ಬಿಜೆಪಿ ನಾಯಕರು ಮೀಸಲಾತಿ ವಿರೋಧಿಗಳು, ಅವರು ಜಾತಿ ಗಣತಿಯನ್ನು ಒಪ್ಪಲ್ಲ: ಕೆಎನ್ ರಾಜಣ್ಣ
ಬಹಳ ವರ್ಷಗಳಿಂದ ಜನಗಣತಿಯೂ ನಡೆದಿಲ್ಲ, ಅದು ಕೊನೆ ಬಾರಿಗೆ ನಡೆದಾಗ ರಾಜ್ಯದ ಒಟ್ಟು ಜನಸಂಖ್ಯೆ ಐದೂವರೆ ಕೋಟಿಯಷ್ಟಿದ್ದಿರಬಹುದು, ಈಗ ಅದಕ್ಕೆ ಎರಡು ಕೋಟಿಗಳಷ್ಟು ಜನರ ಸೇಪರ್ಡೆಯಾಗಿದೆ, ಎಲ್ಲ ಸಸಮುದಾಯಗಳ ಬಗ್ಗೆ ಬೇಸಿಕ್ ದತ್ತಾಂಶ ಜಾತಿ ಗಣತಿಯ ಮೂಲಕ ಸಿಕ್ಕಿದೆ, ಅದನ್ನು ಆಧರಿಸಿಯೇ ತಮ್ಮ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ರಾಜಣ್ಣ ಹೇಳಿದರು.
ತುಮಕೂರು, ಏಪ್ರಿಲ್ 15: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಜಾತಿ ಗಣತಿ ವರದಿ ಕಸದ ಬುಟ್ಟಿಗೆ ಎಸೆಯಲು ಲಾಯಕ್ಕು ಎಂದು ಹೇಳಿರುವುಕ್ಕೆ ನಗರದ ತಮ್ಮ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಸಹಕಾರ ಸಚಿವ ಕೆಎನ್ ರಾಜಣ್ಣ, ಬಿಜೆಪಿ ನಾಯಕರು ಮೀಸಲಾತಿ ವಿರೋಧಿಗಳು, ಆದರೆ ಸುಮ್ಮನೆ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ, ತಿರಸ್ಕಾರಕ್ಕೆ ಕಾರಣ ಹೇಳಬೇಕು; ಹಾಗೆಯೇ, ವರದಿಯನ್ನು ಅಂಗೀಕರಿಸುವವರು ಯಾವ ಕಾರಣಕ್ಕೆ ಅಂಗೀಕೃತ ಅಂತ ಅಂತ ಸ್ಪಷ್ಟಪಡಿಸಬೇಕು ಎಂದರು. ಎಲ್ಲ ಅಡಿಪಾಯ ಮತ್ತು ಅಂಶಗಳನ್ನು ಪರಿಗಣಿಸಿ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ರಾಜಣ್ಣ ಹೇಳಿದರು.
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣವನ್ನು ಸಿಐಡಿ ತನಿಖೆ ಮಾಡ್ತಿರೋದ್ರಿಂದ ಹೇಳಿಕೆ ನೀಡುವುದು ಸರಿಯಲ್ಲ: ಕೆಎನ್ ರಾಜಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
