Viral : ಅಮ್ಮಾ ಹೋಗ್ತಿಯಾ, ಕೆಲಸಕ್ಕೆ ಹೊರಟ ಅಮ್ಮನನ್ನೇ ನೋಡುತ್ತಾ ಅಳುತ್ತಿರುವ ಪುಟಾಣಿ ಕಂದಮ್ಮ
ಇಂದಿನ ದುಬಾರಿ ದುನಿಯಾದಲ್ಲಿ ಗಂಡ ಹೆಂಡತಿಯರಿಬ್ಬರೂ ದುಡಿದರೂ ಕೂಡ ಮನೆ ನಿರ್ವಹಣೆ ಹಾಗೂ ಜೀವನ ನಡೆಸುವುದು ತುಂಬಾನೇ ಕಷ್ಟಕರ. ಹೀಗಾಗಿ ಹೆಚ್ಚಿನ ಪೋಷಕರು ಪುಟಾಣಿ ಮಕ್ಕಳನ್ನು ಕೆಲಸದಾಕೆಯಲ್ಲಿ ಕೈಯಲ್ಲಿ ನೋಡಿಕೊಳ್ಳಲು ಹೇಳಿಯೋ ಅಥವಾ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಕಂದಮ್ಮ ತನ್ನನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿರುವ ತಾಯಿಯನ್ನು ಕಂಡು ಕಣ್ಣೀರಿಟ್ಟಿದ್ದು, ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಪುಟ್ಟ ಮಗು (kids) ವಿಗೆ ತಾಯಿ (mother) ಯ ಆರೈಕೆ ಬಹಳ ಮುಖ್ಯ. ಆದರೆ ಹೀಗಿನ ಕಾಲದಲ್ಲಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ತನ್ನ ಪುಟಾಣಿ ಕಂದಮ್ಮನ ಜೊತೆಗೆ ಕಳೆಯಲು ಸಮಯವಿಲ್ಲ. ಹೀಗಾಗಿ ಮಕ್ಕಳು ಮನೆ ಕೆಲಸದಾಕೆಯ ಪ್ರೀತಿ, ಆರೈಕೆಯಲ್ಲಿ ಬೆಳೆಯುವುದೇ ಹೆಚ್ಚು. ಎಷ್ಟೋ ಮಕ್ಕಳು ತನ್ನ ತಾಯಿಯ ಪ್ರೀತಿಯಿಂದ ವಂಚಿತರಾಗುತ್ತಿದೆ. ಕೆಲಸ (job) ಕ್ಕೆ ಹೊರಟು ನಿಂತ ತಾಯಿಯನ್ನು ಕಂಡು ಪುಟಾಣಿ ಮಕ್ಕಳು ತಾನು ಬರುತ್ತೇನೆ. ಹೋಗಬೇಡ ಎಂದು ಹಠ ಮಾಡುತ್ತಿದೆ. ವೈರಲ್ ಆಗಿರುವ ವಿಡಿಯೋ (video) ದಲ್ಲಿ ಪುಟಾಣಿಯೊಂದು ಕೆಲಸಕ್ಕೆ ಹೊರಟು ನಿಂತಿದ್ದ ತಾಯಿಯನ್ನು ಕಂಡು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಅಳುತ್ತಿದ್ದು, ಈ ವಿಡಿಯೋವೊಂದು ಹೃದಯಕ್ಕೆ ಹತ್ತಿರವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು gyanclasss ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಕಿಟಕಿಯಲ್ಲಿ ಕೆಲಸಕ್ಕೆ ಹೊರಟ ತಾಯಿಯನ್ನು ನೋಡುತ್ತಾ ಅಮ್ಮ ಅಮ್ಮ ಎಂದು ಅಳುತ್ತಿದೆ. ಅಮ್ಮ ಕಾಣಿಸದೆ ಇದ್ದಾಗ ಕಿಟಕಿಯಲ್ಲಿ ಅತ್ತಿಂದ ಇತ್ತ ನೋಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ : ಅಮುಲ್ ಗರ್ಲ್, ಪಾರ್ಲೆಜಿ ಹುಡುಗಿಗೆ ಜೀವ ಕಳೆ ತುಂಬಿದ ಎಐ; ವೈರಲ್ ಆಯ್ತು ಮುದ್ದಾದ ವಿಡಿಯೋ
ವೈರಲ್ ವಿಡಿಯೋ ಇಲ್ಲಿದೆ ನೋಡಿ :
View this post on Instagram
ಬಳಕೆದಾರರು, ‘ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ತಾಯಂದಿರಿಗೆ ತಮ್ಮ ಈ ಆಯ್ಕೆಯೂ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ತಿಳಿಯುವುದಿಲ್ಲ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರ, ತನ್ನ ಕಂದಮ್ಮ ಈ ರೀತಿ ಅಳುವುದನ್ನು ಯಾವ ತಾಯಿ ಕೂಡ ಸಹಿಸಿಕೊಳ್ಳುವುದಿಲ್ಲ. ಆದರೆ ತನ್ನ ಕುಟುಂಬಕ್ಕಾಗಿ ಕೆಲಸ ಮಾಡುವುದು ಆಕೆಗೆ ಅನಿವಾರ್ಯವಾಗಿರುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಅಮ್ಮನಿಗೆ ಇರುವ ಶಕ್ತಿ ಅಂತಹದ್ದು’ ಎಂದಿದ್ದಾರೆ. ಇನ್ನು, ಕೆಲವರು ‘ಈ ವಿಡಿಯೋವು ನಿಜಕ್ಕೂ ಹೃದಯಕ್ಕೆ ಹತ್ತಿರವಾಗಿದೆ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ