ಉತ್ತರಾಖಂಡ: ಗುರುದ್ವಾರ ಮುಖ್ಯಸ್ಥರ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು
ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿನ ನಾನಕಮಟ್ಟ ಸಾಹಿಬ್ ಗುರುದ್ವಾರದ ಮುಖ್ಯಸ್ಥರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿನ ನಾನಕಮಟ್ಟ ಸಾಹಿಬ್ ಗುರುದ್ವಾರದ ಮುಖ್ಯಸ್ಥರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಮಾರ್ಚ್ 28ರಂದು ದೇಗುಲದ ಆವರಣದಲ್ಲಿ ಬೈಕ್ ನಲ್ಲಿ ಬಂದ ಸರಬ್ಜಿತ್ ಸಿಂಗ್ ಮತ್ತು ಅಮರ್ ಜಿತ್ ಸಿಂಗ್ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ನಾನಕಮಟ್ಟಾ ಸಾಹಿಬ್ ಗುರುದ್ವಾರದ ಡೇರಾ ಕರ್ ಸೇವಾ ಮುಖ್ಯಸ್ಥ ಕುರ್ಚಿಯಲ್ಲಿ ಕುಳಿತಿದ್ದಾಗ ಶೂಟರ್ ರೈಫಲ್‌ನಿಂದ ಗುಂಡು ಹಾರಿಸಿದ್ದ.
ಅಮರ್‌ಜಿತ್ ಸಿಂಗ್ ಅವರ ಸಾವಿನ ಕುರಿತು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಎಎನ್‌ಐಗೆ ಹೇಳಿಕೆ ನೀಡಿದ್ದು, ಅವರ ಸಹಚರರು ಪರಾರಿಯಾಗಿದ್ದಾರೆ ಮತ್ತು ಅಧಿಕಾರಿಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.
ಉತ್ತರಾಖಂಡದ ಪೊಲೀಸರು ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಇಬ್ಬರೂ ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.
ಹರಿದ್ವಾರದ ಕಲಿಯಾರ್ ರಸ್ತೆ ಮತ್ತು ಭಗವಾನ್‌ಪುರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪರ್ಮಿಂದರ್ ದೋವಲ್ ಹೇಳಿದ್ದಾರೆ. ಅಮರ್ಜಿತ್ ಸಿಂಗ್ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಉತ್ತರಾಖಂಡ್: ಗುರುದ್ವಾರದೊಳಗೆ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ
ಬಾಬಾ ತಾರ್ಸೆಮ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು . ಎಫ್‌ಐಆರ್‌ನಲ್ಲಿ ಹೆಸರಿಸಲಾದವರಲ್ಲಿ ಇಬ್ಬರು ದಾಳಿಕೋರರು, ಸರಬ್ಜಿತ್ ಸಿಂಗ್ ಮತ್ತು ಅಮರ್ಜಿತ್ ಸಿಂಗ್, ನಾನಕಮಟ್ಟಾ ಗುರುದ್ವಾರ ಪ್ರಬಂಧಕ್ ಸಮಿತಿಯ ಮುಖ್ಯಸ್ಥ ಐಎಎಸ್ ಅಧಿಕಾರಿ ಹರ್ಬನ್ಸ್ ಸಿಂಗ್ ಚುಗ್, ಬಾಬಾ ಅನುಪ್ ಸಿಂಗ್ ಮತ್ತು ಪ್ರಾದೇಶಿಕ ಸಿಖ್ ಸಂಘಟನೆಯ ಉಪಾಧ್ಯಕ್ಷ ಪ್ರೀತಮ್ ಸಿಂಗ್ ಸಂಧು ಸೇರಿದ್ದಾರೆ.
ಸರಬ್ಜಿತ್ ಸಿಂಗ್ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು , ಗುರು ಗ್ರಂಥ ಸಾಹಿಬ್ ಅನ್ನು ಕೈ ತೊಳೆಯದೆ ಮುಟ್ಟಿದ ವ್ಯಕ್ತಿಯ ಕೈಯನ್ನು ಕತ್ತರಿಸಿದ್ದಕ್ಕಾಗಿ ಈ ಹಿಂದೆ ಬಂಧಿಸಲಾಗಿತ್ತು . ಪ್ರಕರಣದ ತನಿಖೆಗಾಗಿ ವಿಶೇಷ ಕಾರ್ಯಪಡೆ ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ