ವಿಮೆ ಹಣಕ್ಕಾಗಿ ಸಂಚು ಮಾಡಿ ಮಗನನ್ನು ಕೊಂದ ತಂದೆ
ಚೀನಾದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನನ್ನು ಕೊಲ್ಲಲು ಸೋದರಸಂಬಂಧಿಯೊಂದಿಗೆ ಸಂಚು ರೂಪಿಸಿ, ಕಾರು ಅಪಘಾತ ನಾಟಕವಾಡಿದ್ದಾರೆ. ಹೆಂಡತಿ ಮೇಲಿನ ಸೇಡು ಮತ್ತು ವಿಮಾ ಹಣ ಪಡೆಯುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ. 2020ರಲ್ಲಿ ನಡೆದ ಘಟನೆಗೆ ಫುಜಿಯಾನ್ ನ್ಯಾಯಾಲಯ ಇದೀಗ ತೀರ್ಪು ನೀಡಿದ್ದು, ದೋಷಿ ಎಂದು ಘೋಷಿಸಿದೆ. ಈ ಪ್ರಕರಣ ಚೀನಾದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚೀನಾದ ವ್ಯಕ್ತಿಯೊಬ್ಬರು (China father son murder) ತನ್ನ ಮಗನನ್ನು ಕೊಲ್ಲಲು ಸೋದರಸಂಬಂಧಿಯೊಂದಿಗೆ ಸಂಚು ರೂಪಿಸಿದ್ದು, ಇದೀಗ ತನಿಖೆಯಲ್ಲಿ ನಿಜಾಂಶ ತಿಳಿದು ಬಂದಿದೆ. ಕೋರ್ಟ್ ಈ ವ್ಯಕ್ತಿಯನ್ನು ದೋಷಿ ಎಂದು ಹೇಳಿದೆ. ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಹೀಗೆ ಮಾಡಿದ್ದಾರೆ. ಈ ಘಟನೆ 2020ರಲ್ಲಿ ನಡೆದಿದ್ದರೂ, ಫುಜಿಯಾನ್ ಪ್ರಾಂತೀಯ ನ್ಯಾಯಾಲಯವು ಇದೀಗ ತೀರ್ಪು ನೀಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿರುವ ಪ್ರಕಾರ, ಫುಜಿಯಾನ್ ಪ್ರಾಂತ್ಯದ ಸ್ಯಾನ್ಮಿಂಗ್ ನಗರದ ಜಾಂಗ್, ತನ್ನ ಸೋದರಸಂಬಂಧಿ, ಟ್ರಕ್ ಚಾಲಕನೊಂದಿಗೆ ಪಿತೂರಿ ಮಾಡಿ, ಕಾರು ಅಪಘಾತ ಎಂದು ಸುಳ್ಳು ಹೇಳಿ, ಸ್ವಂತ ಮಗನನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣವು ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲಿನ ಜನ “ಹುಲಿ ಕೂಡ ತನ್ನ ಮರಿಯನ್ನು ತಿನ್ನುವುದಿಲ್ಲ” ಎಂಬ ಚೀನಾದ ಗಾದೆಯನ್ನು ಘೋಷಣೆ ಹಾಕುತ್ತ ಪ್ರತಿಭಟನೆ ಮಾಡಿದ್ದರು. ಆ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಬೇಕು. ಜಾಂಗ್ನ ಸ್ವಾರ್ಥ ಮತ್ತು ದುರಾಸೆಯ ಕೃತ್ಯಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.
ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ:
ಜಾಂಗ್ ತನ್ನ ಹೆಂಡತಿಯೊಂದಿಗೆ ವೈವಾಹಿಕ ಹಾಗೂ ಹಣದ ವಿಚಾರವಾಗಿ ಆಗ್ಗಾಗೆ ಜಗಳ ಮಾಡುತ್ತಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ತನ್ನ ಸ್ವಂತ ಮಗನನ್ನು ಕೊಂದು ಮಗನ ಹೆಸರಿನಲ್ಲಿರುವ ವಿಮಾವನ್ನು ಪಡೆಯುವ ಯೋಜನೆಯನ್ನು ಹಾಕಿದ್ದರು. ಒಂದು ದಿನ ಮಗನ್ನು ಕಾರಿನಲ್ಲಿ ಹೊರಗೆ ಕರೆದುಕೊಂಡು ಹೋಗಿ, ಶಾಪ್ವೊಂದರ ಮುಂದೆ ನಿಲ್ಲಿದ್ದಾರೆ. ಮಗನನ್ನು ಇಳಿಯಲು ಹೇಳಿ, ಕಾರಿನ ಬಳಿ ನಿಲ್ಲಿಸಿ, ನಾನು ಶಾಪ್ಗೆ ಹೋಗಿ ಬರುವೇ ನೀನು ಇಲ್ಲೇ ಇರು ಎಂದು ಅಂಗಡಿಯ ಒಳಗೆ ಹೋಗಿದ್ದಾರೆ. ಇದೇ ವೇಳೆ ಸೋದರಸಂಬಂಧಿಗೆ ಟ್ರಕ್ನ್ನು ಕಾರಿಗೆ ಡಿಕ್ಕಿ ಹೊಡೆಯಲು ಹೇಳಿದ್ದಾರೆ. ಟ್ರಕ್ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮಗು ಅಲ್ಲೇ ಸಾವನ್ನಪ್ಪಿದೆ ಎಂದು ತನಿಖೆಯಲ್ಲಿ ಹೇಳಲಾಗಿದೆ. ಈ ಘಟನೆ 2020ರಲ್ಲಿ ನಡೆದಿದ್ದರೂ, ಪ್ರಕರಣ ತನಿಖೆಯೂ 6 ವರ್ಷಗಳ ವರೆಗೆ ನಡೆದಿದೆ.
ಇದನ್ನೂ ಓದಿ: ಹಳ್ಳಿಯಿಂದ ಯುಕೆಗೆ ಬಂದ ಅಪ್ಪ-ಅಮ್ಮ: ಇದು ನನ್ನ ಕನಸು ಎಂದ ಮಗ
ಕೋರ್ಟ್ 2021ರಲ್ಲಿ ಮಗುವಿನ ವಿಮಾದ ಜತೆಗೆ ಟ್ರಕ್ ಮಾಲೀಕ ಹಾಗೂ ಡ್ರೈವರ್ ಇಬ್ಬರು ಕೂಡ ಜಾಂಗ್ಗೆ ಹಣವನ್ನು ನೀಡಬೇಕು ಎಂದು ಹೇಳಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಟ್ರಕ್ ಡ್ರೈವರ್ ಪೊಲೀಸರ ಮುಂದೆ ನಿಜ ಒಪ್ಪಿಕೊಂಡಿದ್ದಾನೆ. ನನಗೆ ಜಾಂಗ್ ಈ ಕೆಲಸ ಮಾಡಲು ಹೇಳಿದ್ದು, ಅವರು ಪ್ರತ್ಯಕ್ಷವಾಗಿ ಈ ಕೃತ್ಯದಲ್ಲಿ ಭಾಗಿಯಾಗದಿದ್ದರು, ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾನೆ. ಪೊಲೀಸರು ಟ್ರಕ್ ಡ್ರೈವರ್ ಹೇಳಿಕೆ ಆಧಾರದ ಮೇಲೆ ಜಾಂಗ್ ಅವರನ್ನು ತನಿಖೆಗೆ ಒಳಪಡಿಸಿದರು. ತನಿಖೆಯ ವೇಳೆ ಜಾಂಗ್ ಎಲ್ಲವನ್ನು ಬಾಯಿ ಬಿಟ್ಟಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




