Hafiz’s Hospitalization: ಮುಂಬೈ ದಾಳಿ ಮಾಸ್ಟರ್‌ಮೈಂಡ್ ಉಗ್ರ ಹಫೀಝ್ ಸ್ಥಿತಿಗೆ ಭಾರತವೇ ಕಾರಣ? ಟ್ರೆಂಡ್ ಆಗುತ್ತಿದೆ #HafizSaeed
ಎಲ್‌ಇಟಿ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಆಸ್ಪತ್ರೆ ಸೇರಲು ಭಾರತವೇ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಎಕ್ಸ್ನಲ್ಲಿ #HafizSaeed ಟ್ರೆಂಡಿಂಗ್ ಆಗಿದ್ದು, ಬಳಕೆದಾರರು ಈ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಸ್ಥಿತಿಗೆ ಆತನ ಕರ್ಮ ಫಲವೇ ಕಾರಣ ಎಂದು ಹೇಳಿದ್ದಾರೆ.
ಭಾರತಕ್ಕೆ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸಯೀದ್ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರಗಾಮಿ ಸಂಘಟನೆಯ ಹಿಂದಿನ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಪ್ರಸ್ತುತ ನಿಗೂಢ ಅನಾರೋಗ್ಯದಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದಾನೆ ಎಂದು ಹೇಳಲಾಗಿದೆ. ಇದೀಗ ಇತನ ಅನಾರೋಗ್ಯಕ್ಕೆ ಭಾರತವೇ ಕಾರಣ, ಅದರಲ್ಲೂ ಮೋದಿಯೇ ಕಾರಣ ಎಂಬ ಮಾತುಗಳು ಬರುತ್ತಿದೆ. ಇತ್ತೀಚೆಗೆ ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ನೀಡಿದ ವರದಿ ಈ ಮಾತಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಇದು ಟ್ರೆಂಡ್ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ(Pakistan)ದಲ್ಲಿ ಅಡಗಿರುವ ಭಾರತದ ಶತ್ರುಗಳನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ (RAW) ಕೈವಾಡವಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ವರದಿ ಮಾಡಿತ್ತು. ಈ ವರದಿಯನ್ನು ಭಾರತ ನಿರಾಕರಿಸಿದೆ.
ಇದೀಗ ಎಲ್‌ಇಟಿ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಆಸ್ಪತ್ರೆ ಸೇರಲು ಭಾರತವೇ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಎಕ್ಸ್ನಲ್ಲಿ #HafizSaeed ಟ್ರೆಂಡಿಂಗ್ ಆಗಿದ್ದು, ಬಳಕೆದಾರರು ಈ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಈ ಸ್ಥಿತಿಗೆ ಆತನ ಕರ್ಮ ಫಲವೇ ಕಾರಣ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ವಾಟೆಂಡ್ ಆಗಿರುವ ಉಗ್ರ ಸರಣಿ ಹತ್ಯೆಯನ್ನು ಭಾರತವೇ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಭಾರತದ ನಿರಾಕರಿಸಿದೆ. ಹಾಗೂ ಇದು ಪ್ರಚಾರ ಸಲುವಾಗಿ ಮಾಡುತ್ತಿದೆ ಎಂದು ಭಾರತ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಹತ್ಯೆಗೂ ಮೋದಿಗೂ ಸಂಬಂಧವಿದೆ ಎಂದ ಬ್ರಿಟಿಷ್ ಪತ್ರಿಕೆ, ಭಾರತ ಪ್ರತಿಕ್ರಿಯಿಸಿದ್ದು ಹೀಗೆ
ಪಾಕಿಸ್ತಾನವು ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಕಾನೂನುಬಾಹಿರ ದೇಶೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಭಾರತ ಮತ್ತು ಇತರ ಹಲವು ದೇಶಗಳು ಪಾಕಿಸ್ತಾನವನ್ನು ತನ್ನದೇ ಆದ ಭಯೋತ್ಪಾದನೆ ಮತ್ತು ಹಿಂಸಾಚಾರದ ಸಂಸ್ಕೃತಿಗೆ ಬೆಂಬಲ ನೀಡುತ್ತದೆ ಜನವರಿಯಲ್ಲಿ ಬ್ರೀಫಿಂಗ್ ಹೇಳಿತ್ತು. ಪಾಕಿಸ್ತಾನದ ಉನ್ನತ ರಾಜತಾಂತ್ರಿಕರು ಈ ಹತ್ಯೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ “ವಿಶ್ವಾಸಾರ್ಹ ಪುರಾವೆಗಳು” ಇವೆ ಎಂದು ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ಸೈರಸ್ ಸಜ್ಜದ್ ಖಾಜಿ ಜನವರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ