AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದು ಕನಸಿನ ಮಾತು. ಇಲ್ಲಿ 2ಬಿಹೆಚ್‌ಕೆ ಮನೆಯ ಮೌಲ್ಯ ಒಂದು ಕೋಟಿ ರೂ ಆಗಿದೆಯಂತೆ. ಈ ನಡುವೆ ಹೆಚ್ಚುತ್ತಿರುವ ಬಾಡಿಗೆ ದರ ಹಾಗೂ ರಿಯಲ್ ಎಸ್ಟೇಟ್ ಬೆಲೆಯ ಬಗ್ಗೆ ರೆಡ್ಡಿಟ್ ಬಳಕೆದಾರರೊಬ್ಬರು ಕಳವಳ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
| Updated By: Digi Tech Desk|

Updated on:Nov 14, 2025 | 7:37 PM

Share

ಬೆಂಗಳೂರು, ನವೆಂಬರ್ 14: ಈಗಿನ ದುಬಾರಿ ದುನಿಯಾದಲ್ಲಿ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಸ್ವಂತ ಮನೆ ಖರೀದಿ ಮಾಡೋದು ಹೇಳಿದ್ದಷ್ಟು ಸುಲಭವಲ್ಲ. ದುಡಿದ ಹಣವನ್ನೆಲ್ಲವನ್ನು ಸಾಲ ಕಟ್ಟೋದ್ರಲ್ಲಿಯೇ ವ್ಯಯಿಸಬೇಕಾಗುತ್ತದೆ. ಹೌದು, ಸ್ವಂತ ಮನೆ ಖರೀದಿಸಬೇಕೆಂದರೆ ಕೋಟಿಗಟ್ಟಲೇ ಹಣ ಕೈಯಲ್ಲಿ ಇರಬೇಕು. ಬೆಂಗಳೂರಿನ ವ್ಯಕ್ತಿಯೊಬ್ಬರಿಗೂ ಇದೇ ರೀತಿ ಅನುಭವವಾಗಿದೆ.  ರಿಯಲ್ ಎಸ್ಟೇಟ್ (real estate) ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 2ಬಿಹೆಚ್‌ಕೆ ಮನೆಯ ಮೌಲ್ಯ ಒಂದು ಕೋಟಿ ರೂ ಆಗಿದೆ ಎಂದು ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದ ಬಳಕೆದಾರರಿಗೂ ಶಾಕ್ ಆಗಿದೆ.

r/indianrealestate ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೇಗೆ ಬೆಳೆಯುತ್ತಿದೆ ಹಾಗೂ ಮನೆಗಳು ಎಷ್ಟು ದುಬಾರಿಯಾಗಿವೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ, ನಾನು ಸುಮಾರು 6 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಸಂಪೂರ್ಣ ರಿಯಲ್ ಎಸ್ಟೇಟ್ ಪರಿಸ್ಥಿತಿಯ ಬಗ್ಗೆ ನನಗೆ ಸ್ವಲ್ಪ ಬೇಸರವಾಗಿದೆ. ಎಲ್ಲಿ ನೋಡಿದರೂ ಮನೆಯ ಬೆಲೆಗಳು ಹುಚ್ಚುತನದಂತೆ ಕಾಣುತ್ತವೆ, ವೈಟ್‌ಫೀಲ್ಡ್, ಸರ್ಜಾಪುರ, ಅಥವಾ ಯಲಹಂಕದಂತಹ ಪ್ರದೇಶಗಳಲ್ಲಿ 2 ಬಿಎಚ್‌ಕೆ ಮನೆಗಳ ಮೌಲ್ಯ 1 ಕೋಟಿ ರೂಗಿಂತಲೂ ಹೆಚ್ಚಿವೆ. ನೋಂದಣಿ ಮತ್ತು ಒಳಾಂಗಣಕ್ಕೂ ಮುಂಚೆಯೇ ಅಷ್ಟು ಇದೆ. ಕೋವಿಡ್ ನಂತರ ಬಾಡಿಗೆ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Is Bangalore real estate actually worth it anymore? byu/The_Ceyone inindianrealestate

ಬೆಂಗಳೂರು ಇನ್ನೂ ಐಟಿ ಉದ್ಯೋಗಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಎಂದು ನನಗೆ ಅರ್ಥವಾಗಿದೆ, ಆದರೆ ಈ ಮಟ್ಟದ ಮೆಚ್ಚುಗೆ ಸುಸ್ಥಿರವಾಗಿದೆಯೇ? ಅಥವಾ ನಾವು ಶೀಘ್ರದಲ್ಲೇ ತಮ್ಮನ್ನು ತಾವೇ ಸರಿಪಡಿಸಿಕೊಳ್ಳುವ ಗುಳ್ಳೆಯ ಮೇಲೆ ಸವಾರಿ ಮಾಡುತ್ತಿದ್ದೇವೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಖರೀದಿಸಿದ ಜನರಿಂದ ಕೇಳಲು ಇಷ್ಟಪಡುತ್ತೇನೆ. ನಿಮ್ಮ ನಿರ್ಧಾರದಿಂದ ನೀವು ಸಂತೋಷವಾಗಿದ್ದೀರಾ? ಅಥವಾ ಈಗ ಬಾಡಿಗೆಗೆ ಪಡೆದು ಬೇರೆಡೆ ಹೂಡಿಕೆ ಮಾಡುವುದು ಉತ್ತಮ ಎಂದು ನೀವು ಭಾವಿಸುತ್ತೀರಾ? ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ 18 ಕಿ.ಮೀ ಪ್ರಯಾಣವು ಮುಂಬೈನ 120 ಕಿ.ಮೀ ಪ್ರಯಾಣಕ್ಕೆ ಸಮ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಬೆಂಗಳೂರಿಗ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ದರವು ನಿಮ್ಮ ಅವಶ್ಯಕತೆಯನ್ನು ಅವಲಂಬಿಸಿದೆ. ನೀವು ಬೆಂಗಳೂರಿನಲ್ಲಿಯೇ ಇದ್ದು ನಿವೃತ್ತಿ ಹೊಂದಲು ಯೋಜಿಸುತ್ತಿದ್ದೀರಾ?. ಹೌದು ಎಂದಾದರೆ, ಬೆಲೆಗಳು ಹೆಚ್ಚುತ್ತಲೇ ಇರುತ್ತವೆ, ಬಹುಶಃ ಅಷ್ಟು ವೇಗವಾಗಿ ಅಲ್ಲ. ಆದ್ದರಿಂದ ನಿಮಗೆ ಸಾಧ್ಯವಾದರೆ ಖರೀದಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಮನೆ ಖರೀದಿಸುವುದು ದುಬಾರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಇಲ್ಲಿ ಜನರು ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ನಾನು ಈಗಾಗಲೇ ನೋಡಬಲ್ಲೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Fri, 14 November 25