AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ

ಸುಷ್ಮಾ ಚಕ್ರೆ
|

Updated on: Apr 15, 2025 | 4:04 PM

ಇಡಿ ಜಾರಿ ಮಾಡಿರುವ ಸಮನ್ಸ್ ಅನ್ನು "ಬಿಜೆಪಿಯ ರಾಜಕೀಯ ದ್ವೇಷ" ಎಂದು ಕರೆದ ರಾಬರ್ಟ್ ವಾದ್ರಾ ಅವರನ್ನು ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಗಿದೆ. "ಅವರು ತನಿಖಾ ಸಂಸ್ಥೆಗಳ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನನಗೆ ಯಾವುದೇ ಭಯವಿಲ್ಲ. ನನಗೆ ಮರೆಮಾಡಲು ಏನೂ ಇಲ್ಲ" ಎಂದು 56 ವರ್ಷದ ಉದ್ಯಮಿ ರಾಬರ್ಟ್ ವಾದ್ರಾ ಕಾಂಗ್ರೆಸ್ ಬೆಂಬಲಿಗರ ಜೊತೆ ಮೆರವಣಿಗೆ ನಡೆಸಿದರು.

ನವದೆಹಲಿ, ಏಪ್ರಿಲ್ 15: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರು ಎರಡನೇ ಸಮನ್ಸ್ ಪಡೆದ ನಂತರ ಇಂದು ಬೆಳಿಗ್ಗೆ ಜಾರಿ ನಿರ್ದೇಶನಾಲಯದ (ಇಡಿ) ದೆಹಲಿ ಕಚೇರಿಗೆ ರಸ್ತೆಯಲ್ಲೇ ನಡೆದುಕೊಂಡು ಆಗಮಿಸಿದ್ದಾರೆ. ಮೊದಲನೆಯ ಸಮನ್ಸ್ ಏಪ್ರಿಲ್ 8ರಂದು ಜಾರಿಯಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ. ಇಡಿ ಸಮನ್ಸ್ ಅನ್ನು “ಬಿಜೆಪಿಯ ರಾಜಕೀಯ ಪಿತೂರಿ” ಎಂದು ಟೀಕಿಸಿದ ರಾಬರ್ಟ್ ವಾದ್ರಾ (Robert Vadra) ಅವರನ್ನು ಹರಿಯಾಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಗುವುದು. “ನಾನು ಜನರ ಪರವಾಗಿ ಧ್ವನಿ ಎತ್ತಿದಾಗಲೆಲ್ಲಾ ಅವರು ನನ್ನನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ನನಗೆ ಮುಚ್ಚಿಡಲು ಏನೂ ಇಲ್ಲ. ಅವರು ಏನು ಬೇಕಾದರೂ ಕೇಳಬಹುದು. ನಾನು ಅವರಿಗೆ ಉತ್ತರಿಸುತ್ತೇನೆ” ಎಂದು ರಾಬರ್ಟ್ ವಾದ್ರಾ ಇಡಿ ಕಚೇರಿಗೆ ಹೋಗುವ ಮಾರ್ಗಮಧ್ಯೆ ವರದಿಗಾರರಿಗೆ ತಿಳಿಸಿದ್ದಾರೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ