ಇದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ: ಕೇಂದ್ರದ ವಿರುದ್ಧ ರಾಬರ್ಟ್ ವಾದ್ರಾ ವಾಗ್ದಾಳಿ
ಲೋಕಸಭಾ ಚುನಾವಣಾ ಪ್ರಚಾರದ ನಡುವೆಯೇ ರಾಬರ್ಟ್ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು ಎಂದು ಹೇಳಿದರು. ಚುನಾವಣಾ ಪ್ರಣಾಳಿಕೆ ಅದು ಸಣ್ಣದೇ ಆಗಿರಲಿ ಅಥವಾ ಯಾವುದೇ ಆಗಿರಲಿ, ನಾವು ಅದಕ್ಕೆ ಹೆಚ್ಚು ಒತ್ತು ನೀಡಬಾರದು. ನನ್ನ ಅಭಿಪ್ರಾಯದಲ್ಲಿ, ಇದರಿಂದ ಅವರಿಗೆ ಪ್ರಯೋಜನವಾಗುವುದಿಲ್ಲ. ಪ್ರಣಾಳಿಕೆಗಳಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಬೇಕು ಎಂದು ಅವರು ಹೇಳಿದರು.
ನವದೆಹಲಿ, ಏಪ್ರಿಲ್ 9: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಪತಿ ರಾಬರ್ಟ್ ವಾದ್ರಾ (Robert Vadra) ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ರಾಜ್ಯಗಳಲ್ಲಿ ಸರಕಾರಗಳನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಗಳಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ಯಾಕೆಂದರೆ ಜನ ತಮ್ಮ ನಾಯಕರು ಅಭಿವೃದ್ಧಿ ಬಗ್ಗೆ ಮಾತನಾಡಲಿ, ಅಭಿವೃದ್ಧಿ ಮಾಡಲಿ ಎಂಬುದನ್ನಷ್ಟೇ ಬಯಸುತ್ತಾರೆ. ಕ್ಷುಲ್ಲಕ ವಿಚಾರಗಳು ಅವರಿಗೆ ಬೇಕಿಲ್ಲ ಎಂದು ವಾದ್ರಾ ಹೇಳಿದ್ದಾರೆ.
ನಮ್ಮ ಸರ್ಕಾರಗಳು ಇರುವಲ್ಲೆಲ್ಲಾ ಅವರು ಅವುಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೆ. ಜನರು ಇದನ್ನು ಗಮನಿಸುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಯಾಕೆ ನಡೆಯುತ್ತಿದೆ ಎಂದುಬು ಜನರಿಗೆ ತಿಳಿದಿದೆ. ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವುದನ್ನು ಜನರು ಮೆಚ್ಚುವುದಿಲ್ಲ ಎಂದು ವಾದ್ರಾ ಹೇಳಿದ್ದಾರೆ.
ಒಂದು ಪಕ್ಷ ಚುನಾವಣೆಯಲ್ಲಿ ಗೆದ್ದಿದ್ದರೆ, ಜನರು ಒಂದು ಪಕ್ಷಕ್ಕೆ ಮತ ಹಾಕಿದ್ದರೆ, ಅದರ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು. ಕಾಂಗ್ರೆಸ್ ಅಥವಾ ಇತರ ಯಾವುದೇ ವಿರೋಧ ಪಕ್ಷಗಳು ಸರ್ಕಾರವನ್ನು ರಚಿಸಿದಾಗ ಆ ಪಕ್ಷದ ನಾಯಕರನ್ನು ಬಂಧಿಸಲಾಗುತ್ತದೆ. ಇಲ್ಲವೇ ಸಂಸತ್ತಿನಿಂದ ತೆಗೆದುಹಾಕಲಾಗುತ್ತದೆ ಅಥವಾ ಅವರ ವಿರುದ್ಧ ಆರೋಪಗಳನ್ನು ಮಾಡಲಾಗುತ್ತದೆ. ಈ ರೀತಿಯ ರಾಜಕೀಯ ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರ ಎಂದು ‘ಐಎಎನ್‌ಎಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಾದ್ರಾ ಟೀಕಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯ ಮೇಲೆ ಆಡಳಿತ ಪಕ್ಷದ ವಾಗ್ದಾಳಿಯನ್ನು ಪ್ರಶ್ನಿಸಿದ ವಾದ್ರಾ, ಜನರು ತಮ್ಮ ನಾಯಕರು ಅಭಿವೃದ್ಧಿ ಮತ್ತು ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಮಾತನಾಡಬೇಕೆಂದು ಬಯಸುತ್ತಾರೆ. ಪ್ರಣಾಳಿಕೆಯನ್ನು ಕೇಂದ್ರೀಕರಿಸಿ ವಾಗ್ದಾಳಿ ನಡೆಸುವುದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಸ್ಲಿಂ ಲೀಗ್ ಚಿಂತನೆಯಿಂದ ಕೂಡಿದೆ ಎಂದು ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ಪುರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೋಕಸಭೆ ಚುನಾವಣೆಯಲ್ಲಿ 400 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಆ ಗುರಿಯನ್ನು ಸಾಧಿಸಲು ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ವಾದ್ರಾ ಆರೋಪಿಸಿದ್ದಾರೆ.
ರಾಬರ್ಟ್ ವಾದ್ರಾ ಸಂದರ್ಶನದ ವಿಡಿಯೋ ತುಣುಕು
IANS Exclusive
”…If Congress or any other party is in power, their leaders are deliberately imprisoned, and they are expelled from parliament…. this is called dictatorship, not democracy, …We should talk about progress… Jo koi chota sa manifesto hai, jo bhi manifesto… pic.twitter.com/eUUlS72tOI
— IANS (@ians_india) April 8, 2024
ಹಲವಾರು ಅಸಂಗತತೆಗಳ ನಡುವೆಯೂ ಅವರು 400 ಸ್ಥಾನ ಗೆಲ್ಲುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಅದು ಇವಿಎಂ ಸಮಸ್ಯೆಯಾಗಿರಲಿ ಅಥವಾ ಇತರ ಪಕ್ಷಗಳ ನಾಯಕರನ್ನು ಸೆಳೆಯುವುದಾಗಿರಲಿ, ಕೆಲವು ಗೊಂದಲಗಳನ್ನು ಸೃಷ್ಟಿಸಿದರೆ ಮಾತ್ರ ಅವರು 400 ರ ಗಡಿ ದಾಟುತ್ತಾರೆ ಎಂಬುದನ್ನು ಜನ ಅರಿತುಕೊಂಡಿದ್ದಾರೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಾದ್ರಾ ಹೇಳಿದ್ದಾರೆ.
ಚುನಾವಣೆ ಸ್ಪರ್ಧಿಸುತ್ತಾರಾ ವಾದ್ರಾ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಠಿಯಿಂದ ಅಮೇಠಿಯಿಂದ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಾದ್ರಾ, ಈ ಬಗ್ಗೆ ನಾನೇನೂ ಹೇಳಲಾರೆ. ರಾಹುಲ್ ಅವರೇ ಹೇಳಲಿದ್ದಾರೆ. ಈ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಈ ಕುಟುಂಬ ನಿರ್ಧರಿಸಲಿದೆ. ನಾನು ನನ್ನ ಬಗ್ಗೆ ಮಾತ್ರ ಹೇಳಬಲ್ಲೆ ಎಂದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಲೀಗ್ ಚಿಂತನೆಗಳನ್ನು ಬಿಂಬಿಸುವ ಕಾಂಗ್ರೆಸ್ ಪ್ರಣಾಳಿಕೆ: ಸಹರಾನ್‌ಪುರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಜನರು ಬಯಸುತ್ತಿದ್ದಾರೆ. ಮೈತ್ರಿಕೂಟದ ಇತರ ಪಕ್ಷಗಳವರೂ ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ.
ಬಿಜೆಪಿ ನಾಯಕಿ ಹಾಗೂ ಸಂಸದೆ ಸ್ಮೃತಿ ಇರಾನಿ ಅಭಿವೃದ್ಧಿ ಮಾಡಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಹೀಗಾಗಿ ಗಾಂಧಿ ಕುಟುಂಬದ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಅಮೇಠಿಯ ಜನರು ಬಯಸುತ್ತಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 am, Tue, 9 April 24