AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಸೇರಿದ ಒಂದು ತಿಂಗಳೊಳಗೆ ಕೆಲಸ ತೊರೆದು ಹೊಸ ಕಂಪನಿ ಶುರು ಮಾಡಿದ ಬೆಂಗಳೂರು ಮೂಲದ ಟೆಕ್ಕಿ

ಬೆಂಗಳೂರಿನ ಟೆಕ್ಕಿ ಅನುಷ್ಕಾ ಶರ್ಮಾ ಅವರು ಗೂಗಲ್‌ ಕೆಲಸವನ್ನು ತೊರೆದು ತಮ್ಮದೇ ಕ್ವೆಂಜಿ ಪ್ರೋಬಯಾಟಿಕ್ ಸೋಡಾ ಕಂಪನಿ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ. 27ನೇ ವಯಸ್ಸಿನಲ್ಲಿ ಉದ್ಯಮ ಶುರು ಮಾಡಿದ ಇವರು ಈಗ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇವರು ಯುವಕರಿಗೆ ಮಾದರಿಯಾಗಿದ್ದಾರೆ.

ಗೂಗಲ್ ಸೇರಿದ ಒಂದು ತಿಂಗಳೊಳಗೆ ಕೆಲಸ ತೊರೆದು ಹೊಸ ಕಂಪನಿ ಶುರು ಮಾಡಿದ ಬೆಂಗಳೂರು ಮೂಲದ ಟೆಕ್ಕಿ
ಅನುಷ್ಕಾ ಶರ್ಮಾ
ಅಕ್ಷಯ್​ ಪಲ್ಲಮಜಲು​​
|

Updated on: Nov 14, 2025 | 12:56 PM

Share

ಬೆಂಗಳೂರು ಮೂಲದ ಟೆಕ್ಕಿ ಅನುಷ್ಕಾ ಶರ್ಮಾ (Anushka Sharma) ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದಾರೆ. ಇವರು ಸ್ವಂತ ಕಂಪನಿಯನ್ನು ಸ್ಥಾಪಿಸಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ಗೂಗಲ್​​​ನಲ್ಲಿ ಕೆಲಸ ಮಾಡುತ್ತಿದ್ದ ಅನುಷ್ಕಾ ಇದೀಗ ಸ್ವಂತ ಕಂಪನಿಯನ್ನು ಸ್ಥಾಪಿಸಿ ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಪ್ರೋಬಯಾಟಿಕ್ ಸೋಡಾ ಉತ್ಪಾದಿಸುವ ಕ್ವೆಂಜಿ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಗೂಗಲ್​​ನಲ್ಲಿ ವೈಯಕ್ತಿಕ ಕಾರಣವನ್ನು ನೀಡಿ, ಅಲ್ಲಿಂದ ಹೊರ ಬಂದು, ಈ ಕಂಪನಿಯನ್ನು ಶುರು ಮಾಡಿದ್ದಾರೆ.

ಅನುಷ್ಕಾ ಶರ್ಮಾ 23ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, 24ನೇ ವಯಸ್ಸಿನಲ್ಲಿ ಅಮೆಜಾನ್​​​ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ಜತೆಗೆ MBA ಮುಗಿಸಿ, ಅಲ್ಲಿಂದ ಗೂಗಲ್​​​ ಕಂಪನಿಗೆ ಸೇರಿದರು. ಆಗ ಇವರ ವಯಸ್ಸು 26 ಆಗಿತ್ತು. ಅನುಷ್ಕಾ ಶರ್ಮಾ ಅವರು 27ನೇ ವಯಸ್ಸಿನಲ್ಲಿ ಮದುವೆಯಾಗಿ ಹೊಸ ಕಂಪನಿಯನ್ನು ಪ್ರಾರಂಭಿಸಿದರು. ಇದೀಗ ಈ ಕಂಪನಿ ಲಾಭದಲ್ಲಿ ನಡೆಯುತ್ತಿದೆ. ಜತೆಗೆ ನೂರಾರು ಜನರಿಗೆ ಕೆಲಸವನ್ನು ಕೂಡ ನೀಡಿದ್ದಾರೆ.

ವೈರಲ್​​ ಪೋಸ್ಟ್ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದ ಅನುಷ್ಕಾ ಶರ್ಮಾ:

ಇವರ ಕೆಲಸಕ್ಕೆ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೀವು ಸೋಡಾ ಕಂಪನಿಯನ್ನು ಹೇಗೆ ಪ್ರಾರಂಭಿಸಿದ್ದೀರಿ? ಎಂದು ಒಬ್ಬರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ಶರ್ಮಾ ಇದನ್ನು ಏಕೆ ಪ್ರಾರಂಭಿಸಿದೆ ಮತ್ತು ಹೇಗೆ ಎಂಬುದರ ಕುರಿತು ಎಂದಿಗೂ ಮಾತನಾಡಲಿಲ್ಲ. ಮುಂದಿನ ಪೋಸ್ಟ್​​​ನಲ್ಲಿ ಈ ಬಗ್ಗೆ ಹೇಳುವೆ ಎಂದು ಹೇಳಿದ್ದಾರೆ. ನೀವು ಗೂಗಲ್ ಬಿಟ್ಟಿದ್ದೇಕೆ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶರ್ಮ ವೈಯಕ್ತಿಕ ಕಾರಣಗಳು ಎಂದು ಹೇಳಿದ್ದಾರೆ. ಅನುಷ್ಕಾ, ಇದು ನಿಮ್ಮಲ್ಲಿ ಎಷ್ಟು ಸಾಮರ್ಥ್ಯವಿದೆ ಎಂಬುದನ್ನು ತೋರಿಸುತ್ತದೆ. ಆದರೂ ಅದು ನಿಮ್ಮ ಬ್ರ್ಯಾಂಡ್ ಪಾನೀಯದಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕೈ ತುತ್ತು ನೀಡಿ ಅಂಧ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಹೃದಯವಂತ

ಅನುಷ್ಕಾ ಶರ್ಮಾ ಯಾರು?

ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದ ಅನುಷ್ಕಾ ಶರ್ಮಾ, ನಂತರ ಇಎಸ್‌ಸಿಪಿ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದರು. ಬ್ಯಾಂಕ್​​ ಒಂದರಲ್ಲಿ ಡೇಟಾ ವಿಶ್ಲೇಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು. ನಂತರ ಬ್ಯಾಂಕಿನಲ್ಲಿ ಉತ್ಪನ್ನ ವ್ಯವಸ್ಥಾಪಕರಾಗಿ ಭರ್ತಿ ಪಡೆದರು. ಅಲ್ಲಿಂದ ಅಮೆಜಾನ್‌ಗೆ ಸೇರಿದರು. ಅಲ್ಲಿಂದ ಗೂಗಲ್‌ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ. 2024ರಲ್ಲಿ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ