವಪಟ್ಟಿಗೆಯನ್ನು ಮುಟ್ಟಿಲ್ಲ. ಇದೀಗ ಪುರಾತತ್ತ್ವಜ್ಞರು ಇದನ್ನು ತೆರೆದು ನೋಡಿದ್ದಾರೆ. ಹಂಗೇರಿಯ ಒಬುಡಾದಲ್ಲಿ ಉತ್ಖನನ ಮಾಡುವ ವೇಳೆ ಬುಡಾಪೆಸ್ಟ್​​​ನ ಪುರಾತತ್ತ್ವಜ್ಞರು ಹಳೆಯ ಶವದ ಪಟ್ಟಿಗೆಯನ್ನು ಪತ್ತೆ ಮಾಡಿದ್ದಾರೆ. ಈ ಶವಪೆಟ್ಟಿಯನ್ನು ರೂಮನ್​​​ ಶೈಲಿಯಲ್ಲಿ ಸಂಪೂರ್ಣ ಕಲ್ಲಿನಿಂದ ಮಾಡಲ್ಪಟ್ಟಿದೆ.

ಈ ಶವಪೆಟ್ಟಿಗೆಯನ್ನು ತೆರೆದಾಗ ಪ್ರಾಚೀನ ರೋಮನ್​​ನಲ್ಲಿ ವಾಸವಾಗಿದ್ದ ಯುವತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ಈ ಪೆಟ್ಟಿಗೆಯ ಸುತ್ತ ಹಳೆಯ ಕಲಾಕೃತಿಯನ್ನು ಕೆತ್ತಲಾಗಿದೆ. ಇನ್ನು ಈ ಅಸ್ಥಿಪಂಜರ ಚಿಕ್ಕ ವಯಸ್ಸಿನ ಯುವತಿಯದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.  ಈ ಪೆಟ್ಟಿಗೆಯ ಒಳಗೆ ಅಸ್ಥಿಪಂಜರ ಮಾತ್ರವಲ್ಲದೆ, ಗಾಜಿನ ಜಾಡಿಗಳು, ಕಂಚಿನ ಪ್ರತಿಮೆಗಳು, ಸುಮಾರು 140 ರೂಮ್​​​​ ನ್ಯಾಣಗಳು, ಹೇರ್​​​ಪಿನ್​​​ಗಳು, ಆಭರಣಗಳು ಹಾಗೂ ಚಿನ್ನದ ದಾರದಿಂದ ಮಾಡಿದ ಬಟ್ಟೆಯ ಅವಶೇಷಗಳು ಪತ್ತೆಯಾಗಿವೆ.

ಇದನ್ನೂ ಓದಿ: ಮಾಲೀಕಳ ಜತೆಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ

ಈ ವಸ್ತುಗಳನ್ನು ನೋಡಿದ ನಂತರ ಸಂಶೋಧಕರು ಶವದ ಪೆಟ್ಟಿಗೆ ಶ್ರೀಮಂತ ಮನೆತನದ್ದು ಎಂದು ಹೇಳಿದ್ದಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿರುವ ಮನೆಯವರ ಶವದ ಪೆಟ್ಟಿಗೆ ಆಗಿರಬೇಕು ಎಂದು ಹೇಳಿದ್ದಾರೆ. 4ನೇ ಶತಮಾನದಲ್ಲಿ ಬಳಸಿದ ಶವದ ಪೆಟ್ಟಿಗೆಯನ್ನು ಮತ್ತೆ ಬಳಸುತ್ತಾರೆ. ಆದರೆ ಇಂಥಹ ಪೆಟ್ಟಿಗೆಗಳನ್ನು ವಿಶೇಷ ವ್ಯಕ್ತಿಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಈ ಯುವತಿಯ ವಯಸ್ಸು, ಸಾವಿಗೆ ಕಾರಣ, ಹೀಗೆ ಅನೇಕ ವಿಚಾರಗಳ ಬಗ್ಗೆ ತತ್ಞರು ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Tue, 25 November 25