AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೈವೇಯಲ್ಲಿ ವೇಗವಾಗಿ ಬಂದು 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್

ಬೆಂಗಳೂರು ಹೈವೇಯಲ್ಲಿ ವೇಗವಾಗಿ ಬಂದು 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on:Apr 14, 2025 | 10:43 PM

ಬೆಂಗಳೂರಿನ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ನೀರಿನ ಟ್ಯಾಂಕರ್ 3 ಬಾರಿ ಪಲ್ಟಿಯಾಗಿ ಉರುಳಿ ಬಿದ್ದಿದೆ. ಕಾರಿನ ಹಿಂಭಾಗದ ಡ್ಯಾಶ್ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಾಲಿವುಡ್ ಸಿನಿಮಾದ ಸಾಹಸ ದೃಶ್ಯವನ್ನು ನೆನಪಿಸುತ್ತಿದೆ. ಆದರೆ ಇದು ಸಿನಿಮಾ ದೃಶ್ಯವಲ್ಲ, ಆದರೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ. ಮತ್ತೊಂದು ಟ್ರಕ್ ಅನ್ನು ಹಿಂದಿಕ್ಕುವಾಗ ನೀರಿನ ಟ್ಯಾಂಕರ್ ಸ್ಕಿಡ್ ಆಗುವುದನ್ನು ವೀಡಿಯೊದಲ್ಲಿ ಕಾಣಬಹುದು.

ಬೆಂಗಳೂರು, ಏಪ್ರಿಲ್ 14: ಇಂದು (ಏಪ್ರಿಲ್ 14) ಮುಂಜಾನೆ ಬೆಂಗಳೂರಿನ (Bengaluru) ದೊಮ್ಮಸಂದ್ರ-ವರ್ತೂರು ಮುಖ್ಯ ರಸ್ತೆಯಲ್ಲಿ ನೀರಿನ ಟ್ಯಾಂಕರ್ ಪಲ್ಟಿಯಾಗಿ, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಈ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಾಲಿವುಡ್ ಸಿನಿಮಾದ ಸಾಹಸ ದೃಶ್ಯವನ್ನು ನೆಪಿಸುತ್ತಿದೆ. ಈ ಘಟನೆಯ ವಿಡಿಯೋವನ್ನು “@abhisheksingh22” ಎಂಬ ಎಕ್ಸ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ವೀಡಿಯೊ ತೋರಿಸುತ್ತದೆ. ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಅಳವಡಿಸಲಾದ ಹಿಂಭಾಗದ ಡ್ಯಾಶ್ ಕ್ಯಾಮ್‌ನಲ್ಲಿ ಈ ವಿಡಿಯೋ ಸೆರೆಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 14, 2025 10:41 PM