ಹಳ್ಳಿಯಿಂದ ಯುಕೆಗೆ ಬಂದ ಅಪ್ಪ-ಅಮ್ಮ: ಇದು ನನ್ನ ಕನಸು ಎಂದ ಮಗ
ತೆಲಂಗಾಣದ ಸಂಜೀವ್ ರೆಡ್ಡಿ ಥಲ್ಲಾ ಎಂಬ ಯುವಕ ಸಣ್ಣ ಹಳ್ಳಿಯಿಂದ ಹೋಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉದ್ಯೋಗ ಪಡೆದ್ದಾರೆ. ಬಡತನದಿಂದ ಬೆಳೆದು ಬಂದ ಇವರು, ತಮ್ಮ ಹೆತ್ತವರನ್ನು ಯುಕೆ ಕರೆದೊಯ್ಯುವ ಕನಸು ಕಂಡಿದ್ದರು. ಇದೀಗ ಅವರ ಅಪ್ಪ-ಅಮ್ಮನ ಮೊದಲ ವಿಮಾನ ಪ್ರಯಾಣ ಹಾಗೂ ಯುಕೆ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗನ ಪ್ರೀತಿ ಮತ್ತು ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಣ್ಣ ಹಳ್ಳಿಯಲ್ಲಿ ಬೆಳೆದು, ಜನ ಮೆಚ್ಚಿಕೊಳ್ಳುವಂತಹ ಸಾಧನೆ ಮಾಡಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಯುವಕನ ಕಥೆ ಇದು. ತನ್ನ ಹೆತ್ತವರನ್ನು ಒಮ್ಮೆಯಾದರೂ ಯುಕೆಗೆ ಯುಕೆಗೆ ಕರೆದೊಯ್ಯುವ ಕನಸು ಕಂಡಿದ್ದರು. ಅವರನ್ನು ವಿಮಾನದಲ್ಲಿ ಹಾರಾಟ ನಡೆಸಬೇಕು. ತನ್ನ ಉದ್ಯೋಗದ ಸ್ಥಳ ತೋರಿಸಬೇಕು ಎಂಬ ಆಸೆ ಇತ್ತು. ಇದೀಗ ಈ ಆಸೆ ಈಡೇರಿದೆ. ತೆಲಂಗಾಣದ ಸಂಜೀವ ರೆಡ್ಡಿ ಥಲ್ಲಾ (Sanjeev Reddy Thalla) ಎಂಬುವವರು ತಮ್ಮ ಅಪ್ಪ-ಅಮ್ಮನ್ನು ಯುಕೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಡಿಯಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ.
ಈ ಪೋಸ್ಟ್ನಲ್ಲಿ ಹೀಗೆ ಹೇಳಲಾಗಿದೆ. “ನಾನು ತೆಲಂಗಾಣದ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದ ಹುಡುಗ. ನನ್ನ ಹೆತ್ತವರು ತಮ್ಮ ಇಡೀ ಜೀವನವನ್ನು ಅಲ್ಲಿಯೇ ಕಳೆದಿದ್ದಾರೆ. ಹಳ್ಳಿ ಬಿಟ್ಟು ಬೇರೆ ರಾಜ್ಯಕ್ಕೆ ಅಥವಾ ದೇಶಕ್ಕೆ ಹೋದವರಲ್ಲ, ನನ್ನದೊಂದು ಆಸೆ ಇತ್ತು, ಅದು ಇಂದು ಈಡೇರಿದೆ. ಅಪ್ಪ-ಅಮ್ಮ ಯಾವತ್ತೂ ವಿಮಾನದಲ್ಲಿ ಹೋಗಿಲ್ಲ. ಇದು ಅವರ ಮೊದಲ ವಿಮಾನ ಪ್ರಯಾಣ. ಅವರು ಶೂ ಧರಿಸಿದ್ದು ಕೂಡ ಇದೇ ಮೊದಲು, ಅಮ್ಮ ಅಪ್ಪ ಇಬ್ಬರು ಕೂಡ ಮೊದಲು ಬಾರಿ ಯುಕೆಗೆ ಬಂದಿದ್ದಾರೆ. ಅವರು ಯುಕೆಯಲ್ಲಿ ಇಳಿಯುತ್ತಿದ್ದಂತೆ ನನಗೆ ನನ್ನ ಶಾಲೆ ದಿನಗಳು ನೆನಪಾಯಿತು. ಶಾಲೆ ದಿನಗಳಲ್ಲಿ ನಾನು ಹರಿದ ಬಟ್ಟೆಗಳನ್ನು ಹಾಕುತ್ತಿದ್ದೆ, ಅಮ್ಮ ಅದಕ್ಕೆ ಹೊಲಿಗೆ ಹಾಕಿ ಪ್ಯಾಚ್ ಮಾಡುತ್ತಿದ್ದರು. ಜತೆಗೆ ರಸಗೊಬ್ಬರ ಬಳಸಿ ಮಾಡಿ ಬ್ಯಾಗ್. ಆ ಕಾಲದಲ್ಲಿ ನಮಗೆ ಸರಿಯಾದ ಮನೆ ಕೂಡ ಇರಲಿಲ್ಲ. ಆದರೆ ಇಂದು ಆ ಯಾವ ಕಷ್ಟನ್ನೂ ಇಲ್ಲ. ಇದು ನನ್ನ ಸಾಧನೆ ಎಂದಲ್ಲ, ಅಥವಾ ಹಣ ಇದೆ ಎಂಬುದನ್ನು ತೋರಿಸಿಕೊಳ್ಳಲು ಅಲ್ಲ. ಆದರೆ ನನ್ನ ಆ ನೆನೆಪು ಇಂದು ಸಿಹಿಯಾಗಿದೆ. ಅಕ್ಷರ ತಿಳಿಯದ ನನ್ನ ಅಪ್ಪನಿಗೆ ನಾನು ದಾರಿಯಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗೂಗಲ್ ಸೇರಿದ ಒಂದು ತಿಂಗಳೊಳಗೆ ಕೆಲಸ ತೊರೆದು ಹೊಸ ಕಂಪನಿ ಶುರು ಮಾಡಿದ ಬೆಂಗಳೂರು ಮೂಲದ ಟೆಕ್ಕಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ:
ನೀವು ನಿಜವಾಗಿ ಹೆತ್ತವರ ಮನಸ್ಸು ಗೆದ್ದಿದ್ದೀರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಮ್ಮ ಈ ಯಶಸ್ಸು ಎಲ್ಲರಿಗೂ ಸ್ಪೂರ್ತಿ ಎಂದು ಹೇಳಿದ್ದಾರೆ. ನೀವು ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು. ನಿಮ್ಮ ಹೆತ್ತವರಿಗಾಗಿ ಹೀಗೆಲ್ಲ ಮಾಡಿರುವುದು ಒಳ್ಳೆಯ ವಿಚಾರ ಎಂದು ಮತ್ತೊಬ್ಬರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




